ಆತ ನನ್ನ ಒಳ ಉಡುಪು ನೋಡಬೇಕು ಎಂದ, ನಿರ್ದೇಶಕರೊಬ್ಬರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಪ್ರಿಯಾಂಕಾ ಚೋಪ್ರಾ…..!

ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಟಾಪ್ ಸ್ಟಾರ್‍ ಗಳ ಜೊತೆಗೆ ಅನೇಕ ಸಿನೆಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಬ್ಯೂಟಿ 2000 ನೇ ಇಸವಿಯಲ್ಲಿ ಮಿಸ್ ವರ್ಲ್ಡ್ ಟೈಟಲ್ ಸಹ ಪಡೆದುಕೊಂಡರು. ತಮಿಳು ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಬಳಿಕ ಬಾಲಿವುಡ್ ನಲ್ಲೆ ಸೆಟಲ್ ಆದರು. ಸದ್ಯ ಆಕೆ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ನಿರ್ದೇಶಕರೊಬ್ಬರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸುಮಾರು ಎರಡು ದಶಕಗಳ ಕಾಲ ಪ್ರಿಯಾಂಕಾ ಚೋಪ್ರಾ ಸಿನಿರಂಗದಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ನಲ್ಲೂ ಸಹ ತನ್ನದೇ ಆದ ಕ್ರೇಜ್ ಪಡೆದುಕೊಂಡು ಅಲ್ಲೂ ಸಹ ಬ್ಯುಸಿಯಾಗಿದ್ದಾರೆ. ಇನ್ನೂ ಆಕೆಯ ಸೌಂದರ್ಯದ ಬಗ್ಗೆ ಎಷ್ಟರ ಮಟ್ಟಿಗೆ ವರ್ಣಿಸಿದರೂ ಕಡಿಮೆ ಎಂತಲೇ ಹೇಳಬಹುದು. ಬಾಲಿವುಡ್ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಇದೀಗ ಹಾಲಿವುಡ್ ನಲ್ಲೂ ಸಹ ಅಲ್ಲಿನ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ಆಕೆ ಹಾಲಿವುಡ್ ಮೂಲದ ನಿಕ್ ಜೋನಸ್ ಎಂಬಾತನೊಂದಿಗೆ ಡೇಟಿಂಗ್ ಶುರು ಮಾಡಿ ಮದುವೆಯಾದ ಬಳಿಕ ಆಕೆಯ ಕೆರಿಯರ್‍ ಸಹ ಬದಲಾಯಿತು. ಆತನೊಂದಿಗೆ ಡೇಟಿಂಗ್ ಶುರು ಮಾಡಿದ ಬಳಿಕ ಆಕೆಗೆ ಹಾಲಿವುಡ್ ನಲ್ಲಿ ಅವಕಾಶಗಳು ಬರಲಾರಂಭಿಸಿದೆ. ಇದೀಗ ಪ್ರಿಯಾಂಕಾ ಚೋಪ್ರಾ ಕೆರಿಯರ್‍ ತುಂಬಾ ಜೋರಾಗಿಯೇ ಸಾಗುತ್ತಿದೆ. ವೆಬ್ ಸಿರೀಸ್ ಗಳು, ಹಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಿನಿರಂಗದಲ್ಲಿ ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇನ್ನೂ ಪ್ರಿಯಾಂಕಾ ಚೋಪ್ರಾ ಸಹ ಅದೇ ಸಮಸ್ಯೆಯನ್ನು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬಾಲಿವುಡ್ ಸಿನೆಮಾದಲ್ಲಿ ನಟಿಸುತ್ತಿದ್ದಾಗ ನಿರ್ದೇಶಕನೊಬ್ಬ ಆಕೆಯೊಂದಿಗೆ ಅಸಭ್ಯಕರವಾಗಿ ನಡೆದುಕೊಂಡಿದ್ದರಂತೆ.  ಆ ಸಿನೆಮಾದಲ್ಲಿ ಪ್ರಿಯಾಂಕಾ ಚೋಪ್ರಾ ಅಂಡರ್‍ ಕವರ್‍ ಪಾತ್ರವಾಗಿತ್ತಂತೆ. ಒಬ್ಬ ವ್ಯಕ್ತಿಯನ್ನು ಮಾಯೆ ಮಾಡಿ ಆತನೊಂದಿಗೆ ಶೃಂಗಾರದ ಮೂಲಕ ಹಿಡಿದುಕೊಳ್ಳುವ ಸನ್ನಿವೇಶ ಇತ್ತಂತೆ. ಈ ದೃಶ್ಯಕ್ಕಾಗಿ ಧರಿಸಿದಂತ ಬಟ್ಟೆಯಲ್ಲೇ ಒಂದು ವಸ್ತ್ರ ತೆಗೆದರೇ ಸಾಕು ಎಂದು ನಾನು ಸಿದ್ದವಾಗಿದ್ದೆ. ಆದರೆ ನಿರ್ದೇಶಕ ಅದಕ್ಕೆ ನಿರಾಕರಿಸಿ ನಾನು ಒಳ ಉಡುಪು ನೋಡಬೇಕು ಎಂದು ಅಸಭ್ಯಕರವಾಗಿ ಹೇಳಿದ್ದರಂತೆ. ಅದೇ ಮಾದರಿಯಲ್ಲಿ ಕಾಸ್ಟ್ಯೂಮ್ಸ್ ಸಹ ಸಿದ್ದ ಮಾಡುವಂತೆ ಸ್ಟೈಲಿಷ್ಟ್ ಗೆ ಹೇಳಿದ್ದರಂತೆ.

ಇದರಿಂದ ಆ ನಿರ್ದೇಶಕನ ವರ್ತನೆಗೆ ಬೇಸತ್ತ ಪ್ರಿಯಾಂಕಾ ಆ ಸಿನೆಮಾದಿಂದ ದೂರವಾದರಂತೆ. ಆದರೆ ಆಕೆ ಆ ನಿರ್ದೇಶಕನ ಹೆಸರು ಹೇಳಲು ಇಷ್ಟಪಟ್ಟಿಲ್ಲ. ಇನ್ನೂ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ಅಭಿನಯದ ಸಿಟಾಡೆಲ್ ವೆಬ್ ಸಿರೀಸ್ ಹಾಗೂ ಲವ್ ಎಗೈನ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಈ ಸಿನೆಮಾಗಳೂ ಸಹ ಒಳ್ಳೆಯ ಸಕ್ಸಸ್ ಕಂಡುಕೊಂಡಿದ್ದಾರೆ.