Film News

ಅಷ್ಟಕ್ಕೂ ಆಪಲ್ ಬ್ಯೂಟಿ ಹನ್ಸಿಕಾಗೆ ಕಿರುಕುಳ ಕೊಟ್ಟ ಆ ತೆಲುಗು ಹಿರೋ ಯಾರು, ಸೋಷಿಯಲ್ ಮಿಡಿಯಾದಲ್ಲಿ ಶುರುವಾಯ್ತು ಚರ್ಚೆ…!

ಸೌತ್ ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿರುವ ಹನ್ಸಿಕಾ ಮೊಟ್ವಾನಿ ಮದುವೆಯ ಬಳಿಕವೂ ಸಹ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ ದೇಶಮುದುರು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಖ್ಯಾತಿ ಪಡೆದುಕೊಂಡರು. ಸಿನಿರಂಗದಲ್ಲಿ ಈಗಾಗಲೇ ಅನೇಕ ನಟಿಯರು ಮಿಟೂ ಬಗ್ಗೆ ಒಪೆನ್ ಆಗಿದ್ದಾರೆ. ಇತ್ತೀಚಿಗೆ ಹನ್ಸಿಕಾ ಸಹ ಈ ಬಗ್ಗೆ ಮಾತನಾಡಿದ್ದರು. ಇದೀಗ ಹನ್ಸಿಕಾ ಗೆ ಕಿರುಕುಳ ಕೊಟ್ಟ ಆ ನಟ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಮಿಟೂ ಅಭಿಯಾನ ಪ್ರಚಲಿತಕ್ಕೆ ಬಂದ ಬಳಿಕ ಅನೇಕ ನಟಿಯರು ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಅನೇಕ ಸ್ಟಾರ್‍ ನಟಿಯರೂ ಸಹ ಈ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಕೆಲವರಂತೂ ಮಿಟೂ ಅನ್ನು ದೊಡ್ಡ ಉದ್ಯಮದಂತೆ ಸಹ ಮುಂದೆ ತೆಗೆದುಕೊಂಡು ಹೋಗಿದ್ದರು. ಈ ಹಾದಿಯಲ್ಲೇ ನಟಿ ಹನ್ಸಿಕಾ ಸಹ ತಾನು ಸಿನಿರಂಗದಲ್ಲಿ ಎದುರಿಸಿದ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಓರ್ವ ನಟ ಹನ್ಸಿಕಾಗೆ ಡೇಟ್ ಗೆ ಬರಬೇಕೆಂದು ಒತ್ತಡ ಹೇರಿದ್ದರಂತೆ. ಡೇಟ್ ಗೆ ಬರುತ್ತೀಯಾ ಎಂದು ಸದಾ ಕೇಳುತ್ತಿದ್ದನಂತೆ. ಪದೇ ಪದೇ ಕೇಳುತ್ತಿದ್ದಾಗ ಆಕೆ ಆತನಿಗೆ ತಕ್ಕ ಪಾಠ ಸಹ ಕಲಿಸಿದ್ದರಂತೆ ಎಂದು ಆಕೆ ಈ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಈ ಬಗ್ಗೆ ದೊಡ್ಡ ಚರ್ಚೆಯೊಂದು ಶುರುವಾಗಿದೆ. ತೆಲುಗು ಸಿನಿರಂಗದಲ್ಲಿ ಅಂತಹ ನಟ ಯಾರು ಎಂಬ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೂ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಜೋರಾದ ಚರ್ಚೆ ನಡೆಯುತ್ತಿದ್ದು, ಹನ್ಸಿಕಾಗೂ ಸಹ ಲೈಂಗಿಕ ಕಿರುಕುಳ ಆಗಿತ್ತಾ, ಅಷ್ಟಕ್ಕೂ ಆ ಹಿರೋ ಯಾರು, ಹನ್ಸಿಕಾಗೆ ಅಷ್ಟೊಂದು ಕಿರುಕುಳ ಕೊಟ್ಟಂತಹ ನಟ ಯಾರು ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಇನ್ನೂ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಹನ್ಸಿಕಾ ಸಿನಿರಂಗದಲ್ಲಿ ತಾನು ಎದುರಿಸಿದಂತಹ ಸಮಸ್ಯೆಗಳು, ಕಷ್ಟಗಳ ಬಗ್ಗೆ ಸಹ ಹೇಳಿದ್ದರು. ಇದೇ ವೇಳೆ ತನಗೆ ಓರ್ವ ಹಿರೋ ನೀಡಿದ ಕಿರುಕುಳದ ಬಗ್ಗೆ ಸಹ ಮಾತನಾಡಿದ್ದಾರೆ. ಇನ್ನೂ ಹನ್ಸಿಕಾ ಮೊಟ್ವಾನಿ ತೆಲುಗಿನಲ್ಲಿ ಬಹುತೇಕ ಒಳ್ಳೆಯ ಫೇಂ ಇರುವಂತಹ ನಟರೊಂದಿಗೆ ಸಿನೆಮಾಗಳನ್ನು ಮಾಡಿದ್ದಾರೆ. ಆಕೆಗೆ ಕಿರುಕುಳ ಕೊಟ್ಟ ನಟ ಯಾರು ಎಂಬುದನ್ನು ಮಾತ್ರ ಆಕೆ ರಿವೀಲ್ ಮಾಡಿಲ್ಲ. ಇನ್ನೂ ಹನ್ಸಿಕಾ ಆ ನಟ ಯಾರು ಎಂಬ ಬಗ್ಗೆ ಸ್ಪಷ್ಟನೆ ನೀಡಲಿ ಎಂಬುದು ಅನೇಕರು ಅಭಿಪ್ರಾಯಪಡುತ್ತಿದ್ದಾರೆ.

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಹನ್ಸಿಕಾ ಅನೇಕ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡರು. ಕಳೆದ ವರ್ಷ ಡಿಸೆಂಬರ್‍ 4 ರಂದು ಜೈಪುರ್‍ ನಲ್ಲಿ ಹನ್ಸಿಕಾ ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ನನ್ನು ವಿವಾಹವಾದರು. ಸದ್ಯ ಪತಿಯೊಂದಿಗೆ ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಮದುವೆಯಾದರೂ ಸಹ ಗ್ಲಾಮರ್‍ ಶೋನಲ್ಲಿ ಮಾತ್ರ ತಗ್ಗೇದೇ ಲೇ ಎನ್ನುವಂತೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top