ರಾಜಕುಮಾರಿಯಂತೆ ಮೈ ತುಂಭಾ ಆಭರಣಗಳನ್ನು ಧರಿಸಿ ಕಾಣಿಸಿಕೊಂಡ ಪ್ರಣಿತಾ ಸುಭಾಷ್, ವೈರಲ್ ಆದ ಪೊಟೋಸ್…..!

Follow Us :

ಸ್ಯಾಂಡಲ್ ವುಡ್ ಬಹುಬೇಡಿಕೆ ನಟಿ ಪ್ರಣಿತಾ ಸುಭಾಷ್ ಇತ್ತೀಚಿಗಷ್ಟೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಈಕೆ ಇದೀಗ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಆಕೆ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇದ್ದರು. ಗರ್ಭಿಣಿಯಾದ ಸಮಯದಲ್ಲಿ ಬೇಬಿ ಬಂಪ್ ಪೊಟೋಸ್, ಮಗುವಿನ ಪೊಟೋಗಳನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದೀಗ ಆಕೆ ಸಂಪ್ರದಾಯಬದ್ದವಾದ ಉಡುಗೆಯಲ್ಲಿ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಪ್ರಣಿತಾ ಕಳೆದ 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜ್ ಎಂಬಾತನನ್ನು ವಿವಾಹವಾದರು. ಇವರ ಮದುವೆ ಸೀಕ್ರೇಟ್ ಆಗಿಯೇ ನಡೆದಿತ್ತು. ಕಳೆದ ವರ್ಷ ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ತಾಯಿಯಾಗಿ, ನಟಿಯಾಗಿಯೂ ಕುಟುಂಬ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ಇನ್ನೂ ಪತಿಯ ಅನುಮತಿಯೊಂದಿಗೆ ಮತ್ತೆ ಸಿನೆಮಾಗಳಲ್ಲಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಬ್ಯುಸಿಯಾಗಿರುತ್ತಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೆ ಆಕೆ ಟ್ರೆಂಡಿಷನಲ್ ಲುಕ್ಸ್ ನಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಇವು ಹಳೆಯ ಪೊಟೋಗಳು, ಥ್ರೋ ಬ್ಯಾಕ್ ಪೊಟೋಗಳಾದರೂ ಸಹ ಪ್ರಣಿತಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಟಿ ಪ್ರಣಿತಾ ಪಿಂಕ್ ಕಲರ್‍ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಮೈ ತುಂಬಾ ಆಭರಣಗಳನ್ನು ಧರಿಸಿ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾರೆ. ಆಕೆ ಈ ಪೊಟೋಗಳಲ್ಲಿ ಮತಷ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮೂರು ಪೊಟೋಗಳಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಆಕೆ ಪೋಷಕರ ಮಧ್ಯೆ ಕುಳಿತು ಕಾಣಿಸಿಕೊಂಡಿದ್ದಾರೆ. ಮತ್ತೊಂದು ಪೊಟೋದಲ್ಲಿ ಕ್ಲೋಜಪ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇವು ಥ್ರೋ ಬ್ಯಾಕ್ ಪೊಟೋಗಳಾದರೂ ಸಹ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಕಾಮೆಂಟ್ ಗಳು ಲೈಕ್ ಗಳು ಹರಿದು ಬರುತ್ತಿವೆ.

ಇನ್ನೂ ಪ್ರಣಿತಾ ಸುಭಾಷ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಪ್ರಣಿತಾ ಇದೀಗ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ ಸದ್ಯ ಆಕೆ ಕನ್ನಡದಲ್ಲಿ ರಾಮನ ಅವತಾರ ಎಂಬ ಸಿನೆಮಾದಲ್ಲಿ ಹಾಗೂ ಮಲಯಾಳಂ ನಲ್ಲಿ ನಟ ದಿಲೀಪ್ ಜೊತೆಗೆ ಸಹ ನಟಿಸುವ ಮೂಲಕ ಮಲಯಾಳಂ ಸಿನಿರಂಗಕ್ಕೆ ಸಹ ಎಂಟ್ರಿ ಕೊಡುತ್ತಿದ್ದಾರೆ.