ತಮನ್ನಾ ಜೊತೆಗೆ ಲವ್ ಅಫೈರ್ ರಹಸ್ಯವಾಗಿಡಲು ಅದೇ ಕಾರಣ ಎಂದ ವಿಜಯ್ ವರ್ಮಾ, ವೈರಲ್ ಆದ ಕಾಮೆಂಟ್ಸ್……!

Follow Us :

ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ವಿಜಯ್ ವರ್ಮಾ ರವರು ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿಯೊಂದು ವರ್ಷದ ಆರಂಭದಿಂದ ಕೇಳಿಬರುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಈ ಸುದ್ದಿಯನ್ನು ತಮನ್ನಾ ಅಧಿಕೃತಗೊಳಿಸಿದ್ದಾರೆ. ತಾವು ಇಬ್ಬರೂ ಲವ್ ನಲ್ಲಿರುವುದು ಒಪ್ಪಿಕೊಂಡಿದ್ದಾರೆ. ಇದೀಗ ನಟ ವಿಜಯ್ ವರ್ಮಾ ತಮ್ಮ ಲವ್ ಸ್ಟೋರಿಯನ್ನು ರಹಸ್ಯವಾಗಿಡಲು ಕಾರಣವೊಂದನ್ನು ತಿಳಿಸಿದ್ದಾರೆ. ಸದ್ಯ ವಿಜಯ್ ವರ್ಮಾರವರ ಕಾಮೆಂಟ್ ಗಳು ವೈರಲ್ ಆಗುತ್ತಿದೆ.

ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾ ಸೇರಿದಂತೆ ಎಲ್ಲಾ ಕಡೆ ತಮನ್ನಾ ಹಾಗೂ ವಿಜಯ್ ವರ್ಮಾ ಲವ್ ಬಗ್ಗೆ ಸುದ್ದಿಗಳು ಹರಿದಾಡುತ್ತಲೇ ಇತ್ತು. ಮೊದಲಿಗೆ ಅವರಿಬ್ಬರೂ ಎಲ್ಲ ಸುಳ್ಳು, ರೂಮರ್‍ ಗಳು ಎಂದು ತಳ್ಳಿಹಾಕುತ್ತಿದ್ದರು. ಆದರೆ ಅವರ ವರ್ತನೆ ಮಾತ್ರ ಅವರಿಬ್ಬರು ಡೇಟಿಂಗ್ ನಲ್ಲಿರುವುದಾಗಿ ವ್ಯಕ್ತವಾಗುತ್ತಿತ್ತು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ವಿಜಯ್ ವರ್ಮಾ ಜೊತೆಗೆ ಲವ್ ನಲ್ಲಿರುವುದಾಗಿ ಆಕೆ ಒಪ್ಪಿಕೊಂಡರು. ಲಸ್ಟ್ ಸ್ಟೊರೀಸ್-2 ಶೂಟಿಂಗ್ ಸಮಯದಲ್ಲಿ ತಮ್ಮ ನಡುವೆ ಪ್ರೀತಿ ಹುಟ್ಟಿತ್ತು. ಕೇವಲ ವಿಜಯ್ ವರ್ಮಾ ನಟನಾಗಿ ಇಷ್ಟವಾಗಿಲ್ಲ. ನಾನು ಸುಮಾರು ಮಂದಿ ನಟರೊಂದಿಗೆ ನಟಿಸಿದ್ದೆ ಆದರೆ ವಿಜಯ್ ವರ್ಮಾ ತುಂಬಾ ಪ್ರತ್ಯೇಕವಾದ ನಟ. ನನಗೆ ರಕ್ಷಣೆಯಾಗಿ ನಿಲ್ಲುತ್ತಾನೆ ಎಂಬ ನಂಬಿಕೆ ಇದೆ. ನಮ್ಮದು ಆರ್ಗಾನಿಕ್ ಬಂಧ. ನನಗಾಗಿ ಒಂದು ಸುಂದರವಾದ ಪ್ರಪಂಚವನ್ನು ಸೃಷ್ಟಿ ಮಾಡಿಕೊಂಡಿದ್ದೆ. ಅದರೊಳಗೆ ವಿಜಯ್ ವರ್ಮಾ ಬಂದ. ಆತನಿರುವ ಪ್ರದೇಶವೇ ನನಗೆ ಇಷ್ಟವಾದ ಪ್ರದೇಶ ಎಂದು ತಮನ್ನಾ ಹೇಳುವ ಮೂಲಕ ತಮ್ಮ ಅಫೈರ್‍ ಬಗ್ಗೆ ಅಧಿಕೃತಗೊಳಿಸಿದರು.

ಇದೀಗ ವಿಜಯ್ ವರ್ಮಾ ಸಹ ತಮ್ಮ ಪ್ರೀತಿಯ ಬಗ್ಗೆ ಓಪೆನ್ ಆಗಿದ್ದಾರೆ. ತಮ್ಮ ಪ್ರೀತಿಯನ್ನು ಏತಕ್ಕಾಗಿ ರಹಸ್ಯವಾಗಿ ಇಡಬೇಕಾಯಿತು ಎಂಬ ಬಗ್ಗೆ ಸಹ ಹೇಳಿದ್ದಾರೆ. ನನ್ನ ಜೀವನ ತುಂಬಾ ಸಂತೋಷವಾಗಿದೆ. ಸಾರ್ವಜನಿಕವಾಗಿ ನನ್ನ ಪ್ರೊಫೆಷನಲ್ ಲೈಫ್ ಬಗ್ಗೆ ಮಾತ್ರ ಹೇಳಬೇಕು ಎಂದುಕೊಂಡಿದ್ದೆ. ವೈಯುಕ್ತಿಕ ಜೀವನದ ಬಗ್ಗೆ ಹೇಳುವ ಸಮಯ ಬಂದಾಗ ಹೇಳಬೇಕು ಎಂದುಕೊಂಡಿದೆ. ಆ ಕಾರಣದಿಂದಲೇ ತಮನ್ನ ಜೊತೆಗಿನ ವಿಚಾರ ಹೊರಹಾಕಲು ಇಷ್ಟಪಟ್ಟಿರಲಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ವಿಜಯ್ ವರ್ಮಾ ಸಹ ತಮ್ಮ ಲವ್ ವಿಚಾರವನ್ನು ಹೊರಹಾಕಿದ್ದಾರೆ. ಇನ್ನೂ ಈ ಜೋಡಿಯಿಬ್ಬರೂ ತಮ್ಮ ರಿಲೇಷನ್ ಶಿಪ್ ಬಗ್ಗೆ ಒಪೆನ್ ಆಗಿದ್ದು, ಅವರ ಮದುವೆ ಯಾವಾಗ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಇನ್ನೂ ತಮನ್ನಾ ಅಭಿನಯದ ಲಸ್ಟ್ ಸ್ಟೋರಿಸ್ ಸೀಸನ್ 2 ಇದೇ ಜೂನ್ 29 ರಿಂದ ಸ್ಟ್ರೀಮ್ ಆಗಲಿದೆ. ಈ ಸಿರೀಸ್ ನಲ್ಲಿ ತಮನ್ನಾ ಕೆರಿಯರ್‍ ನಲ್ಲಿ ಎಂದೂ ಕಾಣಿಸಿಕೊಳ್ಳದ ಮಾದರಿಯಲ್ಲಿ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದಾರೆ. ಜೊತೆಗೆ ಆಕೆ ತೆಲುಗಿನಲ್ಲಿ ಭೋಳಾಶಂಕರ್‍, ತಮಿಳಿನಲ್ಲಿ ಜೈಲರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.