ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟ ಕಾಜಲ್ ಅಗರ್ವಾಲ್, ಮದುವೆಯಾದರೂ ತಗ್ಗೇದೇ ಲೇ ಎಂಬಂತೆ ಹಾಟ್ ಆಗಿ ಕಾಣಿಸಿಕೊಂಡ ಚಂದಮಾಮ…….!

Follow Us :

ಸುಮಾರು ವರ್ಷಗಳ ಸೌತ್ ಸಿನಿರಂಗವನ್ನು ಕಾಲ ಆಳಿದಂತಹ ಸ್ಟಾರ್‍ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು, ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಕೆರಿಯರ್‍ ಆರಂಭದಿಂದಲೂ ತನ್ನ ಸಕ್ಸಸ್ ಗ್ರಾಫ್ ಸ್ಥಿರವಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ತೆಲುಗು, ತಮಿಳು ಭಾಷೆಗಳಲ್ಲಿ ಬಹುತೇಕ ಎಲ್ಲಾ ಸ್ಟಾರ್‍ ನಟರೊಂದಿಗೆ ತೆರೆ ಹಂಚಿಕೊಂಡಿದ್ದರು. ಟಾಲಿವುಡ್ ಹಿರೋಯಿನ್ ಗಳಲ್ಲಿ ಹೆಚ್ಚು ಸಕ್ಸಸ್ ಪಡೆದುಕೊಂಡ ನಟಿಯರಲ್ಲಿ ಕಾಜಲ್ ಸಹ ಒಬ್ಬರು ಎನ್ನಲಾಗುತ್ತಿದೆ. ಅನೇಕ ಕಮರ್ಷಿಯಲ್ ಸಿನೆಮಾಗಳ ಮೂಲಕ ಕಡಿಮೆ ಸಮಯದಲ್ಲೇ ಸ್ಟಾರ್‍ ಡಂ ಸಹ ಗಿಟ್ಟಿಸಿಕೊಂಡರು. ಇನ್ನೂ ಕೆರಿಯರ್‍ ಸಕ್ಸಸ್ ಪುಲ್ ಆಗಿರುವಾಗಲೇ ಆಕೆ ತನ್ನ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ಮದುವೆಯಾದ ಬಳಿಕ ಆಕೆ ಕೆಲವು ವರ್ಷಗಳ ಕಾಲ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಜೊತೆಗೆ ಮುದ್ದಾದ ಗಂಡು ಮಗುವಿಗೆ ಸಹ ಜನ್ಮ ಕೊಟ್ಟ ಕಾಜಲ್ ಇದೀಗ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಮದುವೆಯಾಗಿ ಮಗುವಿನ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ಗ್ಲಾಮರ್‍ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಮೊದಲಗಿಂತಲೂ ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಇದೀಗ ಗಣೇಶ ಚತುರ್ಥಿ ಅಂಗವಾಗಿ ಪತಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಗೋಲ್ಡ್ ಕಲರ್‍ ಸೀರೆಯಲ್ಲಿ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ ಹಾಟ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಎದೆ ಹಾಗೂ ಸೊಂಟದ ಮೈಮಾಟ ಪ್ರದರ್ಶನ ಮಾಡಿ ಗ್ಲಾಮರ್‍ ಶೋ ನಲ್ಲಿ ನೆಕ್ಟ್ ಲೆವೆಲ್ ಎಂಬಂತೆ ಮಾದಕ ನೋಟ ಬೀರಿದ್ದಾರೆ. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಾಜಲ್ ಅಗರ್ವಾಲ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಶಂಕರ್‍ ಹಾಗೂ ಕಮಲ್ ಹಾಸನ್ ರವರ ಕಾಂಬಿನೇಷನ್ ನಲ್ಲಿ ತೆರೆಗೆ ಬರಲಿರುವ ಇಂಡಿಯನ್-2 ಸಿನೆಮಾದಲ್ಲಿ ಹಾಗೂ ಬಾಲಯ್ಯ – ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಭಗವಂತ್ ಕೇಸರಿ ಸಹ ಪ್ರಧಾನ ಪಾತ್ರದಲ್ಲಿ ಕಾಜಲ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಸತ್ಯಭಾಮ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.