Film News

ಪವಿತ್ರ ನನ್ನ ಹಣಕ್ಕಾಗಿ ನನ್ನೊಂದಿಗೆ ಇಲ್ಲ ಎಂದ ಸೀನಿಯರ್ ನಟ ನರೇಶ್, ಇಂಟ್ರಸ್ಟಿಂಗ್ ಕಾಮೆಂಟ್ಸ್ ವೈರಲ್…..!

ಸುಮಾರು ದಿನಗಳಿಂದ ಟಾಲಿವುಡ್ ಸಿನಿರಂಗದ ಸೀನಿಯರ್ ನಟ ನರೇಶ್ ಹಾಗೂ ಕ್ಯಾರೆಕ್ಟರ್ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಪ್ರತಿನಿತ್ಯ ಕೇಳಿಬರುತ್ತಲೇ ಇದೆ. ಅವರ ಬಗ್ಗೆ ಅನೇಕ ರೂಮರ್‍ ಗಳು, ಕಥನಗಳು ಕೇಳಿಬರುತ್ತಲೇ ಇದೆ. ಜೊತೆಗೆ ಸೂಪರ್‍ ಸ್ಟಾರ್‍ ಕೃಷ್ಣ ಮರಣದ ಸಮಯದಲ್ಲೂ ಸಹ ಪವಿತ್ರಾ ಭಾಗಿಯಾಗಿದ್ದರು. ಇದರ ಜೊತೆಗೆ ಕೆಲವೇ ದಿನಗಳಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮಳ್ಳಿ ಪೆಳ್ಳಿ ಎಂಬ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದಲ್ಲೂ ಸಹ ನರೇಶ್ ರವರ ವೈಯುಕ್ತಿಕ ಜೀವನದ ಅನೇಕ ಘಟನೆಗಳು ಸಹ ಇದೆ ಎಂದು ಹೇಳಲಾಗುತ್ತಿದೆ. ಇದೀಗ ನರೇಶ್ ಪವಿತ್ರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟ ನರೇಶ್ ಪ್ರಧಾನ ಪಾತ್ರದಲ್ಲಿ ನಟಿಸಿದ ಮಳ್ಳಿ ಪೆಳ್ಳಿ ಎಂಬ ಸಿನೆಮಾ ಇದೇ ಮೇ.26 ರಂದು ತೆರೆಗೆ ಬರಲಿದೆ ಈ ಸಿನೆಮಾ ತೆಲುಗು ಜೊತೆಗೆ ಕನ್ನಡ ಭಾಷೆಯಲ್ಲೂ ಸಹ ಬಿಡುಗಡೆಯಾಗಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿ ನಡೆಯುತ್ತಿವೆ. ಈ ಪ್ರಮೋಷನ್ ನಲ್ಲಿ ನರೇಶ್ ಹಾಗೂ ಪವಿತ್ರಾ ಸಹ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ.  ಈ ಪ್ರಮೋಷನ್ ವೇಳೆ ಸಹ ಅನೇಕ ವೈಯುಕ್ತಿಕ ವಿಚಾರಗಳೂ ಸಹ ಚರ್ಚೆಗೆ ಕಾರಣವಾಗುತ್ತಿವೆ. ಈ ಹಿಂದೆ ನರೇಶ್ ತನ್ನ ಆಸ್ತಿಯ ಬೆಲೆ ಸಾವಿರ ಕೋಟಿ ಎಂದು ಹೇಳಿದ್ದರು. ಈ ಕಾರಣದಿಂದ ಪವಿತ್ರ ನರೇಶ್ ಆಸ್ತಿಯನ್ನು ನೋಡಿ ಆತನ ಜೊತೆಗಿದ್ದಾರೆ ಎಂಬ ವಿಮರ್ಶೆಗಳೂ ಸಹ ಶುರುವಾಗಿತ್ತು. ಇದೀಗ ಈ ಕುರಿತು ನರೇಶ್ ರಿಯಾಕ್ಟ್ ಆಗಿದ್ದಾರೆ.

ನರೇಶ್ ತನಗೆ ಸಾವಿರ ಕೋಟಿಯ ಆಸ್ತಿಯಿದೆ ಎಂದು ಹೇಳಿದ್ದರು. ಈ ಬಗ್ಗೆ ಆತ ಮತ್ತೊಮ್ಮೆ ಸ್ಪಂದಿಸಿದ್ದಾರೆ. ನಾನು ನಿಜಕ್ಕೂ ಸಾವಿರ ಕೋಟಿ ಒಡೆಯ. ಸಾವಿರ ಕೋಟಿಗೂ ಅಧಿಕವೇ ಎಂದು ಹೇಳಬಹುದು. ನಮ್ಮ ಹಿರಿಯರಿಂದ ವಾರಸತ್ವದ ಮೂಲಕ ಕೊಂಚ ಹಾಗೂ ನಾನು ಸಹ ಕೊಂಚ ಸಂಪಾದಿಸಿಕೊಂಡಿದ್ದೇನೆ. ಭೂಮಿಯ ಬೆಲೆ ಬೆಳೆದ ಹಿನ್ನೆಲೆಯಲ್ಲಿ ಆಸ್ತಿ ಸಾವಿರ ಕೋಟಿಯಾಗಿದೆ. ಸಾವಿರ ಕೋಟಿಗೂ ಅಧಿಕ ಇರಬಹುದು. ಆ ಲೆಕ್ಕಗಳನ್ನು ನಾನು ಗಮನ ಹರಿಸಿಲ್ಲ. ನನ್ನ ಬಳಿಯಿರುವುದು ಎಲ್ಲಾ ವೈಟ್ ಮನಿ, ಬ್ಲಾಕ್ ಮನಿಯಲ್ಲ. ನಾನು ಕ್ರಮಬದ್ದವಾಗಿ ನ್ನ ರಾಜ್ಯವನ್ನು ನಿರ್ಮಾಣ ಮಾಡಿಕೊಂಡಿದ್ದೇನೆ. ನನ್ನ ಸಿದ್ದಾಂತ ಒಂದೇ, ನಮ್ಮಲ್ಲಿ ಇರುವುದರಲ್ಲಿ ಕೊಂಚ ನಾಲ್ಕು ಜನಕ್ಕೆ ಹಂಚಬೇಕು. ಸುತ್ತಲೂ ಇರುವವರನ್ನೂ ಸಂತೋಷದಿಂದ ನೋಡಿಕೊಳ್ಳಬೇಕು. ಇನ್ನೂ ನನ್ನ ಬಳಿ ಹಣ ಇದೆ ಎಂದು ಪವಿತ್ರ ಲೋಕೇಶ್ ನನಗೆ ಹತ್ತಿರವಾಗಿದ್ದಾರೆ ಎಂಬುದು ನಿಜವಲ್ಲ. ನಮ್ಮದು ಪವಿತ್ರವಾದ ಬಂಧ ಎಂದಿದ್ದಾರೆ.

ಅಷ್ಟೇಅಲ್ಲದೇ ನನ್ನ ಬಳಿ ಹಣ ಇಲ್ಲ ಎಂದು ಹೋದವರು ಸಹ ಅನೇಕರಿದ್ದಾರೆ. ಆಸ್ತಿಗಾಗಿ ನನ್ನ ಬಳಿ ಬಂದವರು ಇದ್ದಾರೆ. ಆದರೆ ಪವಿತ್ರಾ ಅಂತಹ ವ್ಯಕ್ತಯಲ್ಲ ಎಂದು ಹೇಳಿದ್ದಾರೆ. ಇನ್ನೂ ನರೇಶ್ ರವರ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕೆಲವು ದಿನಗಳ ಹಿಂದೆ ಸಹ ನರೇಶ್ ಹಾಗೂ ಪವಿತ್ರಾ ಮದುವೆಗೆ ಮಹೇಶ್ ಬಾಬು ಸಹ ಒಪ್ಪಿದ್ದಾರೆ ಎಂದು ಹೇಳಿದ್ದರು. ಶೀಘ್ರದಲ್ಲೇ ತಾವು ವಿವಾಹವಾಗುವುದಾಗಿ ಹೇಳಿದ್ದಾರೆ.

Most Popular

To Top