ಬಹುನಿರೀಕ್ಷಿತ ಯಶ್ ಮುಂದಿನ ಸಿನೆಮಾ ಟೈಟಲ್ ರಿವೀಲ್, ಟಾಕ್ಸಿಕ್ ಸಿನೆಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ…..!

Follow Us :

ಕೆಜಿಎಫ್ ಸಿನೆಮಾದ ಬಳಿಕ ಯಶ್ ರವರ ಸಿನೆಮಾಗಳ ಮೇಲೆ ತುಂಭಾನೆ ನಿರೀಕ್ಷೆ ಹುಟ್ಟಿದೆ ಎನ್ನಬಹುದು. ಕೆಜಿಎಫ್ ಸಿನೆಮಾ ತೆರೆಕಂಡು ವರ್ಷಗಳು ಕಳೆದರೂ ಯಶ್ ರವರ ಸಿನೆಮಾ ಯಾವುದೂ ಘೋಷಣೆಯಾಗದ ಕಾರಣ ಅಭಿಮಾನಿಗಳು ತುಂಬಾನೆ ನಿರಾಸೆಯಾಗಿದ್ದರು. ಆದರೆ ಇದೀಗ ಯಶ್ ರವರ YASH19 ಸಿನೆಮಾದ ಟೈಟಲ್ ರಿವೀಲ್ ಆಗಿದೆ. ಯಶ್ ರವರ ಹೊಸ ಸಿನೆಮಾಗೆ ಟಾಕ್ಸಿಕ್ ಎಂಬ ಹೆಸರನ್ನಿಟ್ಟಿದ್ದು, ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ.

ನಟ ಯಶ್ ರವರ ಮುಂದಿನ ಸಿನೆಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಯಶ್ ರವರು ಎಲ್ಲೇ ಕಂಡರೂ ಅವರ ಮುಂದಿನ ಸಿನೆಮಾದ ಬಗ್ಗೆ ದೊಡ್ಡ ಪ್ರಶ್ನೆಗಳ ಸುರಿಮಳೆಯಾಗುತ್ತಿತ್ತು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸಹ ಈ ಕುರಿತು ಭಾರಿ ಚರ್ಚೆ ಆಗುತ್ತಿತ್ತು. ಯಶ್ ಮುಂದಿನ ಸಿನೆಮಾಗೆ ಭಾರಿ ನಿರೀಕ್ಷೆಯಿತ್ತು. ಅದರಂತೆ ಇದೀಗ ಭರ್ಜರಿಯಾದ ಟೈಟಲ್ ಅನ್ನೇ ಇಡಲಾಗಿದೆ. ಈ ಸಿನೆಮಾಗೆ ಟಾಕ್ಸಿಕ್ ಎಂಬ ಟೈಟಲ್ ಇಟ್ಟಿದ್ದು, ಟೈಟಲ್ ಟೀಸರ್‍ ಡಿ.8 ಬೆಳಿಗ್ಗೆ 9.55 ರಂದು ರಿಲೀಸ್ ಆಗಿದೆ. ಈ ಟೀಸರ್‍ ರಿಲೀಸ್ ಆದ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಸಹ ಕಂಡಿದೆ.

ಇನ್ನೂ ಈ ಸಿನೆಮಾವನ್ನು ಕೆವಿಎನ್ ಪ್ರೊಡಕ್ಷನ್ ಬ್ಯಾನರ್‍ ನಡಿ ಮಲಯಾಳಂ ಯಂಗ್ ನಿರ್ದೇಶಕಿ ಗೀತಾ ಮೋಹನದಾಸ್ ರವರ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ಹಿಂದೆಯೇ ಟೈಟಲ್ ಟೀಸರ್‍ ಬಗ್ಗೆ ರಾಕಿಭಾಯ್ ಯಶ್ ಘೋಷಣೆ ಮಾಡಿದ್ದರು. ಯಶ್ ಏನೇ ಮಾಡಿದರೂ ಹೊಸದಾಗಿಯೇ ಆಲೋಚನೆ ಮಾಡುವ ಕಾರಣದಿಂದ ಅವರ ಸಿನೆಮಾದ ಟೈಟಲ್ ಟೀಸರ್‍ ಅನ್ನು 9.55 ಕ್ಕೆ ರಿಲೀಸ್ ಮಾಡಿದ್ದಾರೆ. ಅಂದರೇ 9+5+5 ಕೂಡಿದರೇ 19 ಬರುತ್ತದೆ. ಆದ್ದರಿಂದ ಯಶ್ ರವರ YASH19 ಸಿನೆಮಾದ ಟೈಟಲ್ ಅದೇ ಸಮಯಕ್ಕೆ ರಿಲೀಸ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೆಲವು ದಿನಗಳಿಂದ ಯಶ್ ರವರ ಸಿನೆಮಾದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಅದರಂತೆ ಈ ಸಿನೆಮಾದಲ್ಲಿ ಮೂವರು ಹಿರೋಯಿನ್ ಗಳಿರಲಿದ್ದಾರಂತೆ. ಅದರಂತೆ ಸಾಯಿ ಪಲ್ಲವಿ, ಮೃಣಾಲ್ ಠಾಕೂರ್‍ ಸೇರಿದಂತೆ ಮತ್ತೋರ್ವ ನಟಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ.