News

ವಿದೇಶಕ್ಕೆ ಹೋಗಲು ಕಿಡ್ನಾಪ್ ಡ್ರಾಮಾ ಮಾಡಿದ ಖತರ್ನಾಕ್ ಪುತ್ರಿ, 30 ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು……!

ಹಣ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಳ್ಳಲು ಕೆಲವರು ಮಕ್ಕಳನ್ನು ಕಿಡ್ನಾಪ್ ಮಾಡಿ ಒತ್ತಾಯಿಸುವುದನ್ನು ನಾವು ನೋಡಿದ್ದೇವೆ.  ಇಲ್ಲೋರ್ವ ಯುವತಿ ಫಾರಿನ್ ಟ್ರಿಪ್ ಹೋಗಲು ತಾನೇ ಕಿಡ್ನಾಪ್ ಡ್ರಾಮಾ ಆಡಿದ್ದಾಳೆ. ಕಿಡ್ನಾಪ್ ಡ್ರಾಮಾ ಆಡಿ ಬರೊಬ್ಬರಿ 30 ಲಕ್ಷ ಬೇಡಿಕೆಯನ್ನು ತನ್ನ ತಂದೆಯ ಬಳಿಯಿಟ್ಟ ಘಟನೆ ನಡೆದಿದೆ.

ಮಧ್ಯಪ್ರದೇಶದ ಶಿವಪುರಿಯಿಂದ ರಾಷ್ಟ್ರೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ ಆಕಾಂಕ್ಷಿಯಾಗಿದ್ದ ಕಾವ್ಯಾ ಧಕಡ್ ಎಂಬಾಕೆಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು, ಈ ಸಂಬಂಧ ಕೆಲವೊಂದು ಪೊಟೋಗಳು ಸಹ ಹರಿದಾಡಿದ್ದವು. ಈ ಕುರಿತು ತನಿಖೆ ನಡೆಸಿದ ರಾಜಸ್ಥಾನ ಪೊಲೀಸರಿಗೆ ಕಿಡ್ನಾಪ್ ಹಿಂದಿನ ಅಸಲೀ ಸತ್ಯ ತಿಳಿದುಬಂದಿದೆ. ಯುವತಿಯನ್ನು ಯಾರು ಕಿಡ್ನಾಪ್ ಮಾಡಿಲ್ಲ, ವಿದೇಶಕ್‌ಎಕ ಹೋಗುವ ನಿಟ್ಟಿನಲ್ಲಿ ಆಕೆಯೇ ಕಿಡ್ನಾಪ್ ಪ್ಲಾನ್ ಮಾಡಿದ್ದಳಂತೆ. ಕಿಡ್ನಾಪ್ ನಾಟಕವಾಡಿ ತನ್ನ ತಂದೆಯಿಂದ 30 ಲಕ್ಷ ಹಣ ಕೇಳಲು ಆಕೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಪ್ಲಾನ್ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಇನ್ನೂ ಕಾವ್ಯಾ ಧಕಡ್ ನೀಟ್ ಪರೀಕ್ಷೆ ತಯಾರಿಗಾಗಿ ರಾಜಸ್ಥಾನದ ಕೋಟಾಗೆ ತನ್ನ ತಾಯಿಯೊಂದಿಗೆ ಪ್ರಯಾಣ ಬೆಳೆಸಿದ್ದಳು. ಬಳಿಕ ಕಾವ್ಯಾಳನ್ನು ಅಲ್ಲಿಯೇ ನಿಟ್ಟು ತಾಯಿ ಮತ್ತೆ ಊರಿಗೆ ವಾಪಸ್ಸಾಗಿದ್ದರು. ಕಾವ್ಯಾ ಕೇವಲ ಮೂರು ದಿನಗಳವರೆಗೆ ಮಾತ್ರ ಕೋಟಾದಲ್ಲಿದ್ದಳಂತೆ. ಬಳಿಕ ತನ್ನ ಸ್ನೇಹಿತರೊಂದಿಗೆ ಇಂದೋರ್‍ ಗೆ ತೆರಳಿದ್ದಾರೆ. ಇಂದೋರ್‍ ನಲ್ಲಿದ್ದ ತನ್ನ ಇಬ್ಬರು ಸ್ನೇಹಿತರೊಂದಿಗೆ ವಿದೇಶಿ ಪ್ರವಾಸ ಮಾಡುವ ಪ್ಲಾನ್ ಮಾಡಿದ್ದಾರೆ. ಆದರೆ ಈ ಪ್ರವಾಸ ಕೈಗೊಳ್ಳಲು ಆಕೆಯ ಬಳಿ ಹಣ ಇರಲಿಲ್ಲವಾದ್ದರಿಂದ ಕಾವ್ಯಾ ಹಾಗೂ ತನ್ನ ಸ್ನೇಹಿತರು ಕಿಡ್ನಾಪ್ ಡ್ರಾಮಾ ಆಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಕಾವ್ಯಾ ತನ್ನನ್ನು ತಾನೆ ಹಗ್ಗದಿಂದ ಕಟ್ಟಿಕೊಂಡ ರೀತಿಯಲ್ಲಿ ಪೊಟೊ ತೆಗೆದು ತನ್ನ ತಂದೆ ರಘುವೀರ್‍ ಎಂಬಾತನಿಗೆ ವಾಟ್ಸಾಪ್ ನಲ್ಲಿ ಕಳುಹಿಸಿದ್ದು, ನಿಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದೇವೆ. ನಿಮ್ಮ ಮಗಳು ಬೇಕು ಎಂದರೇ 30 ಲಕ್ಷ ಕೊಡಬೇಕು ಎಂದು ಸಂದೇಶ ಕಳುಹಿಸಿದ್ದಾಳೆ. ಅದನ್ನು ನಂಬಿದ ರಘುವೀರ್‍ ಮಧ್ಯಪ್ರದೇಶದ ಠಾಣೆಯಲ್ಲಿ ಕಿಡ್ನಾಪ್ ದೂರು ನೀಡಿದ್ದಾರೆ.  ಬಳಿಕ ತನಿಖೆ ನಡೆಸಿದ ಪೊಲೀಸರಿಗೆ ಕಾವ್ಯಾ ಧಕಡ್ ಮಾಡಿದ ಪ್ಲಾನ್ ತಿಳಿದಿದೆ.

Most Popular

To Top