Film News

ವೈರಲ್ ಆಯ್ತು ಕಿಯಾರ ಗರ್ಭಿಣಿಯೆಂಬ ಸುದ್ದಿ, ಬಾಲಿವುಡ್ ಮಿಡಿಯಾ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್….!

ಸಿನಿಮಾ ಸೆಲೆಬ್ರೆಟಿಗಳು ತಮ್ಮ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳು, ವಿವಾದಗಳ ಮೂಲಕವೇ ತುಂಬಾ ಸುದ್ದಿಯಾಗುತ್ತಿರುತ್ತಾರೆ. ಅವರ ಬಗ್ಗೆ ಸುದ್ದಿಯೇನಾದರು ಕೇಳಿಬಂದರೇ ಸಾಕು ಅದು ನಿಜವಾಗಿರಲಿ, ಸುಳ್ಳಾಗಿರಲಿ ಸಖತ್ ವೈರಲ್ ಆಗುತ್ತಿರುತ್ತದೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ಕಿಯಾರಾ ಅಡ್ವಾನಿ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯೊಂದು ಸೊಷಿಯಲ್ ಮಿಡಿಯಾ ಹಾಗೂ ಬಾಲಿವುಡ್ ನಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಫೆಬ್ರವರಿ ಮಾಹೆಯಲ್ಲಿ ಮದುವೆಯಾದ ಕಿಯಾರಾ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಗರ್ಭಿಣಿಯೆಂಬ ಸುದ್ದಿ ಹಾಟ್ ಟಾಪಿಕ್ ಆಗಿದೆ.

ನಟಿ ಕಿಯಾರಾ ಮದುವೆ ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಸ್ಟಾರ್‍ ನಟ ಕಾರ್ತಿಕ್ ಆರ್ಯನ್ ಜೊತೆಗೆ ಸತ್ಯ ಪ್ರೇಮ್ ಕಿ ಕಥಾ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯುತ್ತಿವೆ. ಈ ಹಾದಿಯಲ್ಲೆ ಜೈಪುರದಲ್ಲಿ ನಡೆದ ಪ್ರಮೋಷನ್ ನಲ್ಲಿ ಕಿಯಾರಾ ಹಾಗೂ ಕಾರ್ತಿಕ್ ಆರ್ಯನ್ ಭಾಗಿಯಾಗಿದ್ದು, ಸಖತ್ ಸದ್ದು ಮಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪೊಟೋಗಳಲ್ಲಿ ಕಿಯಾರಾಗೆ ಹೊಟ್ಟೆ ಕೊಂಚ ಮುಂದೆ ಬಂದಂತೆ ಕಾಣಿಸಿದ ಹಿನ್ನೆಲೆಯಲ್ಲಿ ಆಕೆ ಗರ್ಭಿಣಿಯೆಂಬ ರೂಮರ್‍ ಜೋರಾಗಿಯೇ ಹರಿದಾಡಿದೆ. ಸೋಷಿಯಲ್ ಮಿಡಿಯಾ ಹಾಗೂ ಕೆಲವೊಂದು ಮಿಡಿಯಾಗಳಲ್ಲೂ ಸಹ ಸುದ್ದಿ ಹರಿದಾಡಿದೆ.

ಇನ್ನೂ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರಾದ ಚರ್ಚೆಗಳೂ ಸಹ ನಡೆದಿದೆ. ಕಿಯಾರಾ ಧರಿಸಿದ ಡ್ರೆಸ್ ನಲ್ಲಿ ಆ ರೀತಿ ಕಾಣಿಸಿದ್ರಾ ಅಥವಾ ನಿಜಕ್ಕೂ ಆಕೆ ಗರ್ಭಿಣಿಯಾದ್ರಾ ಎಂಬ ಅನುಮಾನಗಳು ಅನೇಕರನ್ನು ಕಾಡುತ್ತಿವೆ. ಇನ್ನೂ ಅನೇಕರು ಕಿಯಾರಾಗೆ ಶುಭಾಷಯಗಳನ್ನು ಕೋರುತ್ತಿದ್ದಾರೆ. ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಅದು ಬೇಬಿ ಬಂಪ್ ಅಲ್ಲ. ಕಿಯಾರಾ ಧರಿಸಿದ ಡ್ರೆಸ್ ಆ ರೀತಿಯಿದೆ. ಒಂದು ವೇಳೆ ಅದು ನಿಜವೇ ಆಗಿದ್ದರೇ ಏಕೆ ಮುಚ್ಚಿಡುತ್ತಾರೆ. ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದು ಏನೇ ಇರಲಿ ಕಿಯಾರಾ ಗರ್ಭಿಣಿಯೆಂಬ ಸುದ್ದಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ವೈರಲ್ ಆಗುತ್ತಿದೆ.

ಕಳೆದ ವರ್ಷ ಫೆಬ್ರವರಿ ಮಾಹೆಯಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ ಮಲ್ಹೋತ್ರಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಜೈಪುರ್‍ ನಲ್ಲಿರು ಪ್ಯಾಲೆಸ್ ನಲ್ಲಿ ಅವರಿಬ್ಬರು ಸಪ್ತಪದಿ ತುಳಿದರು. ಮದುವೆಯಾದ ಬಳಿಕ ವೆಕೇಷನ್ಸ್, ಹನಿಮೂನ್ ಎಲ್ಲಾ ಮುಗಿಸಿಕೊಂಡು ಈ ಜೋಡಿ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿಯಾರಾ ಟಾಲಿವುಡ್ ನಲ್ಲಿ ಗ್ಲೊಬಲ್ ಸ್ಟಾರ್‍ ರಾಮ್ ಚರಣ್ ಜತೆಗೆ ಗೇಂ ಚೇಂಜರ್‍ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top