ಅಗತ್ಯ ಬಿದ್ದರೇ ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತೇನೆ, ಆದರೆ ಆ ಕೆಲಸ ಮಾತ್ರ ಮಾಡೋಲ್ಲ ಎಂದ ಕಾಜಲ್ ಅಗರ್ವಾಲ್…..!

15 ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಮೇಕರ್ಸ್ ಗೆ ಕೆಲವೊಂದು ಕಂಡಿಷನ್ಸ್ ಹಾಕುತ್ತಿದ್ದು, ಅವು ಮೇಕರ್ಸ್‌ಗೆ ತಲೆ ನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಅವಕಾಶಗಳು ಕಡಿಮೆಯಾದ ಸಮಯದಲ್ಲೇ ಆಕೆ ತನ್ನ ಬಾಲ್ಯದ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ನಂತರ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟರು. ಈ ಕಾರಣದಿಂದ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ನಟಿಸಲು ಶುರು ಮಾಡಿದ್ದಾರೆ. ಆದರೆ ಆಕೆಗೆ ಮೊದಲಿನಂತೆ ಅವಕಾಶಗಳು ಬರುತ್ತಿಲ್ಲ. ಆದರೂ ಸಹ ಕೆಲವೊಂದು ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ಕೆಲವೊಂದು ಕಂಡಿಷನ್ಸ್ ಸಹ ಹಾಕುತ್ತಿದ್ದಾರಂತೆ. ಆಕೆಯ ಕಂಡಿಷನ್ಸ್ ಗೆ ಮೆಕರ್ಸ್ ತಲೆ ಚಚ್ಚಿಕೊಳ್ಳುತ್ತಿದ್ದಾರಂತೆ.

ಇನ್ನೂ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಾಜಲ್ ಕೆಲವೊಂದು ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಸೀನಿಯರ್‍ ಹಿರೋಗಳ ಜೊತೆಗೆ ನಟಿಸುತ್ತಿದ್ದಾರೆ. ಇದೀಗ ಆಕೆ ಮೇಕರ್ಸ್‌ಗಳಿಗೆ ಕಂಡಿಷನ್ಸ್ ಹಾಕುತ್ತಿದ್ದು, ಅದನ್ನು ಕೇಳಿದ ಮೇಕರ್ಸ್‌ಗೆ ತಲೆ ನೋವು ಹೆಚ್ಚಾಗುತ್ತಿದೆಯಂತೆ. ಕಾಜಲ್ ಅಗರ್ವಾಲ್ ಸಿನೆಮಾಗಳಲ್ಲಿ ಲಿಪ್ ಲಾಕ್, ರೊಮ್ಯಾಂಟಿಕ್ ದೃಶ್ಯಗಳು, ಬೆಡ್ ರೂಂ ದೃಶ್ಯಗಳನ್ನು ಮಾಡಲ್ಲ ಎಂದು ಕಂಡಿಷನ್ ಹಾಕಿದ್ದಾರಂತೆ. ಜೊತೆಗೆ ಎಕ್ಸ್ ಪೋಸ್ ಪಾತ್ರಗಳಲ್ಲೂ ಸಹ ನಟಿಸೋಕೆ ಒಪ್ಪಿಲ್ಲವಂತೆ. ಬೇಕಾದರೇ ಸಂಭಾವನೆ ಕಡಿಮೆ ಮಾಡಿಕೊಳ್ಳುತ್ತೇನೆ ವಿನಃ ಅಂತಹ ದೃಶ್ಯಗಳಲ್ಲಿ ನಟಿಸೋಲ್ಲ ಎನ್ನುತ್ತಿದ್ದಾರಂತೆ. ಇನ್ನೂ ಕಾಜಲ್ ಅಗರ್ವಾಲ್ ಈ ಕಂಡಿಷನ್ಸ್ ಕೇಳಿದ ಮೇಕರ್ಸ್ ಪ್ಯೂಜ್ ಗಳು ಔಟ್ ಆಗಿದೆಯಂತೆ. ಆದರೆ ಆಕೆಗೂ ಫಾಲೋಯಿಂಗ್ ಚೆನ್ನಾಗಿರುವ ಹಿನ್ನೆಲೆಯಲ್ಲಿ ಮೇಕರ್ಸ್ ಆಕೆಗೆ ಅವಕಾಶಗಳು ಕೊಡುತ್ತಿದ್ದಾರೆ ಎನ್ನಲಾಗಿದೆ.