Film News

ಮದುವೆಯ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ ಮೃಣಾಲ್, ಅಂತಹ ವ್ಯಕ್ತಿಯನ್ನೇ ಮದುವೆಯಾಗುತ್ತೇನೆ ಎಂದ ನಟಿ…..!

ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ನಟಿಯರಲ್ಲಿ ಮೃಣಾಲ್ ಠಾಕೂರ್‍ ಒಬ್ಬರಾಗಿದ್ದಾರೆ. ಸೀತಾರಾಮಂ ಎಂಬ ಸಿನೆಮಾದ ಮೂಲಕ ಆಕೆ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ನಟಿಸಿದ ಲಸ್ಟ್ ಸ್ಟೋರೀಸ್-2 ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇದೀಗ ಆಕೆ ಮದುವೆಯ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಮೃಣಾಲ್ ಠಾಕೂರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತನ್ನ ವೈಯುಕ್ತಿಕ ಜೀವನದ ಬಗ್ಗೆ ಹಾಗೂ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಆಕೆ ಮದುವೆಯ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಜೊತೆಗೆ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಸಹ ಕೆಲವೊಂದು ಮಾಹಿತಿ ಹಂಚಿಕೊಂಡಿದ್ದಾರೆ. ತನಗೆ ಚಿಕ್ಕಂದಿನಿಂದ ಆಟಗಳು ಎಂದರೇ ತುಂಬಾ ಇಷ್ಟವಂತೆ. ಹೆಚ್ಚಾಗಿ ಕ್ರಿಕೆಟ್, ಬಾಸ್ಕೆಟ್ ಬಾಲ್ ಆಟಗಳನ್ನು ಆಡುತ್ತಿದೆ. ತನ್ನ ಸಹೋದರನ ಕಾರಣದಿಂದ ಕ್ರಿಕೆಟ್ ಮೇಲೆ ಇಷ್ಟ ಏರ್ಪಟ್ಟಿತ್ತಂತೆ. ಐದು ವರ್ಷಗಳಲ್ಲೆ ಬ್ಲೂ ಜೆರ್ಸಿ ಧರಿಸಿ ಸ್ಟೇಡಿಯಂ ನಲ್ಲಿ ಕ್ರಿಕೆಟ್ ನೋಡುತ್ತಿದ್ದೆವು ಎಂದು ಮೃಣಾಲ್ ತಿಳಿಸಿದ್ದಾರೆ.

ಬಳಿಕ ತನಗೆ ಜೆರ್ಸಿ ಎಂಬ ಸಿನೆಮಾದಲ್ಲಿ ನಟಿಸುವ ಅವಕಾಶ ಬಂದಿದ್ದು ತುಂಬಾ ಸಂತೋಷ ಕೊಟ್ಟಿತ್ತಂತೆ. ಇನ್ನೂ ಕ್ರಿಕೆಟ್ ನಲ್ಲಿ ಆಕೆಗೆ ವಿರಾಟ್ ಕೊಹ್ಲಿ ಎಂದರೇ ತುಂಬಾನೆ ಇಷ್ಟವಂತೆ. ಜೊತೆಗೆ ನಟ ಸಾಹಿದ್ ಕಪೂರ್‍ ಎಂದರೇ ತುಂಬಾ ಇಷ್ಟ, ಆತನೇ ನನ್ನ ಫಸ್ಟ್ ಕ್ರಷ್ ಎಂದು ಹೇಳಿದ್ದಾರೆ. ಸಿನಿರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಸಾಹಿದ್ ಕಪೂರ್‍ ಪೊಟೋಗಳು ಎಲ್ಲಿ ಕಂಡು ಬಂದರೂ ಅದನ್ನು ಕಟ್ ಮಾಡಿ ಬುಕ್ ನಲ್ಲಿ ಇಟ್ಟುಕೊಳ್ಳುತ್ತಿದ್ದರಂತೆ. ಅದನ್ನು ನೋಡಿ ಮನೆಯಲ್ಲಿ ಬೈದರೂ ಸಹ ಅದನ್ನು ಮಾತ್ರ ಬಿಡುತ್ತಿರಲಿಲ್ಲವಂತೆ. ಅಂತಹುದರಲ್ಲಿ ಆತನೊಂದಿಗೆ ನಟಿಸುವ ಅವಕಾಶ ಬಂದಿದ್ದು ನನಗೆ ತುಂಬಾ ಸಂತೋಷ ತಂದುಕೊಟ್ಟಿತ್ತು. ನಾನು ಕ್ಲಾಸಿಕಲ್ ಡ್ಯಾನ್ಸರ್‍ ಎಂದೂ ಸಹ ಹೇಳಿದ್ದಾರೆ. ಜೊತೆಗೆ ನನ್ನ ಮದುವೆಯಾಗುವ ವ್ಯಕ್ತಿ ನನ್ನನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ಅಂತಹ ವ್ಯಕ್ತಿಯನ್ನೇ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಮೃಣಾಲ್ ಹಂಚಿಕೊಂಡ ಈ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ. ಸದ್ಯ ಮೃಣಾಲ್ ಠಾಕೂರ್‍ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ನಾನಿ30 ಸಿನೆಮಾದಲ್ಲಿ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಸಹ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ. ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.

Most Popular

To Top