Film News

ಕಾಜಲ್ ಅಗರ್ವಾಲ್ ಹೊಸ ಸಿನೆಮಾ ಘೋಷಣೆ, ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಜಲ್, ವೈಲೆಂಟ್ ರೋಲ್ ನಲ್ಲಿ ಚಂದಮಾಮ….!

ಸೌತ್ ಸಿನಿರಂಗದ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಮದುವೆಯ ಬಳಿಕ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ಆದರೆ ಕೆಲವು ದಿನಗಳಿಂದ ಆಕೆ ಮತ್ತೆ ಗರ್ಭಿಣಿಯಾಗಿದ್ದಾಳೆ, ಸಿನೆಮಾಗಳಿಂದ ದೂರ ಉಳಿಯಲಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಹರಿದಾಡಿದ್ದವು. ಇದೀಗ ಆಕೆಯ ಹೊಸ ಸಿನೆಮಾ ಘೋಷಣೆಯಾಗಿದ್ದು, ಅದರಿಂದ ಎಲ್ಲಾ ರೂಮರ್‍ ಗಳಿಗೂ ಚೆಕ್ ಇಟ್ಟಂತಾಗಿದೆ. ಕಾಜಲ್ ಕೆರಿಯರ್‍ ನಲ್ಲಿ ಎಂದೂ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಇದೀಗ ರಿಲೀಸ್ ಆದ ಟೈಟಲ್ ಟೀಸರ್‍ ಮೂಲಕ ತಿಳಿಯಬಹುದಾಗಿದೆ.

ನಟಿ ಕಾಜಲ್ ಅಗರ್ವಾಲ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ತನ್ನ ಸಕ್ಸಸ್ ಗ್ರಾಫ್ ಬೀಳದಂತೆ ಕಾಪಾಡಿಕೊಂಡು ಬರುತ್ತಿದ್ದಾರೆ. ತೆಲುಗು ಹಾಗೂ ತಮಿಳಿನ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದಾರೆ. ಜೊತೆಗೆ ತೆಲುಗಿನಲ್ಲಿ ಅತ್ಯಧಿಕ ಸಕ್ಸಸ್ ರೇಟ್ ಇರುವಂತಹ ನಟಿ ಸಹ ಕಾಜಲ್ ಅಗರ್ವಾಲ್ ಎಂದರೇ ತಪ್ಪಾಗಲಾರದು. ಕಮರ್ಷಿಯಲ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಕಾಜಲ್ ಕಳೆದ 2020 ರಲ್ಲಿ ತನ್ನ ಬಾಲ್ಯದ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ವಿವಾಹವಾದರು. ಮದುವೆ, ಮಗು ಕಾರಣದಿಂದ ಸಿನೆಮಾಗಳಲ್ಲಿ ಬ್ರೇಕ್ ಕೊಟ್ಟ ಈಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇದೀಗ ಮತ್ತೊಂದು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಮದುವೆಯ ಬಳಿಕವೂ ಕಾಜಲ್ ಕಮರ್ಷಿಯಲ್ ಸಿನೆಮಾಗಳಿಗೆ ಒಪ್ಪಿಗೆ ನೀಡುತ್ತಿದ್ದಾರೆ. ಇದೀಗ ಆಕೆ ಅಖಿಲ್ ಡೇಗಲ ಎಂಬ ನಿರ್ದೇಶಕನ ಸಿನೆಮಾದಲ್ಲಿ ಕಾಜಲ್ ಬಣ್ಣ ಹಚ್ಚಲಿದ್ದಾರೆ. ಈ ಸಿನೆಮಾಗೆ ಸತ್ಯಭಾಮ ಎಂಬ ಟೈಟಲ್ ಇಡಲಾಗಿದೆ. ಇನ್ನೂ ಟೀಸರ್‍ ನಲ್ಲಿ ನೋಡುತ್ತಿದ್ದರೇ ಕಾಜಲ್ ಅಗರ್ವಾಲ್ ವಿಭಿನ್ನವಾಗಿಯೇ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬರುತ್ತಿದೆ. ಜೊತೆಗೆ ಆಕೆ ವೈಲೆಂಟ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸಿಪಿ ಸತ್ಯಭಾಮ ಆಗಿ ಕಾಜಲ್ ರಂಜಿಸಲಿದ್ದಾರೆ. ಟೀಸರ್‍ ನಲ್ಲಿ ಓರ್ವ ಗಂಡು ಪೊಲೀಸ್ ರೌಡಿಗಳಿಂದ ಸತ್ಯಾಂಶ ಹೊರತೆಗೆಯಲು ಪ್ರಯತ್ನ ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಕಾಜಲ್ ರೆಡ್ ಸೀರೆಯಲ್ಲಿ ಬಂದು ಆ ಕಳ್ಳನಿಗೆ ಒಡೆಯುತ್ತಾರೆ. ಕೂಡಲೇ ಆತ ನಿಜ ಹೇಳಲು ಒಪ್ಪುತ್ತಾನೆ.  ಈ ವೇಳೆ ಕಾಜಲ್ ಕೈಯಲ್ಲಿದ್ದ ಬಳೆಗಳು ಒಡೆದು ಆಕೆಗೆ ರಕ್ತ ಬರುತ್ತಿರುತ್ತದೆ. ಅದನ್ನು ನೋಡಿದ ಲೇಡಿ ಪೊಲೀಸ್ ಬಳೆಯಿಲ್ಲದೇ ಹೊಡೆಯಬೇಕಿತ್ತು ಎನ್ನುತ್ತಾರೆ. ಅದಕ್ಕೆ ಕಾಜಲ್ ಬಳೆ ಇಲ್ಲದೇ ಆಲ್ ರೆಡಿ ಹೊಡೆದಿದ್ದಾನೆ ಅಲ್ಲವೇ ಎಂದು ಹೇಳುತ್ತಾರೆ. ಇದೀಗ ಈ ಟೈಟಲ್ ಟೀಸರ್‍ ಸೂಪರ್‍ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

ಇನ್ನೂ ಟೀಸರ್‍  ಲಾಂಚ್ ಈವೆಂಟ್ ನಲ್ಲಿ ಕಾಜಲ್ ಮಾತನಾಡುತ್ತಾ ಸಿನೆಮಾಗಳಿಂದ ದೂರವಾಗುವ ರೂಮರ್‍ ಗಳ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ನಾನು ಸಿನೆಮಾಗಳಿಂದ ದೂರವಾಗಲಿದ್ದೆನೆ ಎಂಬ ರೂಮರ್‍ ಗಳು ಎಲ್ಲವೂ ನಿರಾಧಾರವಾದುದು. ನಾನು ಎಲ್ಲೂ ಹೋಗಲ್ಲ ಸಿನೆಮಾಗಳಲ್ಲಿ ನಟಿಸುತ್ತೇನೆ. ಇದೀಗ ಟೈಟಲ್ ಟೀಸರ್‍ ಗೆ ಬಂದಂತಹ ರೆಸ್ಪಾನ್ಸ್ ನೋಡಿದರೇ ನನಗೆ ತುಂಬಾ ಸಂತೋಷವಾಗಿದೆ ಎಂದು ಆಕೆ ತಿಳಿಸಿದ್ದಾರೆ.

Most Popular

To Top