ಗಂಡಸರಿಗೆ ಕೇಳದ ಪ್ರಶ್ನೆ ಮಹಿಳೆಯರಿಗೆ ಕೇಳೋದು ಯಾಕೆ, ಡ್ರೆಸ್ ಸೆನ್ಸ್ ಬಗ್ಗೆ ರಕುಲ್ ಪ್ರೀತ್ ಮೈಂಡ್ ಬ್ಲೋಯಿಂಗ್ ಕೌಂಟರ್…..!

Follow Us :

ಬಹುಬೇಡಿಕೆ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಗ್ಲಾಮರ್‍ ಡೋಸ್ ದಿನೇ ದಿನೇ ಏರಿಸುತ್ತಲೇ ಇದ್ದಾರೆ. ಬಾಲಿವುಡ್ ಸಿನಿಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟ ಈಕೆ ಗ್ಲಾಮರ್‍ ಡೋಸ್ ಏರಿಸುತ್ತಲೇ ಇದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ.  ಇದೀಗ ಆಕೆ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಮದುವೆ ಇದೇ ಫೆ.21 ರಂದು ಗೋವಾದಲ್ಲಿ ಅದ್ದೂರಿಯಾಗಿ ನಡೆದಿದೆ. ಫೆ.19 ರಿಂದಲೇ ಮದುವೆ ಸಂಭ್ರಮ ಶುರುವಾಗಿತ್ತು. ದುಬಾರಿ ರೆಸಾರ್ಟ್‌ನಲ್ಲಿ ಈ ರಕುಲ್ ಹಾಗೂ ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ನಡೆಯಿತು. ಈ ಜೋಡಿ ಸುಮಾರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದು, ಸೋಷಿಯಲ್ ಮಿಡಿಯಾದಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೆ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಸುದ್ದಿ ಪ್ರಕಟಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಗೋವಾದಲ್ಲಿ ಸುಮಾರು 45ಎಕರೆ ಪ್ರದೇಶದಲ್ಲಿ ಐಟಿಸಿ ಗ್ರಾಂಡ್ ಗೋವಾ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆದಿತ್ತು. ಇನ್ನು ಮದುವೆಯಾದರೂ ಸಹ ರಕುಲ್ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೊಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆಯ ಡ್ರೆಸ್ಸಿಂಗ್ ಬಗ್ಗೆ ಕೆಲವೊಂದು ಟ್ರೋಲ್ ಗಳು ಬರುತ್ತಿದ್ದು, ಆ ಟ್ರೋಲ್ ಗಳಿಗೆ ರಕುಲ್ ಮೈಂಡ್ ಬ್ಲೊಯಿಂಗ್ ಕಾಮೆಂಟ್ ಮಾಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ರಕುಲ್ ಗೆ ಡ್ರೆಸ್ ಸೆನ್ಸ್ ಬಗ್ಗೆ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಮೈಂಡ್ ಬ್ಲೋಯಿಂಗ್ ಕೌಂಟರ್‍ ಕೊಟ್ಟಿದ್ದಾರೆ. ಮದುವೆಯಾದ ಮೇಲೆ ನನಗೆ ನಮ್ಮ ಮನೆಯಲ್ಲಿ ಡ್ರೆಸ್ಸಿಂಗ್ ಸ್ಟೈಲ್ ಬದಲಿಸಿಕೊ ಎಂದು ಹೇಳಿಲ್ಲ. ಆ ರೀತಿಯಲ್ಲಿ ಯಾರೂ ಹೇಳಲ್ಲ. ತವರು ಮನೆ, ಅತ್ತೆ ಮನೆ ಎರಡೂ ಕಡೆ ನನಗೆ ಇಷ್ಟಬಂದಂತೆ ಇರುತ್ತೇನೆ. ಅಷ್ಟು ಸ್ವತಂತ್ರ ನನಗೆ ಕೊಟ್ಟಿದ್ದಾರೆ. ಮದುವೆಯನ್ನು ನಮ್ಮ ಸಮಾಜವೇ ದೊಡ್ಡ ವಿಷಯ ಎಂಬಂತೆ ನೋಡುತ್ತೆ. ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂತಹ ಸಹಜ ಪ್ರಕ್ರಿಯೆ ಎಂದು ಭಾವಿಸಿದರೇ ಎಲ್ಲವೂ ಸರಿಹೋಗುತ್ತದೆ. ಅದೇ ರೀತಿ ಮದುವೆಯಾದ ಬಳಿಕ ಪುರುಷರನ್ನು ಡ್ರೆಸ್ಸಿಂಗ್ ಸ್ಟೈಲ್ ಬದಲಿಸಿಕೊಳ್ಳುವಂತೆ ಕೇಳೋಲ್ಲ, ಪುರುಷರಿಗೆ ಕೇಳದೇ ಇದ್ದಾಗ ಮಹಿಳೆಯರಿಗೆ ಯಾಕೆ ಕೇಳಬೇಕು, ಅವರ ಮೇಲೆ ಯಾಕೆ ಅಷ್ಟೊಂದು ಇಂಟ್ರಸ್ಟ್. ಕಾಲ ಬದಲಾಗಿದೆ. ಅವರಿಗೆ ಇಷ್ಟ ಬಂದಂತೆ ಅವರು ಇರುತ್ತಾರೆ, ಅವರಿಗೆ ಇಷ್ಟವಾದ ಬಟ್ಟೆಗಳನ್ನು ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.