Film News

ಆತನೊಬ್ಬ ಕಾಮಾಂಧ, ಅಸಭ್ಯಕರವಾಗಿ ವರ್ತಿಸಿದ, ನಟನ ಮೇಲೆ ನಿತ್ಯಾಮಿನನ್ ಶಾಕಿಂಗ್ ಕಾಮೆಂಟ್ಸ್….!

ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಿತ್ಯಾ ಮಿನನ್ ಅನೇಕ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ಈಕೆ ನಟಿಸುವಂತಹ ಸಿನೆಮಾಗಳೂ ಸಹ ತುಂಬಾನೆ ವಿಭಿನ್ನವಾಗಿರುತ್ತವೆ ಎಂದು ಹೇಳಬಹುದಾಗಿದೆ. ಇದೀಗ ನಿತ್ಯಾ ಮಿನನ್ ನಟನೊಬ್ಬನ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆ ನಟ ತುಂಬಾ ಕಾಮುಕ, ಅಸಭ್ಯವಾಗಿ ವರ್ತನೆ ಮಾಡುತ್ತಾನೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಟಿ ನಿತ್ಯಾ ಮಿನನ್ ಗ್ಲಾಮರ್‍ ಪ್ರದರ್ಶನದಲ್ಲಿ ಹಿಂದೆ ಬಿದ್ದರೂ ಪ್ರತಿಭೆಯ ಮೂಲಕ ಸ್ಟಾರ್‍ ನಟಿಯಾದರು. ಕಣ್ಣುಗಳಲ್ಲೆ ಆಕೆ ತಮ್ಮ ಎಮೋಷನ್ಸ್ ಪ್ರದರ್ಶನ ಮಾಡುತ್ತಾರೆ. ಅಲಾ ಮೊದಲೈಂದಿ, ಇಷ್ಕ್, ಜನತಾ ಗ್ಯಾರೇಜ್, ಭಿಮ್ಲಾ ನಾಯಕ್ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ಭಿಮ್ಲಾ ನಾಯಕ್ ಸಿನೆಮಾದಲ್ಲಿ ಆಕೆ ಪವರ್‍ ಪುಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಮಿಟೂ ಅಭಿಯಾನ ಶುರುವಾದ ಬಳಿಕ ಸಾಮಾನ್ಯ ಕಲಾವಿದರಿಂದ ಹಿಡಿದು ಸ್ಟಾರ್‍ ನಟಿಯರವರೆಗೂ ಕಾಸ್ಟಿಂಗ್ ಕೌಚ್ ಗೆ ಗುರಿಯಾಗಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಇದೀಗ ನಟಿ ನಿತ್ಯಾ ಮಿನನ್ ಸಹ ತಾನು ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ನಟಿ ನಿತ್ಯಾ ಮಿನನ್ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ನನಗೆ ಟಾಲಿವುಡ್ ನಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ನನಗೆ ಯಾರೂ ಅಲ್ಲಿ ಸಮಸ್ಯೆಯಾಗಿರಲಿಲ್ಲ. ಆದರೆ ಕಾಲಿವುಡ್ ನಲ್ಲಿ ನನಗೆ ತುಂಬಾ ಸಮಸ್ಯೆಗಳು ಉದ್ಬವಿಸಿದವು. ಕಾಲಿವುಡ್ ಮೂಲದ ನಟನೊಬ್ಬ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ಅಸಭ್ಯವಾಗಿ ಮುಟ್ಟುತ್ತಾ ಶೂಟಿಂಗ್ ಸಮಯದಲ್ಲಿ ನನಗೆ ಹಿಂಸೆ ನೀಡಿದ. ಆತನ ಹುಚ್ಚು ವರ್ತನೆಯ ಕಾರಣದಿಂದ ಶೂಟಿಂಗ್ ನಲ್ಲಿ ಸರಿಯಾಗಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಮಹಿಳೆಯರನ್ನು ಆ ರೀತಿ ಕಿರಿಕಿರಿ ಮಾಡುವವರು ಎಲ್ಲಾ ರಂಗಗಳಲ್ಲೂ ಇರುತ್ತಾರೆ. ಆ ರೀತಿ ಇರುವಾಗ ಕೆಲಸ ಮಾಡಲು ತುಂಬಾ ಕಷ್ಟ. ಅದಕ್ಕಾಗಿಯೇ ಅನೇಕ ಮಹಿಳೆಯರು ಮನೆಯನ್ನು ಬಿಟ್ಟು ಹೊರಬಂದು ಕೆಲಸ ಮಾಡಲು ಭಯಪಡುತ್ತಾರೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಸದ್ಯ ನಿತ್ಯಾಮಿನನ್ ನೀಡಿದ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ. ನಿತ್ಯಾ ಮಿನನ್ ಗೆ ಲೈಂಗಿಕ ಕಿರುಕುಳ ಕೊಟ್ಟಂತಹ ತಮಿಳು ನಟ ಯಾರು ಎಂಬ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಚರ್ಚೆಗಳು ಶುರುವಾಗಿದೆ. ಇನ್ನೂ ನಿತ್ಯಾಮಿನನ್ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

Most Popular

To Top