ಗ್ರೀನ್ ಕಲರ್ ಆಫ್ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡ ಬುಟ್ಟಬೊಮ್ಮ, ಟ್ರೆಡಿಷನಲ್ ಲುಕ್ಸ್ ನಲ್ಲೂ ಅಭಿಮಾನಿಗಳನ್ನು ಕಟ್ಟಿಹಾಕಿದ ಪೂಜಾ ಹೆಗ್ಡೆ…..!

Follow Us :

ಸ್ಟಾರ್‍ ನಟಿ ಪೂಜಾ ಹೆಗ್ಡೆ ಸೌತ್ ಅಂಡ್ ನಾರ್ತ್‌ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಗ್ಲಾಮರ್‍ ಜೊತೆಗೆ ಅದೃಷ್ಟ ಸಹ ಆಕೆಗಿರುವ ಕಾರಣದಿಂದ ಆಕೆಯ ಖಾತೆಯಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳು ಸೇರಿಕೊಂಡವು. ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಲಿಲ್ಲ ಎಂದೇ ಹೇಳಬಹುದು. ಇದೀಗ ಆಕೆ ಗ್ರೀನ್ ಕಲರ್‍ ಹಾಫ್ ಸೀರೆಯಲ್ಲಿ ಟ್ರೆಡಿಷನಲ್ ಲುಕ್ಸ್ ಕೊಟ್ಟು ಅಭಿಮಾನಿಗಳನ್ನು ಕಟ್ಟಿಹಾಕಿದ್ದಾರೆ. ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಸಹ ಆಗುತ್ತಿವೆ.

ಬುಟ್ಟಬೊಮ್ಮ ಪೂಜಾ ಹೆಗ್ಡೆ ಮುಂಬೈನಿಂದ ಬಂದು ಸೌತ್ ನಲ್ಲಿ ಅದರಲ್ಲೂ ಟಾಲಿವುಡ್ ಸಿನೆಮಾಗಳಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಆಕೆ  ವರುಣ್ ತೇಜ್ ಜೊತೆಗೆ ಮುಕುಂದ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ನಾಗಚೈತನ್ಯ ಜೊತೆಗೆ ಒಕ ಲೈಲಾ ಕೋಸಂ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ಆದರೆ ಈ ಎರಡೂ ಸಿನೆಮಾಗಳು ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು. ಬಳಿಕ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಡಿಜೆ ಸಿನೆಮಾದಲ್ಲಿ ಅವಕಾಶ ಬಂತು. ಈ ಸಿನೆಮಾದ ಮೂಲಕ ಆಕೆ ಭಾರಿ ಕ್ರೇಜ್ ಪಡೆದುಕೊಂಡರು.  ಬಳಿಕೆ ಕ್ರೇಜಿ ನಟಿಯಾಗಿ ಅನೇಕ ಸ್ಟಾರ್‍ ಗಳೊಂದಿಗೆ ನಟಿಸಿದರು. ಸಿನೆಮಾಗಳ ಬಗ್ಗೆ ಅಪ್ಡೇಟ್ಸ್ ನೀಡದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಸಿನೆಮಾಗಳ ಬಗ್ಗೆ ಅಪ್ಡೇಟ್ ಇರದೇ ಇದ್ದರೂ ಸಹ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತುಂಬಾನೆ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಆಕೆ ರೆಟ್ರೋ ಲುಕ್ಸ್ ನಲ್ಲಿ ಮಿಂಚಿದ್ದಾರೆ. ಗ್ರೀನ್ ಕಲರ್‍ ಹಾಫ್ ಸೀರೆಯಲ್ಲಿ ಟ್ರೆಡಿಷನಲ್ ಲುಕ್ಸ್ ಕೊಟ್ಟಿದ್ದಾರೆ. ತಲೆಯಲ್ಲಿ ಹೂ ಮುಡಿದು, ಬ್ಯೂಟಿಪುಲ್ ಲುಕ್ಸ್ ಕೊಟ್ಟಿದ್ದಾರೆ. ವಿವಿಧ ರೀತಿಯಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡರೂ ಸಹ ಅಭಿಮಾನಿಗಳು ಆಕೆಯ ಕ್ಯೂಟ್ ನೆಸ್ ಗೆ ಫಿದಾ ಆಗಿದ್ದಾರೆ. ಯುವಕರು ಆಕೆಯ ಬ್ಯೂಟಿಪುಲ್ ಲುಕ್ಸ್ ಗೆ ಮಾರುಹೋಗಿ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಾ ಆಕೆಯ ಸೌಂದರ್ಯವನ್ನು ಹೊಗಳುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪೂಜಾ ಹೆಗ್ಡೆಗೆ ಕೆಲವು ದಿನಗಳಿಂದ ಸಮಯ ಸರಿಯಿಲ್ಲ ಎಂದೇ ಹೇಳಬಹುದು. ಆಕೆ ಅಭಿನಯದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇನ್ನೂ ಪೂಜಾ ಹೆಗ್ಡೆ ಮಹೇಶ್ ಬಾಬು ರವರ ಗುಂಟೂರು ಖಾರಂ ಹಾಗೂ ಉಸ್ತಾದ ಭಗತ್ ಸಿಂಗ್ ಸಿನೆಮಾಗಳಿಂದಲೂ ಹೊರಬಂದರು. ಡೇಟ್ಸ್ ಹೊಂದಾಣಿಕೆಯಾಗದ ಕಾರಣದಿಂದ ಆಕೆ ಈ ಸಿನೆಮಾಗಳಿಂದ ಹೊರಬಂದರು ಎನ್ನಲಾಗಿದೆ. ಸದ್ಯ ಆಕೆ ಸಾಯಿಧರಮ್ ತೇಜ್ ಜೊತೆಗೆ ಗಂಜಾ ಶಂಕರ್‍ ಸಿನೆಮಾ ಹಾಗೂ ಹಿಂದಿಯಲ್ಲಿ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.