Film News

ನಿರ್ದೇಶಕ ಬೆಡ್ ರೂಂಗೆ ಕರೆದು ತಬ್ಬಿಕೊ ಎಂದಿದ್ರಂತೆ, ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಹೊರಹಾಕಿದ ನಟಿ ಉರ್ಫಿ…..!

ಬಣ್ಣದ ಲೋಕದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಸೆನ್ಷೇಷನ್ ಸ್ಟಾರ್‍ ಎಂದೇ ಖ್ಯಾತಿ ಪಡೆದುಕೊಂಡ ಉರ್ಫಿ ಜಾವೇದ್ ಕಾಸ್ಟಿಂಗ್ ಕೌಚ್ ಅನುಭವಿಸಿದ ಬಗ್ಗೆ ಕಾಮೆಂಟ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಗೋಣಿಚೀಲ, ಚೈನ್ ಗಳು, ಸಿಮ್ ಕಾರ್ಡ್‌ಗಳು, ನ್ಯೂಸ್ ಪೇಪರ್‍, ಮಲ್ಲಿಗೆ ಹೂವು, ಹಣ್ಣುಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿಕೊಂಡು ಸೋಷಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದ್ದರು. ಈ ಡ್ರೆಸ್ ಗಳ ಕಾರಣದಿಂದಲೇ ಉರ್ಫಿ ಭಾರಿ ಟ್ರೋಲ್ ಸಹ ಆಗುತ್ತಿದ್ದರು. ಇದೀಗ ಆಕೆ ತಾನು ಕೆರಿಯರ್‍ ಆರಂಭದಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇ‌ತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಉರ್ಫಿ ಜಾವೇದ್ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ವೈರಲ್ ಆಗುತ್ತಿವೆ. ಆಗ ತಾನೇ ಮುಂಬೈಗೆ ಬಂದ ದಿನಗಳಲ್ಲಿ ಉರ್ಫಿ ಎದುರಿಸಿದಂತಹ ಘಟನೆಯೊಂದರ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರೊಬ್ಬರು ಆಡಿಷನ್ ಗಾಗಿ ತಮ್ಮ ಮನೆಗೆ ಕರೆದಿದ್ದರು. ಮನೆಗೆ ಹೋದ ಬಳಿಕ ದೃಶ್ಯವೊಂದನ್ನು ಹೇಳಿದ್ದು, ಅದರಂತೆ ನಟಿಸೋಕೆ ಹೇಳಿದ್ದರು. ನನ್ನನ್ನು ಅವರ ಪ್ರಿಯತಮೆ ಎಂದು ಭಾವಿಸಿ ಹತ್ತಿರ ಬಂದು ತಬ್ಬಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಸುತ್ತಲೂ ನೋಡಿದ್ದೇನೆ. ಎಲ್ಲೂ ಕ್ಯಾಮೆರಾಗಳು ಇರಲಿಲ್ಲ. ಇದೆಂತಹ ಆಡಿಷನ್, ಕ್ಯಾಮೆರಾ ಎಲ್ಲಿದೆ ಎಂದೂ ಪ್ರಶ್ನೆ ಮಾಡಿದೆ. ಜೊತೆಗೆ ನಾನು ಆಗೊಲ್ಲ ಎಂದು ಹೇಳೋಕೂ ಆಗಿರಲಿಲ್ಲ. ಆದ್ದರಿಂದ ಹಿಂಜರಿಕೆಯಿಂದಲೇ ಆತನನ್ನು ತಬ್ಬಿಕೊಂಡು ನಾನು ಹೋಗುತ್ತಿದ್ದೇನೆ ಸರ್‍ ಎಂದು ಹೇಳಿದೆ. ಇಂತಹ ಘಟನೆಗಳು ನನಗೆ ಜೀವನದಲ್ಲಿ ತುಂಬಾ ಉತ್ತಮ ಪಾಠಗಳನ್ನು ಕಲಿಸಿದೆ ಎಂದು ಆಕೆ ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

Most Popular

To Top