Film News

ಚಂದಮಾಮ ಕಾಜಲ್ ಗೆ ಮತ್ತೊಂದು ಅವಕಾಶ ಕೊಟ್ಟ ಮೆಗಾಸ್ಟಾರ್, ವಿಶ್ವಂಭರ ಸಿನೆಮಾದಲ್ಲಿ ನಟಿಸಲಿದ್ದಾರಂತೆ ಕಾಜಲ್ ಅಗರ್ವಾಲ್…..!

ಸ್ಟಾರ್‍ ನಟಿ ಕಾಜಲ್ ಮದುವೆಗೂ ಮುಂಚೆ ಒಂದು ಮಾದರಿ, ಮದುವೆಯಾದ ಬಳಿಕ ಒಂದು ಮಾದರಿಯಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ನಟಿಯಾಗಿ ತನ್ನ ಫೇಂ ಮುಂದುವರೆಸುತ್ತಾ, ಮತ್ತಷ್ಟು ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮೆಗಾಸ್ಟಾರ್‍ ರವರ ಜೊತೆಗೆ ಆಕೆ ವಿಶ್ವಂಭರ ಸಿನೆಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ಸ್ಟಾರ್‍ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕಾಜಲ್ ತಮ್ಮ ಕೆರಿಯರ್‍ ನಲ್ಲಿ ಸಕ್ಸಸ್ ಗ್ರಾಫ್ ಡೌನ್ ಆಗದಂತೆ ನೋಡಿಕೊಂಡಿದ್ದರು. ಲಕ್ಷ್ಮೀ ಕಲ್ಯಾಣಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾಜಲ್ ಮಗಧೀರ ಸಿನೆಮಾದ ಮೂಲಕ ಸ್ಟಾರ್‍ ಆದರು. ಸದ್ಯ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಇತ್ತೀಚಿಗೆ ತೆರೆಕಂಡ ನಂದಮೂರಿ ಬಾಲಕೃಷ್ಣ ರವರ ಜೊತೆಗೆ ಭಗವಂತ್ ಕೇಸರಿ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇನ್ನೂ ಈ ಹಿಂದೆ ಮೆಗಾಸ್ಟಾರ್‍ ಚಿರಂಜೀವಿಯವರ ಆಚಾರ್ಯ ಸಿನೆಮಾದಲ್ಲಿ ಕಾಜಲ್ ನಟಿಸಬೇಕಾಗಿತ್ತು. ಆದರೆ ಸಿನೆಮಾದ ಶೂಟಿಂಗ್ ಸಮಯದಲ್ಲೇ ಕಾಜಲ್ ಮದುವೆಯಾದರು. ಕೆಲವೊಂದು ಕಾರಣಗಳಿಂದ ಆಕೆ ಆಚಾರ್ಯ ಸಿನೆಮಾದಲ್ಲಿ ನಟಿಸಿದ ಕೆಲವೊಂದು ಸನ್ನಿವೇಶಗಳನ್ನು ಸಹ ತೆಗೆದುಹಾಕಿದರು. ಸದ್ಯ ಕಾಜಲ್ ಮತ್ತೊಮ್ಮೆ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಬಲವಾಗಿ ಕೇಳಿಬರುತ್ತಿದೆ.

ಮೆಗಾಸ್ಟಾರ್‍ ಚಿರಂಜೀವಿ ಹಾಗೂ ವಶಿಷ್ಠ ಕಾಂಬಿನೇಷನ್ ನಲ್ಲಿ ವಿಶ್ವಂಭರ ಎಂಬ ಸಿನೆಮಾ ಸೆಟ್ಟೇರಿದೆ. ಇತ್ತೀಚಿಗಷ್ಟೆ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆ ಸಹ ಮೂಡಿಸಿದೆ. ಫ್ಯಾಂಟಸಿ ಕಥೆಯನ್ನು ಒಳಗೊಂಡ ಈ ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ಮೆಗಾಸ್ಟಾರ್‍ ಚಿರುಗೆ ಜೋಡಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಜಗದೇಕ ವೀರುಡು ಅತಿಲೋಕ ಸುಂದರಿ ಮಾದರಿಯ ಸಿನೆಮಾ ಆಗಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಈ ಸಿನೆಮಾದಲ್ಲಿ ಕಾಜಲ್ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

Most Popular

To Top