ಆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ಸ್ಟಾರ್ ನಟಿ ರಾಶಿ ಖನ್ನಾ, ಆಕೆಯ ಆರೋಗ್ಯ ಸಮಸ್ಯೆಯಾದರೂ ಏನು?

Follow Us :

ಬಹುಬೇಡಿಕೆ ನಟಿ ರಾಶಿ ಖನ್ನಾ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಇದೀಗ ಬಾಲಿವುಡ್ ನಲ್ಲೂ ಸಹ ಕೆಲವೊಂದು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡ ರಾಶಿ ಖನ್ನಾ ಇದೀಗ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ರಾಶಿ ಖನ್ನಾ ಆರೋಗ್ಯ ಸಮಸ್ಯೆಯೊಂದರಿಂದ ಬಳಲುತ್ತಿದ್ದಾರಂತೆ. ಆಕೆ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನನಟಿ ರಾಶಿ ಖನ್ನಾ ಕೆಲವು ವರ್ಷಗಳ ಕಾಲ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಆಕೆ ಭಾರಿ ಕ್ರೇಜ್ ಸಂಪಾದಿಸಿಕೊಂಡರು. ಈ ಹಿಂದೆ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದ ನಟಿ ರಾಶಿ ಖನ್ನಾ ಇದೀಗ ತನ್ನ ದಿಕ್ಕನ್ನು ಬದಲಿಸಿದ್ದಾರೆ.  ಆದರೆ ಸರಿಯಾದ ಅವಕಾಶಗಳನ್ನು ಪಡೆದುಕೊಳ್ಳಲು ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಮತಷ್ಟು ಹಾಟ್ ಅವತಾರ ತಾಳಿದ್ದಾರೆ. ಬೋಲ್ಡ್ ಪೊಟೋಗಳ ಮೂಲಕ ದರ್ಶನ ಕೊಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಇದೀಗ ರಾಶಿ ಖನ್ನಾ ರವರು ಅಂತಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಈ ಬಗ್ಗೆ ಈ ಹಿಂದೆ ನಡೆಸ ಸಂದರ್ಶನದಲ್ಲಿ ರಾಶಿ ಖನ್ನಾ ಸಹ ಈ ಬಗ್ಗೆ ಹೇಳಿದ್ದರು ಎನ್ನಲಾಗಿದೆ.

ನಟಿ ರಾಶಿ ಖನ್ನಾ ನೋಡಲು ಸುಂದರವಾಗಿದ್ದರೂ ಸಹ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಆಕೆ ಪಿಸಿಓಡಿ ಸಮಸ್ಯೆಯಿಂದ ಕಷ್ಟಪಡುತ್ತಿದ್ದಾರಂತೆ. ಈ ಸಮಸ್ಯೆಯಿಂದಲೇ ಆಕೆ ಕರಿಯರ್‍ ಆರಂಭದಲ್ಲಿ ತುಂಬಾ ದಪ್ಪ ಆಗಿದ್ದರಂತೆ. ಇದರಿಂದ ಆಕೆ ಬಾಡಿ ಶೇಮಿಂಗ್ ಗೆ ಗುರಿಯಾಗಿದ್ದರಂತೆ. ಕರಿಯರ್‍ ಆರಂಭದಲ್ಲಿ ತನ್ನನ್ನು ಗ್ಯಾಸ್ ಸಿಲಂಡರ್‍ ಎಂತಲೂ ವಿವಿಧ ರೀತಿಯಲ್ಲಿ ಟ್ರೋಲ್ ಮಾಡಿದ್ದರಂತೆ. ಆದರೆ ತನಗೆ ಪಿಸಿಒಡಿ ಸಮಸ್ಯೆಯಿದೆ ಎಂದು ತಿಳಿಯದೇ ಬಾಡಿ ಶೇಮಿಂಗ್ ಕಾಮೆಂಟ್ಸ್ ಮೂಲಕ ತುಂಬಾ ನೋವಾಗುವಂತೆ ಮಾಡಿದ್ದರು. ಆದರೆ ಆಕೆ ಮಾತ್ರ ಆ ಕಾಮೆಂಟ್ ಗಳಿಗೆ ಭಯಪಟ್ಟು ತೂಕ ಕಡಿಮೆ ಮಾಡಿಕೊಳ್ಳಲಿಲ್ಲವಂತೆ. ತನ್ನ ಕೆರಿಯರ್‍ ಗಾಗಿ ತೂಕ ಕಡಿಮೆ ಮಾಡಿಕೊಂಡಿದ್ದಾಗಿ ಈ ಹಿಂದೆ ನಡೆದ ಸಂದರ್ಶನವೊಂದರಲ್ಲಿ ರಾಶಿ ಖನ್ನಾ ಹೇಳಿಕೊಂಡಿದ್ದರು.

ಸದ್ಯ ರಾಶಿ ಖನ್ನಾ ಬಾಲಿವುಡ್ ಯಂಗ್ ಹಿರೋ ಸಿದ್ದಾರ್ತ್ ಮೆಲ್ಹೋತ್ರಾ ಜೊತೆಗೆ ಯೋಧ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಜು.7 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾದ ಮೇಲೆ ರಾಶಿ ಖನ್ನಾ ಸಹ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಆಕೆ ಕೊನೆಯದಾಗಿ ಫಾರ್ಜಿ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿರೀಸ್ ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಇನ್ನೂ ಆಕೆ ತನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಯೋಗಾ, ವರ್ಕೌಟ್ಸ್ ಮಾಡುತ್ತಿರುತ್ತಾರೆ.