Film News

ಪಬ್ಲಿಕ್ ಪ್ಲೇಸ್ ನಲ್ಲಿ ಸ್ಟಾರ್ ನಟ ಶಾರುಖ್ ಖಾನ್ ಗೆ ತಳ್ಳಾಡುತ್ತಾ ಮುದ್ದಾಡಿದ ಮಹಿಳೆಯರು, ವೈರಲ್ ಆದ ಹಳೇಯ ವಿಡಿಯೋ….!

ಬಾಲಿವುಡ್ ಬಾದ್ ಷಾ ಎಂದೇ ಕರೆಯಲಾಗುವ ಶಾರುಖ್ ಖಾನ್ ದೇಶದಾದ್ಯಂತ ಭಾರಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಈಗಲೂ ಸಹ ಅನೇಕ ಯುವತಿಯರಿಗೆ ಶಾರುಖ್ ಖಾನ್ ಎಂದರೇ ತುಂಭಾನೆ ಕ್ರೇಜ್ ಇದೆ. ಆತನ ವಯಸ್ಸು 57 ದಾಟಿದರೂ ಸಹ ಭಾರಿ ಆಕ್ಷನ್ ಸಿನೆಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇದೀಗ ಶಾರುಖ್ ಅಭಿಮಾನಿಗಳು ಸಾರ್ವಜನಿಕವಾಗಿಯೇ ಆತನನ್ನು ಮುತ್ತಿಟ್ಟಿದ್ದಾರೆ. ಈ ಸಂಬಂಧ ಹಳೇಯ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸ್ಟಾರ್‍ ನಟ ಶಾರುಖ್ ಖಾನ್ ಸದ್ಯ ಜವಾನ್ ಸಿನೆಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಜವಾನ್ ಸಿನೆಮಾ ಒಳ್ಳೆಯ ಹಿಟ್ ಪಡೆದುಕೊಂಡು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಮೂಲಗಳ ಪ್ರಕಾರ ಜವಾನ್ ಸಿನೆಮಾ ವಿಶ್ವದಾದ್ಯಂತ ಸುಮಾರು 900 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಶಾರುಖ್ ಅಭಿಮಾನಿಗಳು ಸಾರ್ವಜನಿಕ ಸ್ಥಳದಲ್ಲಿ ಆತನನ್ನು ಸುತ್ತುವರೆದು ಮುತ್ತಿನ ಸುರಿಮಳೆಗೈದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿರುವ ಶಾರುಖ್ ರವರನ್ನು ಸುತ್ತುವರೆದು ಮುತ್ತಿನ ಸುರಿಮಳೆಗೈದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಶಾರುಖ್ ಖಾನ್ ವಾಪಸ್ಸು ಬರುವಾಗ ಆತನನ್ನು ಅಭಿಮಾನಿಗಳು ಸುತ್ತುವರೆದಿದ್ದಾರೆ. ಜೊತೆಗೆ ಶಾರುಖ್ ರನ್ನು ಎಳೆದಾಡಿ ಕಿಸ್ ಕೊಟ್ಟಿದ್ದಾರೆ. ಈ ವೇಳೆ ಶಾರುಖ್ ಖಾನ್ ಸಹ ಇರುಸು ಮುರುಸುಗೊಂಡಿದ್ದಾರೆ. ಇನ್ನೂ ಮಹಿಳೆಯರು ಸಾರ್ವಜನಿಕವಾಗಿ ಈ ರೀತಿಯಲ್ಲಿ ನಡೆದುಕೊಂಡ ರೀತಿಗೆ ನೆಟ್ಟಿಗರೂ ಸಹ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಮಹಿಳೆಯರು ಈ ರೀತಿಯಲ್ಲಿ ವರ್ತನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನು ಸಾಮಾನ್ಯವಾಗಿ ಶಾರುಖ್ ಖಾನ್ ಅಭಿಮಾನಿಗಳೊಂದಿಗೆ ಸೌಜನ್ಯದಿಂದಲೇ ನಡೆದುಕೊಳ್ಳುತ್ತಿರುತ್ತಾರೆ. ಅಂತಹ ವ್ಯಕ್ತಿ ಈ ವಿಡಿಯೋದಲ್ಲಿ ಕೊಂಚ ಬೇಸರ ಗೊಂಡಿರುವುದು ಸಹ ಕಾಣಿಸಿಕೊಂಡಿದೆ.

ಇದೇ ಮಾದರಿಯಲ್ಲಿ ಪುರುಷರು ಮಹಿಳಾ ನಟಿಯರೊಂದಿಗೆ ವರ್ತನೆ ಮಾಡಿದ್ದರೇ ಪರಿಸ್ಥಿತಿ ಏನಾಗುತ್ತಿತ್ತು. ಅನುಮತಿಯಿಲ್ಲದೇ ಯಾರನ್ನೂ ಸಹ ಆ ರೀತಿಯಲ್ಲಿ ಮುಟ್ಟಬಾರದು. ಮಹಿಳೆಯರು ಈ ರೀತಿಯಾಗಿ ನಡೆದುಕೊಂಡಿರುವುದು ಸಮಾಜ ತಲೆತಗ್ಗಿಸುವಂತಹುದು ಎಂದು ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ. ಸದ್ಯ ಹಳೇಯ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top