ಮದುವೆ ಆಗೋಕೆ ಹುಡುಗ ಸಿಕ್ತಾ ಇಲ್ಲ ಎಂದ ನಟಿ ಮೃಣಾಲ್ ಠಾಕೂರ್, ಕ್ರೇಜಿ ಕಾಮೆಂಟ್ಸ್ ಮಾಡಿದ ನೆಟ್ಟಿಗರು…..!

Follow Us :

ಸ್ಟಾರ್‍ ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಎಂಬ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದರು. ಈ ಸಿನೆಮಾದಲ್ಲಿ ಆಕೆಯ ನಟನೆ ಹಾಗೂ ಟ್ರೆಡಿಷನಲ್ ಲುಕ್ಸ್ ಮೂಲಕ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದರು. ಆದರೆ ಆಕೆ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಕೆ ನಟಿಸಿದ ಲಸ್ಟ್ ಸ್ಟೋರೀಸ್-2 ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇದೀಗ ಆಕೆಗೆ ಮದುವೆಯಾಗೋಕೆ ಹುಡುಗ ಸಿಕ್ತಾ ಇಲ್ಲ ಎಂದು ಹೇಳಿದ್ದು, ಆಕೆಯ ಕಾಮೆಂಟ್ಸ್ ಗೆ ನೆಟ್ಟಿಗರು ಕ್ರೇಜಿಯಾಗಿ ರಿಯಾಕ್ಟ್ ಆಗುತ್ತಿದ್ದಾರೆ.

ಮೊದಲನೇ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ. ಬೋಲ್ಡ್ ಪೊಟೋಗಳ ಮೂಲಕ ನೆಟ್ಟಿಗರನ್ನು ಫಿದಾ ಮಾಡುತ್ತಿರುತ್ತಾರೆ. ಇದೀಗ ಆಕೆ ತಮ್ಮ ಸಿನೆಮಾ ವೊಂದರ ಪ್ರಮೋಷನ್ ಗಾಗಿ ವಿಶೇಷ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಆಕೆ ತಮ್ಮ ಮದುವೆಯ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿ ಮದುವೆಯಾಗುವಂತೆ ಒತ್ತಡ ಸಹ ಹೆಚ್ಚಾಗುತ್ತಿದೆಯಂತೆ. ತಾವು ಸಹ ತಮಗಿಷ್ಟವಾದ ಹುಡುಗನನ್ನು ಹುಡುಕುವ ಕೆಲಸದಲ್ಲಿದ್ದಾರಂತೆ. ಇದೀಗ ಆಕೆ ಹಂಚಿಕೊಂಡ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸಂದರ್ಶನದಲ್ಲಿ ಮಾತನಾಡಿದ ಮೃಣಾಲ್ ಸದ್ಯ ನನಗೆ 31 ವರ್ಷವಾಗಿದ್ದು, ನಾನಿನ್ನು ಸಿಂಗಲ್ ಆಗಿದ್ದೇನೆ. ನನ್ನ ಇಷ್ಟದಂತೆ ಲಕ್ಷಣಗಳಿರುವ ಹುಡುಗ ಸಿಕ್ಕರೇ ಖಂಡಿತಾ ಮದುವೆಯಾಗುತ್ತೇನೆ ಎಂದಿದ್ದಾರೆ. ಮನೆಯಲ್ಲಿ ಮದುವೆಗೆ ಒತ್ತಡ ಇದೆಯಾ ಎಂದು ಪ್ರಶ್ನೆ ಸಹ ಎದುರಾಗಿದೆ. ಅದಕ್ಕೂ ಉತ್ತರಿಸಿದ ಆಕೆ ಮನೆಯಲ್ಲಿ ಒತ್ತಡ ಇದೆ ಆದರೆ ಹುಡುಗ ಸಿಗಬೇಕಲ್ಲವೇ, ನಾನು ಒಬ್ಬ ಹುಡುಗನ್ನು ಹುಡುಕುತ್ತಿದ್ದೇನೆ. ಆತನ ಹೆಸರು ಕೀನು ರೀವ್ಸ್ ಎಂದು. ಕೆನಡಾದ ನಟ ಹಾಗೂ ಸಂಗೀತಗಾರ ಕೀನು ರೀವ್ಸ್ ನನಗೆ ಸಿಕ್ಕರೇ ತುಂಬಾ ಖುಷಿಪಡುತ್ತೇನೆ ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಹಳೇಯ ರಿಲೇಷನ್ ಶಿಪ್ ಬಗ್ಗೆ ಸಹ ಹೇಳಿದ್ದಾರೆ. ನನಗೆ ಒಬ್ಬ ಬಾಯ್ ಫ್ರೆಂಡ್ ಇದ್ದ. ಆದರೆ ನನ್ನ ಹಠಮಾರಿತನ ನೋಡಿ ಆತ ಓಡಿ ಹೋದ. ಆತನಿಗೆ ನಾನು ನಟಿಯಾಗೋದು, ಹಠಮಾರಿಯಾಗಿರುವುದು ಇಷ್ಟವಿರಲಿಲ್ಲ. ಆತ ತುಂಬಾ ಸಂಪ್ರದಾಯಬದ್ದವಾದ ಕುಟುಂಬದಿಂದ ಬಂದಿದ್ದು, ಆತ ಹೇಳಿದ್ದು ಸರಿಯಾಗಿತ್ತು ಎಂದಿದ್ದಾರೆ.

ಇನ್ನೂ ಮೃಣಾಲ್ ಹಂಚಿಕೊಂಡ ಕಾಮೆಂಟ್ ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನಾಳೆಯಿಂದ ಸ್ವಯಂವರಕ್ಕೆ ನಿಮ್ಮ ಮನೆಯ ಮುಂದೆ ಬಂದು ನಿಲ್ಲೋದಾ ಎಂದು ಕ್ರೇಜಿಯಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಮೃಣಾಲ್ ಆಂಖ್ ಮಂಚೋಲಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾ ಅ.27 ರಂದು ತೆರೆಗೆ ಬರಲಿದೆ. ಜೊತೆಗೆ ಪೂಜಾ ಮೇರಿಜಾನ್, ಪಿಪ್ಪಾ, ಹಾಯ್ ನಾನ್ನ ಎಂಬ ಸಿನೆಮಾಗಳಲ್ಲಿ ಸಹ ಮೃಣಾಲ್ ಬ್ಯುಸಿಯಾಗಿದ್ದಾರೆ.