Film News

ಐಟಂ ಸಾಂಗ್ ಗಾಗಿ ಭಾರಿ ಸಂಭಾವನೆ ಪಡೆದುಕೊಂಡ ಸ್ಟಾರ್ ಹಿರೋ ಪತ್ನಿ….!

ಸಿನಿರಂಗದಲ್ಲಿ ಮದುವೆಯಾದ ಬಳಿಕ ಅನೇಕ ನಟಿಯರು ಸಿನೆಮಾಗಳಿಂದ ದೂರ ಉಳಿಯುತ್ತಾರೆ. ಆದರೆ ಕೆಲವರು ಸಿನೆಮಾಗಳಲ್ಲಿ ಮುಂದುವರೆಯುತ್ತಾರೆ. ಮದುವೆಯಾದ ಬಳಿಕ ಬೋಲ್ಡ್ ಆಗಿ ಕಾಣಿಸಿಕೊಳ್ಳುವುದು ಕಡಿಮೆ ಎನ್ನಬಹುದು. ಕೆಲವರು ಬೋಲ್ಡ್ ಸೀನ್ ಗಳಲ್ಲಿ ನಟಿಸುತ್ತಾರೆ. ಇದೀಗ ಕಾಲಿವುಡ್ ಸಿನಿರಂಗದ ನಟಿ ಹಾಗೂ ಸ್ಟಾರ್‍ ನಟನ ಪತ್ನಿಯೊಬ್ಬರು ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಈ ಹಾಡಿಗಾಗಿ ಆಕೆ ಭಾರಿ ಸಂಭಾವನೆಯನ್ನು ಸಹ ಪಡೆದುಕೊಂಡಿದ್ದಾರೆ. ಆಕೆ ಬೇರೆ ಯಾರೂ ಅಲ್ಲ ಕಾಲಿವುಡ್ ಸ್ಟಾರ್‍ ನಟ ಆರ್ಯ ಪತ್ನಿ ನಟಿ ಸಯೇಶಾ ಸೈಗಲ್.

ತೆಲುಗಿನ ಅಖಿಲ್ ಸಿನೆಮಾದ ಮೂಲಕ ಬೆಳ್ಳಿ ಪರದೆಗೆ ಪರಿಚಯವಾದ ಸಯೇಶಾ ಸೈಗಲ್ ಮೊದಲನೇ ಸಿನೆಮಾ ಸೋಲನ್ನು ಕಂಡಿತ್ತು. ಆಕೆ ಸೈರಾ ಭಾನು ಹಾಗೂ ದಿಲೀಪ್ ಕುಮಾರ್‍ ರವರ ಮುದ್ದಿನ ಮಗಳು. ಸ್ಟಾರ್‍ ನಿರ್ದೇಶಕ ವಿ.ವಿ.ವಿನಾಯಕ್ ತೆರೆಗೆ ತಂದ ಅಖಿಲ್ ಸಿನೆಮಾ ಭಾರಿ ಬಜೆಟ್ ನಲ್ಲಿ ಮೂಡಿಬಂತು. ಆದರೆ ಈ ಸಿನೆಮಾ ಭಾರಿ ಸೋಲನ್ನು ಕಂಡಿತ್ತು. ಬಳಿಕ ಸಯೇಶಾ ಕಾಲಿವುಡ್ ನಲ್ಲಿ ಸೆಟಲ್ ಆದರು. ಅಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ಆಕೆ ಆರ್ಯ ಜೊತೆಗೆ ಪ್ರೀತಿಗೆ ಬಿದ್ದರು. ಇನ್ನೂ ಸಯೇಶಾ ಹಾಗೂ ಆರ್ಯ ನಡುವೆ ಭಾರಿ ವಯಸ್ಸಿನ ಅಂತರವಿದೆ. ಅಂದು ಈ ವಿಚಾರ ಹಾಟ್ ಟಾಪಿಕ್ ಆಗಿತ್ತು. ಇನ್ನೂ ಆಕೆ ತಡ ಮಾಡದೇ 2019 ರಲ್ಲಿ ಮದುವೆಯಾದರು. ಅವರಿಗೆ ಒಂದು ಹೆಣ್ಣು ಮಗು ಸಹ ಇದೆ.

ಮದುವೆಯಾದ ಬಳಿಕವೂ ಸಹ ಸಯೇಶಾ ಸಣ್ಣ ಪುಟ್ಟ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ಐಟಂ ಸಾಂಗ್ ನಲ್ಲಿ ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಕಾಲಿವುಡ್ ರೊಮ್ಯಾಂಟಿಕ್ ಹಿರೋ ಶಿಂಬು ಅಭಿನಯದ ಪತ್ತು ತಲ ಎಂಬ ಸಿನೆಮಾದಲ್ಲಿ ಸಯೇಶಾ ಐಟಂ ಸಾಂಗ್ ಮಾಡಿದ್ದಾರೆ. ಈ ಸಿನೆಮಾವನ್ನು ಓಬೆಲಿ ಎನ್.ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾ ಆಕ್ಷನ್ ಥ್ರಿಲ್ಲರ್‍ ಸಿನೆಮಾ ಆಗಿದ್ದು, ಈ ಸಿನೆಮಾದಲ್ಲೇ ಸಯೇಶಾ ಐಟಂ ಸಾಂಗ್ ಮಾಡಿದ್ದಾರೆ. ಇನ್ನೂ ಈ ಹಾಡಿನಲ್ಲಿ ಕುಣಿಯಲು ಆಕೆ ಭಾರಿ ಸಂಭಾವನೆ ಸಹ ಪಡೆದುಕೊಂಡಿದ್ದಾರಂತೆ. ಮೂಲಗಳ ಪ್ರಕಾರ ನಲವತ್ತು ಲಕ್ಷ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಇನ್ನೂ ಆಕೆಗಿರುವ ಮಾರ್ಕೆಟ್ ನಿಮಿತ್ತ ಇದು ಆಕೆಗೆ ದೊಡ್ಡ ಮೊತ್ತ ಎಂದೇ ಹೇಳಬಹುದು.

ಇನ್ನೂ ಈ ಸಿನೆಮಾದಲ್ಲಿ ಶಿಂಬು ಹಿರೋ ಆಗಿದ್ದು, ಹಿರೋಯಿನ್ ಆಗಿ ಪ್ರಿಯಾ ಭವಾನಿ ಹೆಜ್ಜೆ ಹಾಕಿದ್ದಾರೆ. ಈ ಆಕ್ಷನ್ ಥ್ರಿಲ್ಲರ್‍ ಸಿನೆಮಾಗೆ ಲೆಜೆಂಡರಿ ಮ್ಯೂಜಿಕ್ ಡೈರೆಕ್ಟರ್‍ ಎ.ಆರ್‍.ರೆಹಮಾನ್ ಮ್ಯೂಜಿಕ್ ಕಂಪೋಸ್ ಮಾಡಿದ್ದಾರೆ. ಇನ್ನೂ ಈ ಸಿನೆಮಾ ಮಾ.30 ರಂದು ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಹ ಪಡೆದುಕೊಳ್ಳುತ್ತಿದೆ.

Most Popular

To Top