ನಿಮ್ಮನ್ನು ನೋಯಿಸಿದ್ದರೇ ನನ್ನನ್ನು ಕ್ಷಮಿಸಿಬಿಡಿ ಎಂದ ಕಂಗನಾ, ವೈರಲ್ ಆದ ಶಾಕಿಂಗ್ ಕಾಮೆಂಟ್ಸ್…!

ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿವಾದಗಳ ಮೂಲಕ ಸುದ್ದಿಯಾಗುವ ನಟಿಯರಲ್ಲಿ ಬಾಲಿವುಡ್ ಸ್ಟಾರ್‍ ನಟಿ ಕಂಗನಾ ರಾಣವತ್ ಮೊದಲ ಸ್ಥಾನದಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ದೊಡ್ಡ ಸ್ಟಾರ್‍ ಸೆಲೆಬ್ರೆಟಿಗಳಿಂದ ಹಿಡಿದು ದೊಡ್ಡ ರಾಜಕಾರಣಿಗಳ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಶಾಕಿಂಗ್ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಯಾರಿಗೂ ಭಯಪಡದೇ ನೇರವಾಗಿ ಮಾತನಾಡುವಂತಹ ವ್ಯಕ್ತತ್ವ ಹೊಂದಿರುತ್ತಾರೆ. ಜೊತೆಗೆ ಆಕೆಗೆ ಎದುರಾಗುವ ವಿಮರ್ಶೆಗಳನ್ನೂ ಸಹ ಧೈರ್ಯವಾಗಿಯೇ ಎದುರಿಸುತ್ತಾರೆ. ಇದೀಗ ಆಕೆ ಕ್ಷಮಿಸಿ ಎಂದು ಕಾಮೆಂಟ್ ಮಾಡಿದ್ದು, ಆಕೆ ಯಾರಿಗೆ, ಏಕೆ ಕ್ಷಮೆ ಕೇಳಿದ್ದು ಎಂದು ಇಂಡಸ್ಟ್ರಿಯಲ್ಲಿ ಚರ್ಚನೀಯವಾದ ಅಂಶವಾಗಿದೆ.

ನಟಿ ಕಂಗನಾ ರಾಣವತ್ ಏನಾದರೂ ಪೋಸ್ಟ್ ಇಟ್ಟರೇ ಸಾಕು ಅದು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಆಕೆ ಕ್ಷಮೆ ಕೋರಿದ್ದು ಹಾಟ್ ಟಾಪಿಕ್ ಆಗಿದೆ. ಅದನ್ನು ಬಾಲಿವುಡ್ ನಲ್ಲಿ ವಿಚಿತ್ರ ಎಂದೇ ಹೇಳಲಾಗುತ್ತಿದೆ. ಕಂಗನಾ ತನ್ನ ಹುಟ್ಟುಹಬ್ಬದ ಅಂಗವಾಗಿ ನನ್ನನ್ನು ಕ್ಷಮಿಸಿಬಿಡಿ ಎಂದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕಳೆದ ಗುರುವಾರ ಆಕೆಯ 36ನೇ ಹುಟ್ಟುಹಬ್ಬದ ಅಂಗವಾಗಿ ಆಕೆ ಈ ವಿಡಿಯೋ ಮಾಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಕ್ಷಮೆ ಕೇಳಿದ್ದು ಬೇರೆ ಯಾರಿಗೂ ಅಲ್ಲ ನೆಟ್ಟಿಗರಿಗೆ. ಅದೂ ತಾನು ಅಭಿಮಾನಿಸುವ, ಅನುಸರಿವವರು ಹಾಗೂ ದ್ವೇಷ ಮಾಡುವವರನ್ನು ಉದ್ದೇಶಿಸಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ನನ್ನ ಶತ್ರುಗಳು ನನ್ನನ್ನು ವಿಶ್ರಾಂತಿ ಇಲ್ಲದೇ ಮಾಡಿದ್ದಾರೆ. ನಾನು ಎಷ್ಟು ಸಕ್ಸಸ್ ಆಗಿದ್ದೇನೆ ಎಂಬುದು ಮುಖ್ಯವಲ್ಲ. ನಾನು ನನ್ನ ಕಾಲಿನ ಮೇಲೆ ನಿಂತು, ಯಶಸ್ಸು ಗಳಿಸಲು, ಹೇಗೆ ಹೋರಾಡಬೇಕು ಎಂಬುದನ್ನು ಕಲಿಸಿಕೊಟ್ಟಿದ್ದಾರೆ ಅವರಿಗೆಲ್ಲಾ ಕೃತಜ್ಞತೆಗಳನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಇನ್ನೂ ತನ್ನ ಸ್ನೇಹಿತರ ಬಗ್ಗೆ ಸಹ ಕಾಮೆಮಟ್ ಮಾಡಿದ್ದಾರೆ. ಸ್ನೇಹಿತರೇ ನನ್ನ ಸಿದ್ದಾಂತ ತುಂಬಾ ಸುಲಭ, ನನ್ನ ವರ್ತನೆ, ಆಲೋಚನೆಗಳೂ ಸಹ ಸಾಮಾನ್ಯವಾಗಿರುತ್ತದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾನು ಸದಾ ಕೋರುತ್ತೇನೆ. ದೇಶಕ್ಕಾಗಿಯೇ ನಾನು ಮಾತನಾಡುತ್ತೇನೆ. ನಾನು ಯಾರಿಗಾದರೂ ನೋವು ಕೊಟ್ಟಿದ್ದರೇ ಅವರಿಗೆ ನಾನು ಕ್ಷಮೆ ಕೋರುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಸೀರೆಯಲ್ಲಿ ಕಂಗನಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ಬಂಗಾರವನ್ನು ಧರಿಸಿ ಮಿಂಚಿದ್ದಾರೆ ಕಂಗನಾ. ಇನ್ನೂ ತನಗೆ ಬೆಂಬಲ ನೀಡಿದ ತಂದೆ ತಾಯಿಯವರಿಗೆ. ತನ್ನು ವಿದ್ಯೆ ಕಲಿಸಿಕೊಟ್ಟ ಶಿಕ್ಷಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ತನ್ನನ್ನು ದ್ವೇಷ ಮಾಡಿದವರ ಬಗ್ಗೆ ಸಹ ಮಾತನಾಡಿದ್ದಾರೆ. ನಾನು ಯಾರಿಗಾದರೂ ನೋವು ಕೊಟ್ಟಿದ್ದರೇ ಕ್ಷಮಿಸಿ ಎಂದು ಕಂಗನಾ ಹೇಳಿದ್ದಾರೆ. ಇನ್ನೂ ಕಂಗನಾ ರವರ ಈ ವಿಚಿತ್ರ ಪೋಸ್ಟ್ ಕಂಡ ಅನೇಕರು ಶಾಕ್ ಆಗಿದ್ದಾರೆ.