ಕಾಮುಕನಿಗೆ ಬಲಿಯಾದ್ರಾ ಮೇಲುಕೋಟೆ ಶಿಕ್ಷಕಿ? ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ, ಮಣ್ಣಲ್ಲಿ ಹೂತಿಟ್ಟ ರೀತಿಯಲ್ಲಿ ಶವಪತ್ತೆ…..!

Follow Us :

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅತಿರ್ಥಿ ಶಿಕ್ಷಕಿ ಕೊಲೆಯಾಗಿದ್ದಾರೆ. ಕಾಡಿನ ಪ್ರದೇಶದಲ್ಲಿ ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಶವಪತ್ತೆಯಾಗಿದ್ದು, ಅದೇ ಗ್ರಾಮದ ಪರಿಚಯಸ್ಥ ಯುವಕನೇ ಈ ಕೊಲೆ ಮಾಡಿದ್ದಾನೆ ಎಂಬ ಅನುಮಾನಗಳು ಸಹ ಎದುರಾಗಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಂಡ್ಯದ ಮೇಲುಕೊಟೆಯ ಯೋಗ ನರಸಿಂಹಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಅತಿಥಿ ಶಿಕ್ಷಕಿಯ ಮೃತ ದೇಗ ಪತ್ತೆಯಾಗಿದೆ. ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ ಶಿಕ್ಷಕಿಯ ಶವ ಪತ್ತೆಯಾಗಿದೆ. ಮೃತ ಶಿಕ್ಷಕಿಯನ್ನು ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯ ಮಾಣಿಕ್ಯನಹಳ್ಳಿಯ ದೀಪಿಕಾ (28) ಎಂದು ಗುರ್ತಿಸಲಾಗಿದ್ದು, ಆಕೆಗೆ ಮದುವೆಯಾಗಿ 8 ವರ್ಷದ ಮಗು ಸಹ ಇದೆ ಎಂದು ತಿಳಿದುಬಂದಿದೆ. ಕಳೆದ 8 ವರ್ಷಗಳ ಹಿಂದೆ ಅದೇ ಗ್ರಾಮದ ಲೋಕೇಶ್ ಎಂಬಾತನೊಂದಿಗೆ ಮೃತಳ ಮದುವೆ ನಡೆದಿತ್ತು. ಮೃತ ದುರ್ದೈವಿ ದೀಪಿಕಾ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದು, ಕಳೆದ ಶನಿವಾರ ಮದ್ಯಾಹ್ನದ ತರಗತಿ ಮುಗಿಸಿ ಸ್ಕೂಟರ್‍ ನಲ್ಲಿ ವಾಪಸ್ ಮನೆಗೆ ಹೋದ ಆಕೆ ರಾತ್ರಿಯಾದರೂ ಮನೆಗೆ ಹೋಗಿರಲಿಲ್ಲ.

ಬಳಿಕ ದೀಪಿಕಾಳ ಸ್ಕೂಟರ್‍ ಬೆಟ್ಟದ ತಪ್ಪಲಿಲ್ಲಿ ನಿಂತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಕೂಟರ್‍ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಪೊಲೀಸರು ಮಾಹಿತಿಯನ್ನು ಪಡೆದುಕೊಂಡು ಶಿಕ್ಷಕಿಯ ತಂದೆಗೆ ಕರೆ ಮಾಡಿದ್ದಾರೆ. ಬಳಿಕ ಆ ಸ್ಕೂಟರ್‍ ದೀಪಿಕಾರದ್ದೆ ಎಂದು ತಿಳಿದುಬಂದಿದ್ದು, ಬೆಟ್ಟದಲ್ಲಿ ಹುಡುಕಾಟ ನಡೆಸಿದ್ದಾರೆ. ಬೆಟ್ಟದಲ್ಲಿ ತಪ್ಪಲಿನಲ್ಲೇ ಶಿಕ್ಷಕಿಯನ್ನು ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ  ದೀಪಿಕಾ ಶವ ಪತ್ತೆಯಾಗಿದ್ದು, ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.