Film News

ಸುಮಾರು ದಿನಗಳ ಬಳಿಕ ಟ್ರೆಡಿಷನಲ್ ಲುಕ್ಸ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡ ಪೂಜಾ ಹೆಗ್ಡೆ, ನಿಜಕ್ಕೂ ನೀನು ಬುಟ್ಟಬೊಮ್ಮ ಎಂದ ಫ್ಯಾನ್ಸ್….!

ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಪುಲ್ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿರುವ ನಟಿಯರ ಸಾಲಿಗೆ ಪೂಜಾ ಹೆಗ್ಡೆ ಸೇರುತ್ತಾರೆ.  ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಲಿಲ್ಲ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲೂ ಪುಲ್ ಆಕ್ಟೀವ್ ಆಗಿರುತ್ತಾರೆ. ಸುಮಾರು ದಿನಗಳ ಬಳಿಕ ಪೂಜಾ ಹೆಗ್ಡೆ ಟ್ರೆಡಿಷನಲ್ ಲುಕ್ಸ್ ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಮುಂಬೈನಿಂದ ಬಂದು ಸೌತ್ ನಲ್ಲಿ ಅದರಲ್ಲೂ ಟಾಲಿವುಡ್ ಸಿನೆಮಾಗಳಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಪೂಜಾ ಹೆಗ್ಡೆ ವರುಣ್ ತೇಜ್ ಜೊತೆಗೆ ಮುಕುಂದ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಕಾಲಿಟ್ಟರು. ಬಳಿಕ ನಾಗಚೈತನ್ಯ ಜೊತೆಗೆ ಒಕ ಲೈಲಾ ಕೋಸಂ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ಆದರೆ ಈ ಎರಡೂ ಸಿನೆಮಾಗಳು ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು. ಬಳಿಕ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಡಿಜೆ ಸಿನೆಮಾದಲ್ಲಿ ಅವಕಾಶ ಬಂತು. ಈ ಸಿನೆಮಾದ ಮೂಲಕ ಆಕೆ ಭಾರಿ ಕ್ರೇಜ್ ಪಡೆದುಕೊಂಡರು.  ಬಳಿಕೆ ಕ್ರೇಜಿ ನಟಿಯಾಗಿ ಅನೇಕ ಸ್ಟಾರ್‍ ಗಳೊಂದಿಗೆ ನಟಿಸಿದರು. ಆದರೆ ಕಳೆದ ವರ್ಷ ಮಾತ್ರ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರು. ಆಕೆಯ ಒಂದೂ ಸಿನೆಮಾ ಸಹ ಸಕ್ಸಸ್ ಕಾಣಲಿಲ್ಲ. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಈಗಲೂ ಆಕೆ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ನಟಿ ಪೂಜಾ ಹೆಗ್ಡೆ ಇತ್ತಿಚಿಗೆ ಸದಾ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳಲ್ಲಿ ಮೊದಲಿಗೆ ಪೂಜಾ ತುಂಬಾ ಪದ್ದತಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ತುಂಬಾ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂಜಾ ಹೆಗ್ಡೆ ತುಂಬಾ ದಿನಗಳ ಬಳಿಕ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈನಿಂದ ಚೆನೈಗೆ ಹೋಗಲು ಆಕೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಋಎ. ಈ ವೇಳೆ ಆಕೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹಳದಿ ಬಣ್ಣದ ಟ್ರೆಡಿಷನಲ್ ಡ್ರೆಸ್ ನಲ್ಲಿ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಪೊಟೋಗಳನ್ನು ನೋಡಿದ ಆಕೆ ಅಭಿಮಾನಿಗಳು ನಿಜಕ್ಕೂ ನೀವು ಬುಟ್ಟಬೊಮ್ಮ ಮಾದರಿಯಲ್ಲೇ ಕಾಣಿಸುತ್ತಿದ್ದೀಯಾ ಎಂದು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಕೆಲವೊಂದು ಕಾರಣಗಳಿಂದ ಪೂಜಾ ಹೆಗ್ಡೆ ಗುಂಟೂರು ಖಾರಂ ಸಿನೆಮಾದಿಂದ ಹೊರಬಂದರು. ಜೊತೆಗೆ ಪವನ್ ಕಲ್ಯಾಣ್ ರವರ ಉಸ್ತಾದ್ ಭಗತ್ ಸಿಂಗ್ ಸಿನೆಮಾದಿಂದಲೂ ಆಕೆ ಹೊರಬಂದರು. ಶೂಟಿಂಗ್ ಆರಂಭವಾಗಿದ್ದ ಸಿನೆಮಾಗಳಿಂದ ಆಕೆ ಹೊರಬಂದಿದ್ದು ಏಕೆ ಎಂಬ ವಿಚಾರ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ. ಅದೆಲ್ಲವನ್ನೂ ಪಕ್ಕಕ್ಕಿಟ್ಟರೇ ಪೂಜಾ ಹೆಗ್ಡೆ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ.

Most Popular

To Top