News

ಭಾರತ್ ಅರ್ಥ್ ಮೂವರ್ಸ್ ನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನರ್ಸ್ ಸೇರಿದಂತೆ ಏರೋಸ್ಪೇಸ್, ಇಂಜನೀಯರಿಂಗ್ ವಿಭಾಗದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ….!

ಭಾರತ್ ಅರ್ಥ್ ಮೂರ್ವಸ್ ಲಿಮಿಟೆಡ್ ವತಿಯಿಂದ ಡಿಫೆನ್ಸ್ ಮತ್ತು ಏರೋಸ್ಪೇಸ್, ಗಣಿಗಾರಿಕೆ ಹಾಗೂ ಹೆವಿ ಇಂಜನೀಯರಿಂಗ್ ಕಂಪನಿಯಲ್ಲಿ ಖಾಲಿಯಿರುವ ಗ್ರೂಪ್ ಸಿ ವಿಭಾಗದ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್‍ 18 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕವನ್ನು ಪಾವತಿಸಲು ಕೊನೆಯ ಅಕ್ಟೊಬರ್‍ 18 ಕೊನೆಯ ದಿನಾಂಕವಾಗಿರುತ್ತದೆ.

ಹುದ್ದೆಗಳ ವಿವರ : ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್: 52 ಹುದ್ದೆ, ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್ : 27 ಹುದ್ದೆ, ಡಿಪ್ಲೊಮಾ ಟ್ರೈನಿ-ಸಿವಿಲ್ : 07 ಹುದ್ದೆ, ಐಟಿಐ ಟ್ರೈನಿ-ಟರ್ನರ್ : 16 ಹುದ್ದೆ, ಐಟಿಐ ಟ್ರೈನಿ-ಮೆಷಿನಿಸ್ಟ್ : 16 ಹುದ್ದೆ, ಸ್ಟಾಫ್ ನರ್ಸ್ : 01 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪಿಡ್ಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯತಿಯಿದ್ದು, ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ 200 ಶುಲ್ಕ ನಿಗಧಿಪಡಿಸಲಾಗಿದೆ. ಕನಿಷ್ಟ 18 ವರ್ಷ, ಗರಿಷ್ಟ 29 ವರ್ಷಗಳು. ಆನ್ ಲೈನ್ ಮೂಲಕ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಶೈಕ್ಷಣಿಕ ವಿದ್ಯಾರ್ಹತೆ:

  • ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
  • ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
  • ಡಿಪ್ಲೊಮಾ ಟ್ರೈನಿ-ಸಿವಿಲ್ : ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು.
  • ಐಟಿಐ ಟ್ರೈನಿ-ಟರ್ನರ್ : ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ ಪ್ರಮಾಣಪತ್ರದೊಂದಿಗೆ ಐಟಿಐ ಟರ್ನರ್ ವಿಭಾಗದಲ್ಲಿ ಶೇಕಡಾ 60 ಅಂಕ ಪಡೆದಿರಬೇಕು.
  • ಐಟಿಐ ಟ್ರೈನಿ-ಮೆಷಿನಿಸ್ಟ್ : ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ ಪ್ರಮಾಣಪತ್ರದೊಂದಿಗೆ ಐಟಿಐ ಮೆಷಿನಿಸ್ಟ್ ಟ್ರೇಡ್ ವಿಭಾಗದಲ್ಲಿ ಶೇಕಡಾ 60 ಅಂಕ ಪಡೆದಿರಬೇಕು.
  • ಸ್ಟಾಫ್ ನರ್ಸ್ : ಬಿ ಎಸ್ಸಿ (ನರ್ಸಿಂಗ್) ಅಥವಾ ಎಸ್.ಎಸ್.ಎಲ್.ಸಿ ಮತ್ತು 3 ವರ್ಷ ನರ್ಸಿಂಗ್ ಡಿಪ್ಲೊಮಾ ಮಾಡಿರಬೇಕು.

ವೇತನ ಶ್ರೇಣಿ:

  • ಡಿಪ್ಲೊಮಾ ಟ್ರೈನಿ ಮೆಕ್ಯಾನಿಕಲ್    : ರೂ. 23,910 ರಿಂದ 85,570
  • ಡಿಪ್ಲೊಮಾ ಟ್ರೈನಿ-ಎಲೆಕ್ಟ್ರಿಕಲ್      : 23,910 ರಿಂದ 85,570
  • ಡಿಪ್ಲೊಮಾ ಟ್ರೈನಿ-ಸಿವಿಲ್          : 23,910 ರಿಂದ 85,570
  • ಐಟಿಐ ಟ್ರೈನಿ-ಟರ್ನರ್             : 16,900 ರಿಂದ 60,650
  • ಐಟಿಐ ಟ್ರೈನಿ-ಮೆಷಿನಿಸ್ಟ್           : 16,900 ರಿಂದ 60,650
  • ಸ್ಟಾಫ್ ನರ್ಸ್                     : 18,780 ರಿಂದ 67,390

Most Popular

To Top