ಸುಳ್ಳು ಸುದ್ದಿಯ ಬಗ್ಗೆ ಬೇಸರಗೊಂಡ ನಟಿ ನಿವೇತಾ, ಮಾನವೀಯತೆಯಿಲ್ಲವೇ, ಹುಡುಗಿ ಜೀವನ ನಾಶ ಮಾಡುತ್ತೀರಾ ಎಂದ ನಟಿ….!

Follow Us :

ಟಾಲಿವುಡ್ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ತಮಿಳಿನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ಇತ್ತೀಚಿಗೆ ಆಕೆಯ ಬಗ್ಗೆ ಕೆಲವೊಂದು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಈ ಕುರಿತು ನಿವೇತಾ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ನಿವೇತಾ 2016 ರಲ್ಲಿ ತಮಿಳು ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸೌಂದರ್ಯ ಹಾಗೂ ಅಭಿನಯ ಎರಡನ್ನು ಹೊಂದಿರುವ ಈ ಮಲ್ಟಿ ಟ್ಯಾಲೆಂಟೆಡ್ ನಟಿ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ ಯುವಕರಲ್ಲಿ ಭಾರಿ ಕ್ರೇಜ್ ಹೊಂದಿರುವ ನಟಿಯರ ಸಾಲಿಗೆ ಸೇರಿದ್ದಾರೆ. ವಿವಿಧ ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರಗಳ ಜೊತೆಗೆ, ಚಾಲೆಂಜಿಗ್ ಪಾತ್ರಗಳಲ್ಲೂ ಸಹ ನಟಿಸಿ ಸೈ ಎನ್ನಿಸಿದ್ದಾರೆ. ಚಿತ್ರಲಹರಿ, ಅಲಾ ವೈಕುಂಠಪುರಂಲೋ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಇನ್ನೂ ನಿವೇತಾ ಕೊನೆಯದಾಗಿ ವಿಶ್ವಕ್ ಸೇನ್ ಜೊತೆಗೆ ದಾಸ್ ಕಾ ಧಮ್ಕಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಇದೀಗ ಆಕೆಯ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಈ ಕುರಿತು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸುದೀರ್ಘವಾಗಿ ವಿವರಣೆ ನೀಡಿದ್ದಾರೆ.

ಇನ್ನೂ ನಿವೇತಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸುಳ್ಳು ರೂಮರ್‍ ಬಗ್ಗೆ ಮಾತನಾಡುತ್ತಾ, ಏನಾದರೂ ಬರೆಯುವುದಕ್ಕೂ ಮುಂಚೆ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿದುಕೊಳ್ಳಬೇಕು.  ಒಂದು ಹುಡುಗಿಯ ಜೀವನದ ಬಗ್ಗೆ ಸುಳ್ಳು ಸುದ್ದಿ ಹರಿಬಿಡಬೇಡಿ. ನನಗೆ ಕೆಲವರು ತುಂಬಾ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರ ಬಗ್ಗೆ ನಾನು ಮೌನವಾಗಿಯೇ ಇದ್ದೀನಿ. ಆದರೆ ಅಂತಹ ಸುದ್ದಿಯನ್ನು ಬರೆಯುವಂತಹವರು ಓರ್ವ ಹುಡುಗಿಯ ಜೀವನ ನಾಶ ಮಾಡುವ ಮುಂಚೆ ನಾವು ಕೇಳಿದ ಮಾತುಗಳು ನಿಜವೇ, ಸುಳ್ಳಾ ಎಂದು ತಿಳಿಯಲು ಪ್ರಯತ್ನಿಸುತ್ತಾರೆಯೇ ಎಂದುಕೊಳ್ಳುತ್ತಿದ್ದೆ. ಆದರೆ ಕೆಲವು ದಿನಗಳಿಂದ ನಾನು ಹಾಗೂ ನನ್ನ ಕುಟುಂಬ ತುಂಬಾ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದೇನೆ. ನಾನು ಗೌರವಯುತವಾದ ಕುಟುಂಬದಿಂದ ಬಂದಿದ್ದೇನೆ. ನಾನು 16 ವರ್ಷ ವಯಸ್ಸಿನಿಂದ ಸಂಪಾದನೆ ಮಾಡುತ್ತಿದ್ದೇನೆ. ನಮ್ಮ ಕುಟುಂಬ 20 ವರ್ಷಗಳಿಂದ ದುಬೈನಲ್ಲೇ ಇದ್ದೀನಿ. ಸಿನೆಮಾ ಅವಕಾಶಕ್ಕಾಗಿ ನಾನು ನಿರ್ಮಾಪಕ, ನಿರ್ದೇಶಕ ಅಥವಾ ಹಿರೋ ಬಳಿ ಕೇಳಿಲ್ಲ. ಇಲ್ಲಿಯವರೆಗೂ 20 ಸಿನೆಮಾಗಳಲ್ಲಿ ನಟಿಸಿದ್ದೇನೆ. ಎಲ್ಲವೂ ನನ್ನ ಪ್ರತಿಭೆ ನೋಡಿ ಬಂದಂತಹ ಅವಕಾಶಗಳು. ಹೆಚ್ಚು ಹಣ ಸಂಪಾದಿಸಬೇಕು ಎಂಬ ಅತಿಯಾಸೆ ನನಗಿಲ್ಲ ಎಂದಿದ್ದಾರೆ.

2002 ರಿಂದ ನಾವು ದುಬೈನಲ್ಲಿ ಬಾಡಿಗೆ ಮನೆಯಲ್ಲಿದ್ದೇವೆ. 2013 ರಿಂದ ರೇಸಿಂಗ್ ನನ್ನ ಇಷ್ಟವಾಗಿ ಬದಲಾಗಿದೆ. ಚೆನೈಯಲ್ಲಿ ನಡೆಯುತ್ತಿರುವ ರೇಸ್ ಬಗ್ಗೆ ನನಗೆ ಗೊತ್ತಿಲ್ಲ. ಜೀವನದಲ್ಲಿ ತುಂಬಾ ಕಷ್ಟಗಳ ಬಳಿಕ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ನಾನು ಗೌರವಯುತವಾದ ಹಾಗೂ ಪ್ರಶಾಂತವಾದ ಜೀವನವನ್ನು ಬಯಸುತ್ತೇನೆ. ನಿಮ್ಮ ಕುಟುಂಬದ ಮಹಿಳೆಯರಂತೆ ನಾನು ಸಹ ಒಬ್ಬಳು. ನನ್ನ ಬಗ್ಗೆ ಈ ರೀತಿ ಕೆಟ್ಟದಾಗಿ ಮಾತನಾಡಬೇಡಿ ಎಂದು ಆಶಿಸುತ್ತೇನೆ. ಯಾವುದೇ ಸುದ್ದಿ ಬರೆಯುವುದಕ್ಕೂ ಮುಂಚೆ ಅದು ನಿಜವಾ ಸುಳ್ಳಾ ಎಂಬುದನ್ನು ತಿಳಿದುಕೊಳ್ಳಿ. ನನಗೆ ಬೆಂಬಲ ನೀಡಿದವರಿಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.