Film News

ಸಿನೆಮಾ ಹಿಟ್ ಆಗೋದ್ರಲ್ಲಿ ಸ್ಟಾರ್ ಹಿರೋಗಳ ಪಾತ್ರ ಇರೊಲ್ಲ, ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೇಲೆ ಕೀಳು ಭಾವನೆ ಬೇಡ ಎಂದ ನಟಿ ಕೃತಿ ಸನನ್….!

ಬಾಲಿವುಡ್ ಯಂಗ್ ಬ್ಯೂಟಿ ಕೃತಿ ಸನನ್ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಹಿಂದಿ ಸಿನೆಮಾಗಳಲ್ಲಿ ಹೆಚ್ಚು ಸಕ್ಸಸ್ ಕಂಡುಕೊಂಡರು. ಸದ್ಯ ಹಿಂದಿ ಸಿನೆಮಾಗಳಲ್ಲೇ ಆಕೆ ಬ್ಯುಸಿಯಾದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಕೃತಿ ಸನನ್ ಸ್ಟಾರ್‍ ಹಿರೋಗಳ ಬಗ್ಗೆ ಹಾಗೂ ಲೇಡಿ ಓರಿಯೆಂಟೆಡ್ ಸಿನೆಮಾಗಳ ಬಗ್ಗೆ ಮಾತನಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಬಾಲಿವುಡ್ ನ ಸ್ಟಾರ್‍ ನಟಿ ಕೃತಿ ಸನನ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ನೇನೊಕ್ಕಡೇ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಡಿಮೆ ಸಮಯದಲ್ಲೆ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಅವಕಾಶಗಳು ಹೆಚ್ಚಾದ ಹಿನ್ನೆಲೆಯಲ್ಲಿ ಟಾಲಿವುಡ್ ನಿಂದ ದೂರವಾದರು. ಕಳೆದ ವರ್ಷ ಆದಿಪುರುಷ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಪ್ರಭಾಸ್ ಜೊತೆಗೆ ಆಕೆ ನಟಿಸಿದ್ದರು. ಸೀತೆಯ ಪಾತ್ರದಲ್ಲಿ ಕೃತಿ ಸನನ್ ನಟಿಸಿದ್ದು, ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ ಎನ್ನಬಹುದಾಗಿದೆ.

ನಟಿ ಕೃತಿ ಸನನ್ ಅನೇಕ ಸ್ಟಾರ್‍ ನಟರ ಜೊತೆಗೆ ಬಣ್ಣ ಹಚ್ಚಿದಂತಹ ಕೃತಿ ಸನನ್ ಹಂಚಿಕೊಂಡ ಲೇಟೆಸ್ಟ್  ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ದೊಡ್ಡ ಹಿರೋ ಸಿನೆಮಾಗಳಲ್ಲಿ ಇದ್ದಾರೆ ಎಂಬ ಮಾತ್ರಕ್ಕೆ ಪ್ರೇಕ್ಷಕರು ಥಿಯೇಟರ್‍ ಗಳಿಗೆ ಬರೊಲ್ಲ. ಕಥೆ ಚೆನ್ನಾಗಿದ್ದರೇ ಸಾಕು ಆ ಸಿನೆಮಾದಲ್ಲಿ ಗಂಡು ಹೆಣ್ಣು ಎಂಬ ವಿಷಯ ನೋಡೊಲ್ಲ. ಅದರಲ್ಲೂ ನೋವಿನ ಸಂಗತಿ ಏನು ಎಂದರೇ ನಿರ್ಮಾಪಕರು ಲೇಡಿ ಓರಿಯೆಂಟೆಡ್ ಸಿನೆಮಾಗಳನ್ನು ಕೀಳಾಗಿ ನೋಡುತ್ತಾರೆ. ಈ ಧೋರಣೆ ಬದಲಾಗಬೇಕು. ಕ್ರೂ ಸಿನೆಮಾದಲ್ಲಿ ಸ್ಟಾರ್‍ ಹಿರೋಗಳು ಯಾರೂ ಇಲ್ಲ. ಆದರೆ ಸಿನೆಮಾ ತುಂಬಾನೆ ಚೆನ್ನಾಗಿ ಪ್ರದರ್ಶನ ಆಗುತ್ತಿದೆ ಎಂದು ಕೃತಿ ಸನನ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಕೃತಿ ಸನನ್ ಹಂಚಿಕೊಂಡ ಕಾಮೆಂಟ್ ಗಳು ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡುತ್ತಿವೆ. ಸಿನೆಮಾ ವಿಚಾರದಲ್ಲಿ ದೊಡ್ಡ ಹಿರೋ ಅವಶ್ಯಕತೆಯಿಲ್ಲ ಎಂಬುದನ್ನು ಆಕೆ ಪರೋಕ್ಷವಾಗಿ ಹೇಳಿದ್ದಾರೆ. ಕ್ರೂ ಸಿನೆಮಾದಲ್ಲಿ ಕರೀನಾ ಕಪೂರ್‍, ಕೃತಿ ಸನನ್, ಟಬು ರವರು ನಟಿಸಿದ್ದು, ಈ ಸಿನೆಮಾ ಮಾ.29 ರಂದು ಬಿಡುಗಡೆಯಾಗಿದ್ದು, ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿದೆ.

Most Popular

To Top