News

ಬಿಜೆಪಿ ವಿರುದ್ದ ವಿವಾದಾತ್ಮಕ ಹೇಳಿಕೆ ಕೊಟ್ಟ ಯತೀಂದ್ರ ಸಿದ್ದರಾಮಯ್ಯ, ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ…!

ಕರ್ನಾಟಕದಲ್ಲಿ ಸುಮಾರು 70 ವರ್ಷಗಳಿಂದ ಅನೇಕ ಪಕ್ಷಗಳು ಆಡಳಿತ ನಡೆಸಿದೆ. ಆದರೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೇ ಮಹಿಳೆಯರು ಮಂಗಳಸೂತ್ರದ ಜೊತೆಗೆ ತಮ್ಮ ಗಂಡ, ಮಕ್ಕಳನ್ನು ಕಳೆದುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಹೇಳಿಕೆ ನೀಡಿದ್ದು, ಈ ಹೇಳಿಕೆ ವಿರುದ್ದ ಮಾಜಿ ಎಂ.ಎಲ್.ಸಿ ಅಶ್ವತ್ಥ್ ನಾರಾಯಣ ನೇತೃತ್ವದ ನಿಯೋಗದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಕಾಂಗ್ರೇಸ್ ನಾಯಕ ಯತೀಂದ್ರ ಸಿದ್ದರಾಮಯ್ಯ ರವರ ಹೇಳಿಕೆಯ ವಿರುದ್ದ ದೂರು ನೀಡಿ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಮಾಜಿ ಎಂ.ಎಲ್.ಸಿ ಅಶ್ವತ್ಥ್ ನಾರಾಯಣ  ಯತೀಂದ್ರ ರವರ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಮುಂದೆ ಈ ರೀತಿಯ ಹೇಳಿಕೆ ನೀಡದಂತೆ ಸೂಚನೆ ಕೊಡಿ ಎಂದು ಮನವಿ ಸಹ ಮಾಡಿದ್ದೇವೆ. ಜೊತೆಗೆ ಅವರ ವಿರುದ್ದ ಕ್ರಮಕ್ಕೆ ಸಹ ಆಗ್ರಹಿಸಿದ್ದೇವೆ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದೇವೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೇಸ್ ನಾಯಕ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತಿಚೀಗೆ ನಟಿ ಹೇಮಾ ಮಾಲಿನಿ ಕುರಿತು ಹೇಳಿಕೆ ಕೊಟ್ಟು ಕಾಂಗ್ರೇಸ್ ನಾಯಕ ಸುರ್ಜೇವಾಲಾ ಎರಡು ದಿನ ಪ್ರಚಾರದಿಂದ ದೂರ ಉಳಿಯಬೇಕಾಗಿತ್ತು. ಇದೀಗ ಯತೀಂದ್ರ ಸಹ ಪ್ರಧಾನಿ ಮೋದಿಯವರ ಬಗ್ಗೆ ಏನೇನೋ ಮಾತಾಡುತ್ತಿದ್ದಾರೆ ಎಂದರು.

ಓರ್ವ ಮಾಜಿ ಶಾಸಕರು ಹಾಗೂ ಜವಾಬ್ದಾರಿಯುತ ಸಿಎಂ ಪುತ್ರ. ಪ್ರಧಾನಿಗಳು ಏನು ಮಾತನಾಡಿದ್ದಾರೆ ಎನ್ನುವ ಪರಿಜ್ಞಾನ ಅವರಿಗಿಲ್ಲ. ಈ ಹಿಂದೆ ಮನಮೋಹನ್ ಸಿಂಗ್ ರವರು ಹೇಳಿದ್ದನ್ನು ಹಾಗೂ ಕಾಂಗ್ರೇಸ್ ಪಕ್ಷದ ಪ್ರಣಾಳಿಕೆಯನ್ನು ಉಲ್ಲೇಖಿಸಿ ಮೋದಿ ಮಾತನಾಡಿರೋದು. ಅದು ಮೋದಿಯವರ ಹೇಳಿಕೆಯಲ್ಲ. ಮೋದಿಯವರ ಹೇಳಿಕೆಯನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಮಹಿಳೆಯರು ಹಾಗೂ ಮಕ್ಕಳನ್ನು ತಪ್ಪುದಾರಿಗೆ ಎಳೆಯುವಂತಹ ಕೆಲಸ ಮಾಡಿದ್ದಾರೆ. ಕೂಡಲೇ ಚುನಾವಣಾ ಆಯೋಗ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಕಿಡಿಕಾರಿದ್ದಾರೆ.

Most Popular

To Top