ದೇಶದಲ್ಲೇ ಎಷ್ಟೇ ಕಠಿಣ ಕಾನೂನುಗಳು ಬಂದರೂ ಸಹ ಲಂಚಾವತಾರ ನಿಲ್ಲುತ್ತಿಲ್ಲ. ಲಂಚ ಪಡೆಯುವುದೇ ದೊಡ್ಡ ಅಪಾರಧ ಎಂದು ಹೇಳಲಾಗುತ್ತದೆ. ಅಂತಹುದರಲ್ಲಿ ಲಂಚದ ಹಣಕ್ಕಾಗಿ ಇಬ್ಬರು ಪೊಲೀಸರು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಹಾರದ ನಳಂದಾ ಜಿಲ್ಲೆಯಲ್ಲಿ ಪೊಲೀಸರಿಬ್ಬರು ರಸ್ತೆಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಇಬ್ಬರು ಕೊರಳಪಟ್ಟಿ ಹಿಡಿದುಕೊಂಡು ಕಿತ್ತಾಡಿದ್ದಾರೆ. ಬಳಿಕ ಅದರಲ್ಳೂ ಓರ್ವ ಪೊಲೀಸ್ ಪಕ್ಕದಲ್ಲಿದ್ದ ಪೊಲೀಸ್ ವಾಹನದಲ್ಲಿದ್ದ ಲಾಠಿ ತಂದು ಮತ್ತೋರ್ವ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇನ್ನೂ ಈ ಗಲಾಟೆ ರಸ್ತೆಯಲ್ಲೇ ನಡೆಯುತ್ತಿದ್ದಾಗ ವಾಹನ ಸವಾರರು ವಾಹನಗಳನ್ನು ನಿಲ್ಲಿಸಿ ನೋಡಿದ್ದಾರೆ. ಜೊತೆಗೆ ಕೆಲವರು ಈ ಸನ್ನಿವೇಶವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಗಲಾಟೆಗಳನ್ನು, ಹೊಡೆದಾಟಗಳನ್ನು ತಡೆಯಬೇಕಾದಂತಹ ಪೊಲೀಸರು ರಸ್ತೆಯಲ್ಲಿ ಹೊಡೆದಾಡುತ್ತಿರುವಂತಹ ದೃಶ್ಯ ಕಂಡು ಸಾರ್ವಜನಿಕರು ಏನು ಮಾಡಬೇಕೆಂದು ತೊಚದೇ ರಸ್ತೆಯಲ್ಲಿ ನಿಂತು ನೋಡುತ್ತಿದ್ದರು ಎನ್ನಲಾಗಿದೆ.
ಇನ್ನೂ ಇಬ್ಬರೂ ಪೊಲೀಸರು ಯಾವ ಕಾರಣಕ್ಕಾಗಿ ಗಲಾಟೆ ಮಾಡಿಕೊಂಡರು ಎಂಬ ಬಗ್ಗೆ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ. ಲಂಚದ ಹಣಕ್ಕಾಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅವರಿಬ್ಬರೂ ಹೊಡೆದಾಡುಕೊಂಡ ದೃಶ್ಯಗಳ ವಿಡಿಯೋಗಳನ್ನು ಕೆಲವರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇನ್ನೂ ಪೊಲೀಸರ ಜಗಳ ಹಿರಿಯ ಪೊಲೀಸ್ ಅಧಿಕಾರಿಗಳ ವರೆಗೂ ಹೋಗಿದ್ದು, ಇಬ್ಬರೂ ಪೊಲೀಸರನ್ನು ಕಚೇರಿಗೆ ಕರೆಸಿ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿದುಬಂದಿದೆ. ಆದರೆ ಈ ಪೊಲೀಸರನ್ನು ಅಮಾನತ್ತು ಮಾಡುವ ಬದಲಿಗೆ ಶಾಶ್ವತವಾಗಿ ಕೆಲಸದಿಂದ ತೆಗೆದು ಹಾಕಬೇಕೆಂದು ಸಾರ್ವಜನಿಕರಿಂದ ಆಗ್ರಹ ಸಹ ವ್ಯಕ್ತವಾಗಿದೆ ಎನ್ನಲಾಗಿದೆ.
