ಒಂದು ಗಂಟೆಯಲ್ಲಿ ಮಂಧ್ಯಂತರ ಬಜೆಟ್ ಓದಿ ಮುಗಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…….!

Follow Us :

ಲೋಕಸಭೆಯಲ್ಲಿ 2024-25ನೇ ಮಧ್ಯಂತರ ಬಜೆಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಬಜೆಟ್ ಓದಲು ಆಕೆ ತೆಗೆದುಕೊಂಡಿದ್ದು ಮಾತ್ರ 1 ಗಂಟೆ. ಇದು ಅತೀ ಕಡಿಮೆ ಅವಧಿಯ ಬಜೆಟ್ ಮಂಡನೆ ಎಂದರೆ ತಪ್ಪಾಗಲಾರದು ಎನ್ನಬಹುದಾಗಿದೆ. ಜೊತೆಗೆ ಅತಿ ದೊಡ್ಡಬಜೆಟ್ ಭಾಷಣ ಮಾಡಿದ ಹೆಗ್ಗಳಿಗೂ ಪಾತ್ರರಾಗಿದ್ದಾರೆ. ಕಳೆದ ವರ್ಷ ಅಂದರೇ 2023 ರಲ್ಲಿ ಕೇವಲ 87 ನಿಮಿಷ ತೆಗೆದುಕೊಂಡಿದ್ದರು.

ಕಳೆದ 2020 ರಲ್ಲಿ ನಿರ್ಮಾಲಾ ಸೀತಾರಾಮನ್ ರವರು ಬರೋಬ್ಬರಿ 2 ಗಂಟೆ 45 ನಿಮಿಷ ದೀರ್ಘಕಾಲದ ಬಜೆಟ್ ಮಂಡಿಸಿದ್ದರು. ಈ ಸಮಯದಲ್ಲಿ ನೀರು ಕುಡಿದು ಬಜೆಟ್ ಓದಿದ್ದರು. ಬಜೆಟ್ ಮಂಡನೆಯ ಇತಿಹಾಸದಲ್ಲೇ ಅಷ್ಟು ದೀರ್ಘಾವಧಿಯ ಭಾಷಣವನ್ನು ಯಾರೂ ಮಾಡಿರಲಿಲ್ಲ ಎಂದು ಹೇಳಬಹುದಾಗಿತ್ತು. ಆದರೆ 2024 ರ ಮಧ್ಯಂತರ ಬಜೆಟ್ ಅನ್ನು ಕೇವಲ 1 ಗಂಟೆಗಳ ಕಾಲ ಬಜೆಟ್ ಮಂಡಿಸಿದ್ದು ಆಶ್ಚರ್ಯ ಮೂಡಿಸಿದೆ.

ಇನ್ನೂ ಬಜೆಟ್ ನಲ್ಲಿರುವ ಪ್ರಮುಖ ಅಂಶಗಳ ವಿಚಾರಕ್ಕೆ ಬಂದರೇ, ಭಾರತವನ್ನು 2047ರ ವೇಳೆಗೆ ಅಭಿವೃದ್ದಿ ದೇಶವನ್ನಾಗಿ ಮಾಡುವುದು, ಪ್ರಧಾನ ಮಂತ್ರಿ ಆವಾಸ್ ಅಡಿ ಗ್ರಾಮೀಣ ಪ್ರದೇಶದಲ್ಲಿ 70 ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ. 54 ಲಕ್ಷ ಯುವಕರಿಗೆ ತರಬೇತಿ ಹಾಗೂ 3000 ಹೊಸ ಐಟಿಐಗಳ ಸ್ಥಾಪನೆ, 2024-25ರ ಆರ್ಥಿಕ ವರ್ಷಕ್ಕೆ ತೆರಿಗೆ ಸಂಗ್ರಹ 26.02 ಟ್ರಿಲಿಯನ್ ರೂಪಾಯಿ ಇರಲಿದೆ ಎಂದು ಅಂದಾಜಿಸಲಾಗಿದೆ, ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭವಾಗಿದೆ. ದೇಶದಲ್ಲಿ ಹಾಲು ಉತ್ಪಾದನಾ ಡೇರಿಗಳ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಸರ್ಕಾರ ಪ್ರತ್ಯೇಕ ಮತ್ಸ ಸಂಪದ ಯೋಜನೆ ಜಾರಿಗೊಳಿಸಿದೆ. ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆ ವಿಸ್ತರಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ದಿಗಾಗಿ ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡಲಾಗುವುದು.