Film News

ನನಗೆ ನನ್ನ ಕುಟುಂಬದ ಸಪೋರ್ಟ್ ಇಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ ಮೃಣಾಲ್ ಠಾಕೂರ್…..!

ಅನೇಕ ನಟಿಯರು ದೊಡ್ಡ ದೊಡ್ಡ ಆಸೆಗಳನ್ನಿಟ್ಟುಕೊಂಡು ಸ್ಟಾರ್‍ ಆಗಲು ಬಣ್ಣದ ಲೋಕಕ್ಕೆ ಬರುತ್ತಾರೆ. ಸಿನಿರಂಗದಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವು ನಟಿಯರು ಮಾತ್ರ ಮೊದಲನೇ ಸಿನೆಮಾದ ಮೂಲಕವೇ ಸ್ಟಾರ್‍ ಡಮ್ ಪಡೆದುಕೊಳ್ಳುತ್ತಾರೆ. ಅಂತಹ ನಟಿಯರ ಸಾಲಿಗೆ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ. ಇದೀಗ ಆಕೆ ಸ್ಟಾರ್‍ ಆಗಲು ತಾನು ಮಾಡಿದ ಹೋರಾಟದ ಬಗ್ಗೆ ನೆನಪಿಸಿಕೊಂಡು ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಸ್ಟಾರ್‍ ಡಮ್ ಪಡೆದುಕೊಂಡ ನಟಿಯರಲ್ಲಿ ತುಂಬಾನೆ ವಿರಳ ಇರುತ್ತಾರೆ. ಈ ಪಟ್ಟಿಯಲ್ಲಿ ಸೀತಾರಾಮಂ ಸಿನೆಮಾದ ಬ್ಯೂಟಿ ಮೃಣಾಲ್ ಠಾಕೂರ್‍ ಸಹ ಒಬ್ಬರಾಗಿದ್ದಾರೆ.  ಸೀತಾರಾಮಂ ಸಿನೆಮಾ ಸಂಚಲನಾತ್ಮಕ ಸಕ್ಸಸ್ ಕಂಡಿದೆ. ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳು ಹರಿದು ಬರುತ್ತಿವೆ. ಜೊತೆಗೆ ಸಿನೆಮಾಗಳ ಜೊತೆಗೆ ಆಕೆ ಸೊಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇನ್ನೂ ಆಕೆ ಸ್ಟಾರ್‍ ಆಗಲು ಅನೇಕ ಸಮಸ್ಯೆಗಳನ್ನು ಎದುರಿಸಿದರೂ ಸಹ ಧೈರ್ಯದಿಂದ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಆಕೆ ತನ್ನ ಅಭಿಪ್ರಾಯಗಳನ್ನೂ ಸಹ ಪಬ್ಲಿಕ್ ಆಗಿಯೇ ಹೇಳಿಬಿಡುತ್ತಾರೆ. ಇದೀಗ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಎಲ್ಲರೂ ಶಾಕ್ ಆಗಿದ್ದಾರೆ.

ಇನ್ನೂ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೃಣಾಲ್ ಠಾಕೂರ್‍ ಮಾತನಾಡುತ್ತಾ ತನ್ನ ಕೆರಿಯರ್‍ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಮ್ಮದು ಮರಾಠಿ ಕುಟುಂಬ, ನಾನು ಬಣ್ಣದ ಲೋಕಕ್ಕೆ ಬರಲು ನಮ್ಮ ಕುಟುಂಬಕ್ಕೆ ಇಷ್ಟವಿರಲಿಲ್ಲ. ಏಕೆಂದರೇ ನಮ್ಮ ಕುಟುಂಬದಲ್ಲಿ ಸಿನೆಮಾ ರಂಗಕ್ಕೆ ಸೇರಿದವರು ಯಾರೂ ಇರಲಿಲ್ಲ. ಅಷ್ಟಕ್ಕೂ ಅವರಿಗೆ ಸಿನಿರಂಗದ ಬಗ್ಗೆ ಏನು ತಿಳಿಯದೇ ಇರುವುದೇ ದೊಡ್ಡ ಕಾರಣ ಎನ್ನಬಹುದು. ಈ ಹಿನ್ನೆಲೆಯಲ್ಲಿ ಅವರು ನನಗೆ ಸಪೋರ್ಟ್ ಮಾಡಲಿಲ್ಲ. ನಾನು ಒಂಟಿಯಾಗಿಯೇ ಸಿನಿರಂಗಕ್ಕೆ ಬಂದೆ. ಏಕಾಂಗಿಯಾಗಿ ಹೋರಾಟ ಮಾಡಿದೆ. ಆ ಕಾರಣದಿಂದಲೇ ನನಗೆ ಅಷ್ಟೊಂದು ಧೈರ್ಯ ಎಂದು ಹೇಳಿದ್ದಾರೆ. ಮೊದಲಿಗೆ ನಾನು ಸೀರಿಯಲ್ ಗಳಲ್ಲಿ ನಟಿಸುತ್ತಿದೆ. ಬಳಿಕ ನನಗೆ ಸಿನೆಮಾಗಳಲ್ಲಿ ಅವಕಾಶಗಳು ಬಂದವು ನಾನು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ನನಗೆ ಒಳ್ಳೆಯ ಹೆಸರು ತಂದುಕೊಡುತ್ತಿವೆ ಎಂದಿದ್ದಾರೆ.

ಇನ್ನೂ ನನಗೆ ಕುಟುಂಬದಿಂದ ಸಪೋರ್ಟ್ ಇಲ್ಲದೇ ಇದ್ದರೂ ಸಹ ಇದೀಗ ನಮ್ಮ ಕುಟುಂಭ ಸಿನಿರಂಗ, ಸ್ಟಾರ್‍ ಡಮ್ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ವಿಚಾರದಲ್ಲಿ ತುಂಬಾ ಸಂತೋಷದಿಂದ ಇದ್ದಾರೆ. ಇನ್ನೂ ಸೀತಾರಾಮಂ ಸಿನೆಮಾದ ಬಳಿಕ ಮೃಣಾಲ್ ಭಾರಿ ಕ್ರೇಜ್ ಪಡೆದುಕೊಂಡರು. ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಆಕೆ ಮಾತ್ರ ಆತುರ ಪಡದೇ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಆಕೆ NANI30 ಸಿನೆಮಾದಲ್ಲಿ ನಾನಿಯೊಂದಿಗೆ ಹೆಜ್ಜೆ ಹಾಕಲಿದ್ದಾರೆ.

Most Popular

To Top