ಪಿಂಕ್ ಗೌನ್ ನಲ್ಲಿ ಬ್ಯೂಟಿಪುಲ್ ಲುಕ್ಸ್ ಕೊಟ್ಟ ಮೃಣಾಲ್, ಸೀತಾರಾಮಂ ಬ್ಯೂಟಿ ಹಾಟ್ ಪೊಟೋಶೂಟ್ಸ್ ವೈರಲ್…..!

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ಗಳಾಗುತ್ತಾರೆ. ಈ ಹಾದಿಯಲ್ಲೇ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದ ಮೂಲಕ ಅದ್ಬುತವಾದ ನಟನೆಯೊಂದಿಗೆ ಓವರ್‍ ನೈಟ್ ಸ್ಟಾರ್‍ ಆದರು. ಆಕೆಯ ಸೌಂದರ್ಯ ಹಾಗೂ ಅಭಿನಯಕ್ಕೆ ಸಿನೆಮಾ ನೋಡಿದ ಎಲ್ಲರೂ ಫಿದಾ ಆಗಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಮೃಣಾಲ್ ಹೆಚ್ಚಾಗಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಪಿಂಕ್ ಕಲರ್‍ ಗೌನ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಸಿನೆಮಾದಲ್ಲಿ ಸೀರೆ, ಲೆಹಂಗಾ ದಲ್ಲೇ ಕಾಣಿಸಿಕೊಂಡರು. ಈ ಸಿನೆಮಾದಲ್ಲಿ ಆಕೆ ಸೀತಾಮಹಾಲಕ್ಷ್ಮೀ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ಕಾರಣದಿಂದ ಆಕೆಯನ್ನು ಅಭಿಮಾನಿಗಳು ಸೀತೆ ಎಂದು ಕರೆದರು. ಸೀತಾರಾಮಂ ಸಿನೆಮಾದಲ್ಲಿ ಒಂದು ಕಡೆ ಪ್ರಿನ್ಸೆಸ್ ನೂರ್‍ ಜಹಾನ್ ಆಗಿ ಹಿರೋ ರಾಮ್ ಪ್ರೇಯಸಿಯಾಗಿ ಸೀತಾಮಹಾಲಕ್ಷ್ಮೀಯಾಗಿ ತುಂಬಾ ಅದ್ಬುತವಾಗಿ ನಟಿಸಿದ್ದರು. ಜೊತೆಗೆ ಎಮೋಷನಲ್ ದೃಶ್ಯಗಳಲ್ಲೂ ಸಹ ಆಕೆ ತುಂಭಾ ಅದ್ಬುತವಾಗಿ ನಟಿಸಿದ್ದರು. ಇದೀಗ ಆಕೆ ಟಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ನಟಿಯರ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಇದೀಗ ಆಕೆಗೆ ಭಾರಿ ಆಫರ್‍ ಗಳು ಹರಿದುಬರುತ್ತಿವೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಸದ್ಯ ಸಿನೆಮಾಗಳಿಂದ ಬಿಡುವು ಪಡೆದುಕೊಂಡ ಮೃಣಾಲ್ ವೆಕೇಷನ್ ಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ವೆಕೇಷನ್ ಗಳಲ್ಲಿ ಎಂಜಾಯ್ ಮಾಡುತ್ತಾ ಅಲ್ಲಿನ ಕೆಲವೊಂದು ಪೊಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕಡಲ ತೀರದಲ್ಲಿ ಪಿಂಕ್ ಕಲರ್‍ ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತನ್ನ ಥೈಸ್ ಹೈಲೈಟ್ ಆಗುವಂತೆ ಪೋಸ್ ಕೊಟ್ಟಿದ್ದಾರೆ. ಹಾಟ್ ಪೊಟೋಗಳ ಜೊತೆಗೆ ಕ್ಯೂಟ್ ಸ್ಮೈಲ್ ಕೊಡುತ್ತಾ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಸದ್ಯ ಆಕೆಯ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

2012ರಲ್ಲಿ ಕಿರುತೆರೆಯ ಮೂಲಕ ಕೆರಿಯರ್‍ ಆರಂಭಿಸಿದ ಈಕೆ ಕಡಿಮೆ ಸಮಯದಲ್ಲೇ ಭಾರಿ ಕ್ರೇಜ್ ಪಡೆದುಕೊಂಡರು. ಸದ್ಯ ಆಕೆಯ ಕೈಯಲ್ಲಿ ಎರಡು ತೆಲುಗು ಹಾಗೂ ಮೂರು ಹಿಂದಿ ಸಿನೆಮಾಗಳಿವೆ. ನಾನಿ ಜೊತೆಗೆ ಹಾಯ್ ನಾನ್ನ ಎಂಬ ಸಿನೆಮಾದಲ್ಲಿ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.