ಟೈಟ್ ಫಿಟ್ ಗ್ರೀನ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಆಲಿಯಾ, ಹಾಲಿವುಡ್ ಸಿನೆಮಾ ಪ್ರಮೋಷನ್ ನಲ್ಲಿ ಹಾಟ್ ಪೋಸ್ ಕೊಟ್ಟ ಬ್ಯೂಟಿ….!

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಸಪ್ತಪದಿ ತುಳಿದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಲಿಯಾ ಅಭಿನಯದ ಮೊದಲ ಹಾಲಿವುಡ್ ಸಿನೆಮಾ ಸಹ ರಿಲೀಸ್ ಆಗಲಿದ್ದು, ಈ ಸಿನೆಮಾದ ಪ್ರಮೋಷನ್ ಕೆಲಸಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಪ್ರಮೋಷನ್ ಅಂಗವಾಗಿ ಇದೀಗ ಆಕೆ ಗ್ರೀನ್ ಡ್ರೆಸ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟಿದ್ದಾರೆ.

ಬಾಲಿವುಡ್ ನ ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡ ಆಲಿಯಾ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್  ಗಿಟ್ಟಿಸಿಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ರಣಬೀರ್‍ ಕಪೂರ್‍ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಗರ್ಭಿಣಿ, ಮಗು ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದಿದ್ದರು.  ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಕೆ ಹಾಲಿವುಡ್ ಸಿನೆಮಾದಲ್ಲಿ ಸಹ ನಟಿಸಿದ್ದು, ಈ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಿನೆಮಾದ ಬಿಡುಗಡೆಯ ಸಮಯ ಹತ್ತಿರವಾಗುತ್ತಿದ್ದು, ಸಿನೆಮಾದ ಪ್ರಮೋಷನ್ ಗಳೂ ಸಹ ಭರದಿಂದ ನಡೆಯುತ್ತಿವೆ.  ಹಾರ್ಟ್ ಆಫ್ ಸ್ಟೋನ್ ಎಂಬ ಸಿನೆಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಹಾಲಿವುಡ್ ಸ್ಟಾರ್‍ ನಟಿ ಗಾಲ್ ಗಾಡೋಟ್ ಹಾಗೂ ಜಾಮಿ ಡೋರ್ನನ್ ಜೊತೆಗೆ ಆಲಿಯಾ ಸಹ ನಟಿಸಿದ್ದಾರೆ.

ಇನ್ನೂ ಈ ಸಿನೆಮಾ ದೈತ್ಯ ಒಟಿಟಿ ಸಂಸ್ಥೆ ನೆಟ್ ಫ್ಲಿಕ್ಸ್ ಈ ಸಿನೆಮಾ ತಯಾರಿಸಿದೆ. ಈ ಸಿನೆಮಾದ ಟ್ರೈಲರ್‍ ಸಹ ಇತ್ತಿಚಿಗಷ್ಟೆ ರಿಲೀಸ್ ಆಗಿದ್ದು, ಲಾಂಚ್ ಈವೆಂಟ್ ಸಹ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಬ್ರೆಜಿಲ್ ನಲ್ಲಿ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಈ ಹಾದಿಯಲ್ಲೇ ಆಕೆ ಅಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸ್ಟನ್ನಿಂಗ್ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿದ್ದಾರೆ. ಇದೀಗ ಆಕೆ ಟ್ರೈಲರ್‍ ಲಾಂಚ್ ಈವೆಂಟ್ ಗಾಗಿ ಮಾಡಿಸಿದ ಪೊಟೋಶೂಟ್ಸ್ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗ್ರೀನ್ ಕಲರ್‍ ಔಟ್ ಫಿಟ್ ನಲ್ಲಿ ಟೆಂಟ್ಪಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಮತ್ತೇರಿಸುವಂತಹ ಪೋಸ್ ಗಳನ್ನು ಕೊಡುವ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ.

ಇನ್ನೂ ಆಲಿಯಾ ಭಟ್ ಹಾಟ್ ಪೊಟೋಶೂಟ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಲೈಕ್ ಗಳು ಹಾಗೂ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಇನ್ನೂ ಹಾರ್ಟ್ ಆಫ್ ಸ್ಟೋನ್ ಟ್ರೈಲರ್‍ ಇದೀಗ ಬಿಡುಗಡೆಯಾಗಿದ್ದು, ಒಳ್ಳೆಯ ಸ್ಪಂದನೆ ದೊರೆಯುತ್ತಿದೆ. ಶೀಘ್ರದಲ್ಲೇ ಈ ಸಿನೆಮಾ ಪ್ರೇಕ್ಷಕರ ಮುಂದೆ ಬರಲಿದ್ದು, ಈ ಸಿನೆಮಾ ಹಾಲಿವುಡ್ ನಲ್ಲಿ ಆಲಿಯಾಗೆ ಮೊದಲ ಸಿನೆಮಾ ಆದ ಹಿನ್ನೆಲೆಯಲ್ಲಿ ಆಕೆ ತುಂಬಾ ಕುತೂಹಲದಿಂದ ಇದ್ದಾರೆ.