Film News

ನಿನ್ನ ಪತಿ ನನಗೆ ಒಂದು ದಿನ ಬೇಕು ಎಂದ ಅಭಿಮಾನಿ, ಅದಕ್ಕೆ ನಟಿ ಜ್ಯೋತಿಕಾ ಕೊಟ್ಟ ರಿಪ್ಲೇ ಹೇಗಿತ್ತು ಗೊತ್ತಾ?

ಕಾಲಿವುಡ್ ಸಿನಿರಂಗದ ಕ್ಯೂಟ್ ಜೋಡಿಗಳಲ್ಲಿ ಜ್ಯೋತಿಕಾ ಹಾಗೂ ಸೂರ್ಯ ಜೋಡಿ ಒಂದಾಗಿದೆ. ಮದುವೆಯಾದಾಗಿನಿಂದ ಈ ಜೋಡಿ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ವೈಯುಕ್ತಿಕವಾಗಿಯೂ ಸಹ ಫೇಮಸ್ ಆದ ನಟರ ಸಾಲಿನಲ್ಲಿ ಸೂರ್ಯ ಮೊದಲ ಸ್ಥಾನದಲ್ಲಿರುತ್ತಾರೆ. ಇದೀಗ ಜ್ಯೋತಿಕಾ ರವರಿಗೆ ಅಭಿಮಾನಿಯೊಬ್ಬರು ನಿನ್ನ ಪತಿ ನನಗೆ ಒಂದು ದಿನ ಬೇಕು ಎಂದು ಕೇಳಿದ್ದಾರೆ. ಅದಕ್ಕೆ ಜ್ಯೋತಿಕಾ ನೀಡಿದ ರಿಪ್ಲೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಮದುವೆಯಾದ ಸುಮಾರು ವರ್ಷಗಳ ಕಾಲ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಂಡ ಜ್ಯೋತಿಕಾ ಇದೀಗ ಮತ್ತೆ ಸಿನೆಮಾಗಳತ್ತ ಮುಖ ಮಾಡಿದ್ದಾರೆ. ಇತ್ತೀಚಿಗೆ ತೆರೆಕಂಡ ಸೈತಾನ್ ಸಿನೆಮಾದಲ್ಲಿ ಜ್ಯೋತಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಬಾಲಿವುಡ್ ಸ್ಟಾರ್‍ ನಟರಾದ ಅಜಯ್ ದೇವಗನ್, ಮಾದವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಹಾರರ್‍ ಥ್ರಿಲ್ಲರ್‍ ಸಿನೆಮಾ ಪಾಸಿಟೀವ್ ಟಾಕ್ ನೊಂದಿಗೆ ಒಳ್ಳೆಯ ಸಕ್ಸಸ್ ಕಂಡಿದೆ. ನಟಿ ಜ್ಯೋತಿಕಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸೂರ್ಯ ಹಾಗೂ ಮಾದವನ್, ಅಜಯ್ ದೇವಗನ್ ಜೊತೆಗೆ ತೆಗೆಸಿಕೊಂಡ ಪೊಟೋ ಒಂದನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಪೊಟೋಗೆ ಓರ್ವ ಅಭಿಮಾನಿ ಜ್ಯೋತಿಕಾ ರವರೇ ಸಿಲ್ಲುನು ಒರು ಕಾದಲ್ ಸಿನೆಮಾದಲ್ಲಿನ ಮಾದರಿಯಂತೆ ನನಗೆ ನಿಮ್ಮ ಪತಿ ಸೂರ್ಯರನ್ನು ಒಂದು ದಿನ ಕೊಡಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಅಭಿಮಾನಿಯ ಕಾಮೆಂಟ್ ಬಗ್ಗೆ ರಿಯಾಕ್ಟ್ ಆದ ಜ್ಯೋತಿಕಾ ಆ ರೀತಿ ಮಾಡೋಕೆ ಆಗೊಲ್ಲ ಎಂದು ಹೇಳಿದ್ದಾರೆ. ಈ ರಿಪ್ಲೆ ಕಂಡ ಅಭಿಮಾನಿ ಶಾಕ್ ಆಗಿದ್ದಾರೆ. ನೀವು ನಮ್ಮ ಕಾಮೆಂಟ್ ಗೆ ಉತ್ತರ ಕೊಡುವುದೇ ಗ್ರೇಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಜ್ಯೋತಿಕಾ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಜ್ಯೋತಿಕಾ ಹಾಗೂ ಸೂರ್ಯ ರವರದ್ದು ಪ್ರೇಮ ವಿವಾಹ. ಕಳೆದ 2006 ರಲ್ಲಿ ಈ ಜೋಡಿ ಮದುವೆಯಾದರು. ಇವರಿಬ್ಬರ ಕಾಂಬಿನೇಷನ್ ನಲ್ಲಿ 7 ಸಿನೆಮಾಗಳು ಬಂದಿದ. ಮದುವೆಯಾದ ಬಳಿಕ ಜ್ಯೋತಿಕಾ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಸಕ್ರೀಯರಾಗಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಗ್ಲಾಮರ್‍ ಪಾತ್ರಗಳ ಜೊತೆಗೆ ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ಜ್ಯೋತಿಕಾ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

ಇನ್ನೂ ಸಿನೆಮಾಗಳ ಕಾರಣದಿಂದ ಜ್ಯೋತಿಕಾ ಹಾಗೂ ಸೂರ್ಯ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಜ್ಯೋತಿಕಾ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಮೆ ಶ್ರೀ, ಡಬ್ಬಾ ಕಾರ್ಟೆಲ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಸೂರ್ಯ ಸಹ ಕಂಗುವಾ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಇತ್ತೀಚಿಗಷ್ಟೆ ಕಂಗುವಾ ಟೀಸರ್‍ ಸಹ ಬಿಡುಗಡೆಯಾಗಿದ್ದು, ಸಿನೆಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

Most Popular

To Top