ಮದುವೆ ಪೊಟೋ ಹಂಚಿಕೊಂಡ ಅಲ್ಲು ಅರ್ಜುನ್, ಪತ್ನಿಗೆ ಪ್ರೀತಿಯಿಂದ ಶುಭ ಕೋರಿದ ನಟ, ವೈರಲ್ ಆದ ಪೋಸ್ಟ್…..!

Follow Us :

ಟಾಲಿವುಡ್ ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಯಲಾಗುವ ಅಲ್ಲು ಅರ್ಜುನ್ ಹಾಗೂ ಅಲ್ಲು ಸ್ನೇಹಾ ಆಗಾಗ ವಿದೇಶಗಳನ್ನು ಸುತ್ತಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅಲ್ಲು ಸ್ನೇಹಾ, ಆಗಾಗ ಕೆಲವೊಂದು ಪೊಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟ ಅಲ್ಲು ಅರ್ಜುನ್ ತಮ್ಮ ಮದುವೆ ಪೊಟೋ ಹಂಚಿಕೊಂಡು ಪತ್ನಿಗೆ ಪ್ರೀತಿಯಿಂದ ವಿವಾಹ ವಾರ್ಷಿಕೋತ್ಸವದ ಶುಭಾಷಯ ಕೋರಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಮೂಲಕ ಇಡೀ ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ಸದ್ಯ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದ್ದು, ಬಿಡುವು ಸಿಕ್ಕಾಗ ಅಲ್ಲು ಅರ್ಜುನ್ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುತ್ತಾರೆ. ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಜೋಡಿಯನ್ನು ಬೆಸ್ಟ್ ಜೋಡಿ ಎಂದೇ ಕರೆಯಬಹುದು. ಈ ಜೋಡಿ ತುಂಬಾ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಾರೆ. ತನ್ನ ಪ್ರೀತಿಯನ್ನು ಸಮಯ ಸಿಕ್ಕಾಗಲೆಲ್ಲಾ ಬನ್ನಿ ಪ್ರದರ್ಶನ ಮಾಡುತ್ತಿರುತ್ತಾರೆ. ಇದೀಗ ತಮ್ಮ 13ನೇ ವರ್ಷದ ವಿವಾಹ ವಾರ್ಷಿಕೋತ್ಸವವಾಗಿದ್ದು, ತನ್ನ ಪತ್ನಿಗೆ ಪ್ರೀತಿಯಿಂದ ಶುಭ ಕೋರಿದ್ದಾರೆ.  ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಅಲ್ಲು ಅರ್ಜುನ್ ತನ್ನ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ತನ್ನ ಪತ್ನಿಗೆ ಮುದ್ದಾಗಿ ಶುಭಾಷಯ ಕೋರಿದ್ದಾರೆ. ಈ ಫೋಸ್ಟ್ ನಲ್ಲಿ ಅಲ್ಲು ಅರ್ಜುನ್ ಮದುವೆ ಪೊಟೋ ಹಂಚಿಕೊಂಡು, ಮದುವೆಯಾಗಿ 13 ವರ್ಷ ಆಗಿದೆ. ಇಂತಹ ಅನೇಕ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕೆಂದು ಕೋರುತ್ತೇನೆ. ಹ್ಯಾಪಿ ಯಾನಿವರ್ಸರಿ ಕ್ಯೂಟಿ ಎಂದು ಬನ್ನಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭಾಷಯಗಳನ್ನು ಹರಿಬಿಡುತ್ತಿದ್ದಾರೆ. ಕಳೆದ 2011 ರ ಮಾ.6 ರಂದು ಮದುವೆ ನಡೆದಿತ್ತು. ಈ ದಂಪತಿಗೆ ಅಲ್ಲು ಅಯಾನ ಹಾಗೂ ಅಲ್ಲು ಅರ್ಹ ಎಂಬ ಇಬ್ಬರು ಮಕ್ಕಳಿದ್ದಾರೆ. ಈಗಾಗಲೇ ಅಲ್ಲು ಅರ್ಹಾ ಸಹ ಶಾಕುಂತಲಂ ಸಿನೆಮಾದಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಅಲ್ಲು ಸ್ನೇಹ ಸಹ ಯಾವುದೇ ಸ್ಟಾರ್‍ ನಟಿಗಿಂತ ಕಡಿಮೆಯಿಲ್ಲ ಎಂಬಂತೆ ಬ್ಯೂಟಿಪುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ.