Film News

ನನ್ನ ಹುಡುಗನೊಂದಿಗೆ ಅಲ್ವಾ ರೊಮ್ಯಾನ್ಸ್ ಮಾಡಿದ್ದು, ಅದರಲ್ಲಿ ತಪ್ಪೇನು ಎಂದು ಮಿಲ್ಕಿ ಬ್ಯೂಟಿ ತಮನ್ನಾ….!

ಪ್ರಸಕ್ತ ವರ್ಷದಲ್ಲಿ ಸೌತ್ ಸಿನಿರಂಗದಲ್ಲಿ ಅತೀ ಹೆಚ್ಚು ಸುದ್ದಿಯಾದ ನಟಿಯರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಮೊದಲ ಸ್ಥಾನದಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಹೊಸ ವರ್ಷದ ಸಂಭ್ರಮಾಚರಣೆಯಿಂದ ತಮನ್ನಾ ಬಗ್ಗೆ ಸುದ್ದಿಗಳು ಹರಿದಾಡಿದವು. ಅಂದಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕಾಗಿ ಆಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಮಾತ್ರ ನೆಕ್ಸ್ಟ್ ಲೆವಲ್ ಎಂಬಂತೆ ವೈರಲ್ ಆಗಿತ್ತು.ಇದೀಗ ಆಕೆ ಮತ್ತೊಂದು ಕಾಮೆಂಟ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ನಟಿ ತಮನ್ನಾ ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗದಲ್ಲಿ ಸದ್ದು ಮಾಡಿದ ನಟಿಯಾಗಿದ್ದಾರೆ. ಇತ್ತಿಚಿಗೆ ಆಕೆ ಎರಡು ವೆಬ್ ಸಿರೀಸ್ ಗಳಲ್ಲಿ ನಟಿಸಿದ್ದರು. ಈ ವೆಬ್ ಸಿರೀಸ್ ಗಳಲ್ಲಿ ತಮನ್ನಾ ಬೋಲ್ಡ್, ಇಂಟಿಮೇಟ್, ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ತಮನ್ನಾ ಕೆರಿಯರ್‍ ನಲ್ಲಿ ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಈ ಸಿರೀಸ್ ಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಜೀ ಖರ್ದಾ ಎಂಬ ಸಿರೀಸ್ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಮತ್ತೊಂದು ಲಸ್ಟ್ ಸ್ಟೋರೀಸ್-2 ಎಂಬ ಸಿರೀಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸದ್ಯ ಜೀ ಖರ್ದಾ ಸೀರಿಸ್ ರಿಲೀಸ್ ಆಗಿದ್ದು, ಈ ಸಿರೀಸ್ ನಲ್ಲಿ ತಮನ್ನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅನೇಕ ವಿಮರ್ಶೆಗಳೂ ಸಹ ಕೇಳಿಬಂದಿದೆ.

ಇನ್ನೂ ತಮನ್ನಾ ಕಾಣಿಸಿಕೊಂಡ ಲಸ್ಟ್ ಸ್ಟೋರೀಸ್-2 ಸಿರೀಸ್ ಬಗ್ಗೆ ಅನೇಕ ಸಂದರ್ಶನದಲ್ಲಿ ತಮನ್ನಾ ಹಾಟ್ ಕಾಮೆಂಟ್ಸ್ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಹಾಟ್ ಕಾಮೆಂಟ್ ಮಾಡಿದ್ದಾರೆ. ಲಸ್ಟ್ ಸ್ಟೋರಿಸ್ ಸಿರೀಸ್ ನಲ್ಲಿ ತಮನ್ನಾ ಜೀ ಖರ್ದಾ ಸಿರೀಸ್ ಗಿಂತಲೂ ಬೋಲ್ಡ್ ಆಗಿ ನಟಿಸಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಗಳಿಗೆ ಏನು ಕೊರತೆಯಿಲ್ಲ ಎಂದು ಸಿರೀಸ್ ನ ಟ್ರೈಲರ್‍ ಮೂಲಕ ತಿಳಿದುಬಂದಿದೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮನ್ನಾ ಮತ್ತೊಮ್ಮೆ ಈ ಬಗ್ಗೆ ಮಾತನಾಡಿದ್ದಾರೆ. ನಾನು ಬದಲಾಗಬೇಕಾದ ಸಮಯ ಬಂದಿದೆ. ವಿಜಯ್ ವರ್ಮಾ ಜೊತೆಗೆ ನಟಿಸಿದ ಹಿನ್ನೆಲೆಯಲ್ಲಿ ಬೋಲ್ಡ್ ಸನ್ನಿವೇಶಗಳಲ್ಲಿ ನನಗೆ ಯಾವುದೇ ರೀತಿಯ ಕಿರಿಕಿರಿ ಅನ್ನಿಸಿಲ್ಲ. ನಾನು ರೊಮ್ಯಾನ್ಸ್ ಮಾಡಿದ್ದು ನನ್ನ ಹುಡುಗನ ಜೊತೆ ಅಲ್ವಾ ಏನು ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.

ಇನ್ನೂ ವಿಜಯ್ ವರ್ಮಾ ನನ್ನ ಜೀವನದಲ್ಲಿ ಬಂದಿದ್ದು, ನನ್ನ ಅದೃಷ್ಟ ಎಂದು ಆಕೆ ಹೇಳಿಕೊಂಡಿದ್ದಾರೆ. ಇನ್ನೂ ತಮನ್ನಾ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ. ಮೊದಲಿಗೆ ಎಲ್ಲವೂ ಸುಳ್ಳು ಎಂದು ಹೇಳಿದ ತಮನ್ನಾ ಇದೀಗ ವಿಜಯ್ ವರ್ಮಾ ಜೊತೆಗಿನ ಸಂಬಂಧದ ಬಗ್ಗೆ ಒಪೆನ್ ಆಗಿದ್ದಾರೆ.

Most Popular

To Top