Film News

ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮತಷ್ಟು ಫೇಂ ಪಡೆದುಕೊಂಡ ಕಾಜಲ್, ಇಂಟರ್ ನ್ಯಾಷನಲ್ ಅವಾರ್ಡ್ ಪಡೆದುಕೊಂಡ ಕಾಜಲ್ ಅಗರ್ವಾಲ್…..!

ಸ್ಟಾರ್‍ ನಟಿ ಕಾಜಲ್ ಮದುವೆಗೂ ಮುಂಚೆ ಒಂದು ಮಾದರಿ, ಮದುವೆಯಾದ ಬಳಿಕ ಒಂದು ಮಾದರಿಯಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ. ನಟಿಯಾಗಿ ತನ್ನ ಫೇಂ ಮುಂದುವರೆಸುತ್ತಾ, ಮತ್ತಷ್ಟು ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಇಂಟರ್‍ ನ್ಯಾಷನಲ್ ಅವಾರ್ಡ್ ಪಡೆದುಕೊಂಡು ಮತಷ್ಟು ಫೇಮಸ್ ಆಗಿದ್ದಾರೆ.

ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ಸ್ಟಾರ್‍ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಕಾಜಲ್ ತಮ್ಮ ಕೆರಿಯರ್‍ ನಲ್ಲಿ ಸಕ್ಸಸ್ ಗ್ರಾಫ್ ಡೌನ್ ಆಗದಂತೆ ನೋಡಿಕೊಂಡಿದ್ದರು. ಕೊನೆಯದಾಗಿ ಆಕೆ ನಂದಮೂರಿ ಬಾಲಕೃಷ್ಣರವರ ಭಗವಂತ್ ಕೇಸರಿ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ಕಾತ್ಯಾಯನಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಬಾಲಕೃಷ್ಣ ಕಾಜಲ್ ನನ್ನು ಕಂಡು ಆಂಟಿ ಎಂದು ಕರೆದಿದ್ದಾರೆ. ಓರ್ವ ಸ್ಟಾರ್‍ ನಟಿ ಸೀನಿಯರ್‍ ಹಿರೋ ಕೈಯಲ್ಲಿ ಆಂಟಿ ಎಂದು ಕರೆಸಿಕೊಳ್ಳುವುದು ದೊಡ್ಡ ಸಾಹಸ ಎಂದೇ ಹೇಳಬಹುದು. ಇನ್ನೂ  ಈ ಸಿನೆಮಾದಲ್ಲಿ ಕಾಜಲ್ ಅಗರ್ವಾಲ್ ಪಾತ್ರ ಒಂದು ಮಾದರಿಯಲ್ಲಿ ಗೆಸ್ಟ್ ರೋಲ್ ಎಂದು ಹೇಳಲಾಗಿತ್ತು. ಈ ಸಿನೆಮಾ ಸಕ್ಸಸ್ ಆದ ಬಳಿಕ ಅದು ಸುಳ್ಳಾಗಿತ್ತು.

ಇದೀಗ ಕಾಜಲ್ ಅಗರ್ವಾಲ್ ರವರು ಭಗವಂತ್ ಕೇಸರಿ ಸಿನೆಮಾಗಾಗಿ ಇಂಟರ್‍ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಸಿನೆಮಾದಲ್ಲಿ ಕಾತ್ಯಾಯನಿ ಪಾತ್ರಕ್ಕಾಗಿ ಅವಾರ್ಡ್ ಬಂದಿದೆ. 16ನೇ ಜೈಪುರ್‍ ಇಂಟರ್‍ ನ್ಯಾಷನಲ್ ಫಿಲಂ ಫೆಸ್ಟಿವಲ್ 2024 ಫೆ. 9 ರಿಂದ ಫೆ.13ರ ವರೆಗೂ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕಾಜಲ್ ಅಗರ್ವಾಲ್ ಗೆ ಇಂಟರ್‍ ನ್ಯಾಷನಲ್ ಅವಾರ್ಡ್ ಪ್ರಧಾನ ಮಾಡಲಾಗುತ್ತಿದೆ. ಆದರೆ ಈ ಅವಾರ್ಡ್ ಕಾಜಲ್ ಗೆ ಬಂದಿರುವುದು ಕೆಲವೊಂದು ವಿಮರ್ಶೆಗಳಿಗೆ ಕಾರಣವಾಗಿದೆ. ಭಗವಂತ್ ಕೇಸರಿ ಸಿನೆಮಾದಲ್ಲಿ ಕಾಜಲ್ ಪಾತ್ರಕ್ಕೆ ಅಷ್ಟೊಂದು ಪ್ರಾಧಾನ್ಯತೆಯಿರುವುದಿಲ್ಲ. ಆದರೆ ಆಕೆಗೆ ಅವಾರ್ಡ್ ಪ್ರಕಟಿಸಿರುವುದು ಅನೇಕರಿಗೆ ಆಶ್ಚರ್ಯ ತಂದಿದೆ. ನೆಟ್ಟಿಗರೂ ಸಹ ಟ್ರೋಲ್ ಮಾಡುತ್ತಿದ್ದಾರೆ.

ಇದೇ ಫಿಲಂ ಫೆಸ್ಟಿವಲ್ ನಲ್ಲಿ ಬಿಂಬಿಸಾರ ಸಿನೆಮಾದಲ್ಲಿ ವಿಶ್ವನಂದನ್ ವರ್ಮಾ ಪಾತ್ರ ಪೋಷಣೆ ಮಾಡಿದ ಪ್ರಕಾಶ್ ರಾಜ್, ಕಾರ್ತಿಕೇಯ-2 ಚಿತ್ರದ ಡಾ.ಧನ್ವಂತರಿ ವೇದಪಥಕ್ ಅನುಪಮ್ ಖೇರ್‍, ಭಗವಂತ್ ಕೇಸರಿ ಸಿನೆಮಾದಲ್ಲಿ ರಾಹುಲ್ ಸಾಂಘ್ವಿ ಪಾತ್ರಕ್ಕೆ ಅರ್ಜುನ್ ರಾಂಪಾಲ್ ರವರುಗಳಿಗೆ ಅವಾರ್ಡ್‌ಗಳು ದೊರೆತಿದೆ ಎಂದು ತಿಳಿದುಬಂದಿದೆ.

Most Popular

To Top