Film News

ಸ್ಟಾರ್ ನಟಿ ಕಾಜಲ್ ಜೊತೆಗೆ ಅಸಭ್ಯವಾಗಿ ವರ್ತಿಸಿದ ಅಭಿಮಾನಿ, ಕಿರಿಕಿರಿ ಅನುಭವಿಸಿದ ನಟಿ, ವೈರಲ್ ಆದ ವಿಡಿಯೋ…..!

ಸೌತ್ ಸಿನಿರಂಗವನ್ನು ಸುಮಾರು ವರ್ಷಗಳ ಕಾಲ ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕಾಜಲ್ ಗೆ ಅಭಿಮಾನಿಯೋರ್ವ ಕಿರಿಕಿರಿಯಾಗುವಂತೆ ಮಾಡಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನೆಮಾ ಸೆಲೆಬ್ರೆಟಿಗಳಿಗೆ ಹೆಚ್ಚಾಗಿ ಅಭಿಮಾನಿಗಳಿರುತ್ತಾರೆ. ಅವರು ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಕೆಲವರು ಅಭಿಮಾನಿಗಳು ಅತಿರೇಖದ ಕೆಲಸ ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಅವರೊಂದಿಗೆ ಮಿತಿ ಮೀರಿ ವರ್ತನೆ ಮಾಡುತ್ತಾರೆ. ಅಂತಹುದೇ ಸಮಸ್ಯೆಯೊಂದು ಸ್ಟಾರ್‍ ನಟಿ ಕಾಜಲ್ ಗೆ ಎದುರಾಗಿದೆ. ಇತ್ತೀಚಿಗೆ ಕಾಜಲ್ ಹೈದರಾಬಾದ್ ನ ಬಂಜಾರಾ ಹಿಲ್ಸ್ ನಲ್ಲಿ ಶಾಪಿಂಗ್ ಮಾಲ್ ಒಪೆನಿಂಗ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಕಾಜಲ್ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅಲ್ಲಿದ್ದ ಓರ್ವ ಅಭಿಮಾನಿ ಆಕೆಯ ಅನುಮತಿಯಿಲ್ಲದೇ ಆಕೆಯ ದೇಹವನ್ನು ಮುಟ್ಟುವ ಕೆಲಸ ಮಾಡಿದ್ದಾನೆ.

ಶಾಪಿಂಗ್ ಮಾಲ್ ಓಪೆನಿಂಗ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಜಲ್ ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಧಾವಿಸಿದ್ದರು. ಈ ವೇಳೆ ಓರ್ವ ಹುಡುಗ ಕಾಜಲ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.  ಈ ಸಮಯದಲ್ಲಿ ಆತ ಸಡನ್ ಆಗಿ ಕಾಜಲ್ ಸೊಂಟದ ಮೇಲೆ ಕೈ ಹಾಕಿ ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಇದರಿಂದ ಕೂಡಲೇ ಶಾಕ್ ಆದ ಕಾಜಲ್ ಏನು ಮಾಡುತ್ತಿದ್ದಿಯಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಆ ವ್ಯಕ್ತಿಯ ವರ್ತನೆಯ ವಿರುದ್ದ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಆಕೆಯ ಕೈಯಲ್ಲಿ ಇದೀಗ ಹಲವಾರು ಸಿನೆಮಾಗಳಿವೆ. ಕೊನೆಯದಾಗಿ ಆಕೆ ನಂದಮೂರಿ ಬಾಲಕೃಷ್ಣ ರವರ ಭಗವಂತ ಕೇಸರಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಪಡೆದುಕೊಂಡಿದೆ. ಶೀಘ್ರದಲ್ಲೇ ಆಕೆ ಬಹುನಿರೀಕ್ಷಿತ ಇಂಡಿಯನ್-2 ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Most Popular

To Top