ದೇಹದ ಅಂಗಾಗ ಬೆಳೆಯಲು 16 ವರ್ಷಕ್ಕೆ ಹನ್ಸಿಕಾಗೆ ಅವರ ತಾಯಿ ಇಂಜಕ್ಷನ್ ಕೊಡಿಸಿದ್ರಾ, ಸ್ಪಷ್ಟನೆ ಕೊಟ್ಟ ನಟಿ……!

Follow Us :

ಮೊದಲನೇ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಹನ್ಸಿಕಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ದೇಶಮುದುರು ಎಂಬ ಸಿನೆಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸಿದ ಹನ್ಸಿಕಾ ಮೊಟ್ವಾನಿ ಕಡಿಮೆ ಸಮಯದಲ್ಲೇ ಅನೇಕ ಯುವಕರ ಕನಸಿನ ರಾಣಿಯಾದರು. ಈ ಸಿನೆಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಸಹ ಪಡೆದುಕೊಂಡರು. ಈಕೆಯ ಬಗ್ಗೆ ಸುಮಾರು ವರ್ಷಗಳಿಂದ ಒಂದು ರೂಮರ್‍ ಹರಿದಾಡುತ್ತಲೇ ಇದೆ. ಈ ರೂಮರ್‍ ಗೆ ಆಕೆ ರಿಯಾಕ್ಟ್ ಆಗಿದ್ದಾರೆ.

ಟೀನೇಜ್ ನಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಗ್ಲಾಮರ್‍ ಪರವಾಗಿ ಭಾರಿ ಫೇಂ ಸಂಪಾದಿಸಿಕೊಂಡರು. ಇಂದಿಗೂ ಸಹ ಆಕೆ ಗ್ಲಾಮರ್‍ ಕೊಂಚ ಕೂಡ ಕಡಿಮೆಯಾಗಿಲ್ಲ ಎಂಬಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಕಳೆದ ವರ್ಷ ಡಿ.4 ರಂದು ಹನ್ಸಿಕಾ ಜೈಪೂರ್‍ ನ ಪ್ಯಾಲೆಸ್ ಒಂದರಲ್ಲಿ ಸೊಹೈಲ್ ಎಂಬಾತನೊಂದಿಗೆ ಸಪ್ತಪದಿ ತುಳಿದಿದ್ದಾರೆ. ಸದ್ಯ ಆಕೆ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಹನ್ಸಿಕಾ ಈ ಹಿಂದೆ ಸೌಂದರ್ಯ ವೃದ್ದಿಗಾಗಿ ಹನ್ಸಿಕಾ ಇಂಜೆಕ್ಷನ್ ಪಡೆದುಕೊಂಡಿದ್ದರು ಎಂಬ ರೂಮರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ 2007 ರಲ್ಲಿ ಪೂರಿ ಜಗನ್ನಾಥ್ ನಿರ್ದೇಶನಲ್ಲಿ ತೆರೆಕಂಡ ದೇಶಮುದುರು ಸಿನೆಮಾದ ಮೂಲಕ ನಟಿಯಾದರು. ಈ ಸಿನೆಮಾದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ಹನ್ಸಿಕಾ ನಟಿಸಿದ್ದರು. ಈ ಸಿನೆಮಾದ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶಗಳು ಬಂದವು.

ಇನ್ನೂ ನಟಿ ಹನ್ಸಿಕಾ ದೇಶಮುದುರು ಸಿನೆಮಾದಲ್ಲಿ ನಟಿಸಬೇಕಾದರೇ ಆಕೆಗೆ ವಯಸ್ಸು ಕೇವಲ 16 ವರ್ಷ ಮಾತ್ರ. ಆಕೆ 1991 ರಲ್ಲಿ ಜನಸಿದರು. ಟಿನೇಜ್ ನಲ್ಲೇ ಆಕೆ ಹಿರೋಯಿನ್ ಆದರು. ನೋಡಲು ಆಕೆ ವಯಸ್ಸಾದವಳಂತೆ ಕಾಣಿಸಿಕೊಂಡಿದ್ದಾರೆ. ಆಕೆಯ ಫಿಜಿಕ್ ಬೆಳೆಯಲು ಆಕೆ ಹಾರ್ಮೋನ್ ಇಂಜೆಕ್ಷನ್ ಪಡೆದುಕೊಂಡಿದ್ದಾರೆ ಎಂಬ ರೂಮರ್‍ ತುಂಬಾನೆ ವೈರಲ್ ಆಗಿತ್ತು. ಹನ್ಸಿಕಾ ತಾಯಿ ಮೋನಾ ಮೊಟ್ವಾನಿ ವೃತ್ತಿಪರವಾಗಿ ಸ್ಕಿನ್ ಸ್ಪೇಷಲಿಸ್ಟ್ ಆಗಿದ್ದು, ಆಕೆ ತನ್ನ ಮಗಳನ್ನು ಹಿರೋಯಿನ್ ಮಾಡಲು ಹಾರ್ಮೋನ್ ಇಂಜಕ್ಷನ್ ಕೊಟ್ಟಿದ್ದಾರೆ ಎಂಬ ರೂಮರ್‍ ಭಾರಿ ಹರಿದಾಡಿತ್ತು. ಈ ರೂಮರ್‍ ಗಳ ಬಗ್ಗೆ ಹನ್ಸಿಕಾ ರಿಯಾಕ್ಟ್ ಆಗಿದ್ದಾರೆ. ಆಕೆ ಅದೆಲ್ಲವೂ ಸುಳ್ಳು ಸುದ್ದಿಗಳು ಮಾತ್ರ ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ಇನ್ನೂ ಹನ್ಸಿಕಾ ಮೊಟ್ವಾನಿ ಮದುವೆಯಾದ ಬಳಿಕವೂ ಸಹ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ತೆರೆಕಂಡ ರೌಡಿ ಬೇಬಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಶೀಘ್ರದಲ್ಲೇ ಆಕೆ ಗಾರ್ಡಿಯನ್ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.