Film News

ವರದಕ್ಷಿಣೆ ಕೊಟ್ಟಿಲ್ಲ, ಆದರೆ ಆ ಕೆಲಸ ಮಾಡಿ ಅದನ್ನು ಪೂರ್ಣಗೊಳಿಸುತ್ತೇನೆ ಎಂದ ಮೆಗಾ ಸೊಸೆ ಲಾವಣ್ಯ, ಆಕೆ ಹೀಗೆ ಹೇಳಿದ್ದು ಯಾಕೆ?

ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಸುಮಾರು ವರ್ಷಗಳಿಂದ ಪ್ರೀತಿಸಿ ಇದೀಗ ಸಪ್ತಪದಿ ತುಳಿಯುವ ಮೂಲಕ ಒಂದಾಗಿದ್ದಾರೆ. ನ.1 ರಂದು ಈ ಜೋಡಿಯ ಮದುವೆ ಇಟಲಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಸುಮಾರು ದಿನಗಳಿಂದ ಯಾರಿಗೂ ತಿಳಿಯದಂತೆ ಪ್ರೇಮ ಪಯಣ ಸಾಗಿಸಿದ್ದ ಈ ಜೋಡಿ ಕೊನೆಯದಾಗಿ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆಯಾದರು. ಇದೀಗ ಆಕೆ ಸಂದರ್ಶನವೊಂದರಲ್ಲಿ ನೀಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಅಂದಾಲ ರಾಕ್ಷಸಿ ಸಿನೆಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟ ಲಾವಣ್ಯ ತ್ರಿಪಾಠಿ, ಮೊದಲನೇ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಭಲೆ ಭಲೆ ಮಗಾಡಿವೋಯ್, ಸೊಗ್ಗಾಡೆ ಚಿನ್ನಿ ನಾಯನಾ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಇನ್ನೂ ವರುಣ್ ತೇಜ್ ಜೊತೆಗೆ ಮಿಸ್ಟರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಈ ಸಿನೆಮಾದ ಶೂಟಿಂಗ್ ಸಮಯದಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ಪ್ರೇಮಾಂಕುರವಾಗಿದ್ದು, ಸುಮಾರು ವರ್ಷಗಳ ಕಾಲ ಈ ಜೋಡಿ ರಹಸ್ಯವಾಗಿಯೇ ಪ್ರೀತಿಸಿಕೊಂಡಿದ್ದರು. ಬಳಿಕ ಅವರ ಸುದ್ದಿ ಆಗಾಗ ಕೇಳಿಬರುತ್ತಲೇ ಇತ್ತು.

ಈ ರೂಮರ್‍ ಗಳು ಹೆಚ್ಚಾಗುತ್ತಿದ್ದ ನಡುವೆಯೇ ಕಳೆದ ವರ್ಷ ಎಂಗೇಜ್  ಮೆಂಟ್ ಮಾಡಿಕೊಂಡು ಎಲ್ಲರಿಗೂ ಗುಡ್ ನ್ಯೂಸ್ ಕೊಟ್ಟಿದ್ದರು.  ಜೂನ್ ಮಾಹೆಯಲ್ಲಿ ಎಂಗೇಜ್ ಮೆಂಟ್ ಬಳಿಕ ನವೆಂಬರ್‍ ತಿಂಗಳಲ್ಲಿ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಈ ಮದುವೆ ಸಂಭ್ರಮದಲ್ಲಿ ಮೆಗಾ ಫ್ಯಾಮಿಲಿ, ಅಲ್ಲು ಫ್ಯಾಮಿಲಿ, ಲಾವಣ್ಯ ಫ್ಯಾಮಿಲಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇತ್ತೀಚಿಗೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಲಾವಣ್ಯಗೆ ಇಂಟ್ರಸ್ಟಿಂಗ್ ಪ್ರಶ್ನೆಯೊಂದು ಎದುರಾಗಿದೆ. ವರುಣ್ ತೇಜ್ ತಂಗಿ ನಿಹಾರಿಕಾಗೆ ಹೆಣ್ಣು ಮಗಳ ವರದಕ್ಷಿಣೆ ನೀಡಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಲಾವಣ್ಯ ಇಂಟ್ರಸ್ಟಿಂಗ್ ಉತ್ತರ ನೀಡಿದ್ದಾರೆ. ನಾನು ನಿಹಾರಿಕಾಗೆ ಹೆಣ್ಣು ಮಗಳ ವರದಕ್ಷಿಣೆ ಕೊಟ್ಟಿಲ್ಲ. ಆದರೆ ಆಕೆ ನನ್ನ ಕುಟುಂಬದ ಸದಸ್ಯೆ. ಆದ್ದರಿಂದ ತನಗಾಗಿ ಏನೋ ಒಂದು ಮಾಡುತ್ತೇನೆ. ಆಕೆಯ ಬ್ಯಾನರ್‍ ನಲ್ಲಿ ಒಂದು ಸಿನೆಮಾ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ಇನ್ನೂ ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಫಿಂಕ್ ಎಲಿಫೆಂಟಾ ಎಂಟರ್‍ ಟೈನ್ ಮೆಂಟ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಬ್ಯಾನರ್‍ ನಲ್ಲಿ ಲಾವಣ್ಯ ಸಿನೆಮಾ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಲಾವಣ್ಯ ಮದುವೆಯಾದ ಬಳಿಕವೂ ಸಹ ನಟಿಸುತ್ತಿದ್ದಾರೆ. ಮಿಸ್ ಫರ್ಪೆಕ್ಟ್ ಎಂಬ ವೆಬ್ ಸಿರೀಸ್ ನಲ್ಲಿ ಆಕೆ ನಟಿಸಿದ್ದು, ಇದು ಫೆ.2 ರಿಂದ ಸ್ಟ್ರೀಮಿಂಗ್ ಆಗಲಿದೆ.

Most Popular

To Top