Film News

ವೈಟ್ ಕಲರ್ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಅಪ್ಸರೆಯಂತೆ ಕಾಣಿಸಿಕೊಂಡ ದೀಪಿಕಾ, ವೈರಲ್ ಆದ ಪೊಟೋಸ್….!

ಬಾಲಿವುಡ್ ಸಿನಿರಂಗದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಮೊದಲ ಸ್ಥಾನದಲ್ಲಿರುತ್ತಾರೆ. ಟಾಪ್ ನಟಿಯಾಗಿ, ಬ್ಯುಸಿ ನಟಿಯಾಗಿ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ಈಕೆ ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲೂ ನಟಿಸುತ್ತಾ ತಮ್ಮ ಸ್ಟಾರ್‍ ಡಮ್ ಅನ್ನು ಮತಷ್ಟು ಏರಿಸಿಕೊಂಡಿದ್ದಾರೆ. ಇದೀಗ ಮುಂಬೈನಲ್ಲಿ ನಡೆದಂತಹ ಈವೆಂಟ್ ಒಂದರಲ್ಲಿ ರಾಯಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು, ಆಕೆ ಸುರಲೋಕದ ಅಪ್ಸರೆಯಂತೆ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್‍ ನಟಿ ದಿಪೀಕಾ ಪಡುಕೋಣೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಮದುವೆಯಾದ ಬಳಿಕವೂ ಆಕೆಗೆ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.  ಅದರಲ್ಲೂ ಅನೇಕ ಸಿನೆಮಾಗಳಲ್ಲಿ ಆಕೆ ತುಂಬಾ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆ ಪ್ರಭಾಸ್ ಜೊತೆಗೆ ಆಕೆ ಪ್ರಾಜೆಕ್ಟ್ ಕೆ ಎಂಬ ಪ್ಯಾನ್ ವರ್ಲ್ಡ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಈ ಸಿನೆಮಾಗೆ ಕಲ್ಕಿ 2898 AD ಎಂಬ ಟೈಟಲ್ ಸಹ ಘೋಷಣೆ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನೆಮಾ ಥಿಯೇಟರ್‍ ಗಳಲ್ಲಿ ಸದ್ದು ಮಾಡಲಿದೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಗಾಗ ಸಖತ್ ಸದ್ದು ಮಾಡುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವಂತಹ ದೀಪಿಕಾ ಆಗಿದ್ದಾಂಗೆ ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ವೈಯುಕ್ತಿಕ ವಿಚಾರಗಳು ಹಾಗೂ ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಈಕೆ ಏನೇ ಪೋಸ್ಟ್ ಹಂಚಿಕೊಂಡರು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಈ ಹಾದಿಯಲ್ಲೆ ದೀಪಿಕಾ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವೈಟ್ ಕಲರ್‍ ಸೀರೆಯನ್ನು ಧರಿಸಿ ಸುರಲೋಕದ ಅಪ್ಸರೆಯಂತೆ ರಾಯಲ್ ಲುಕ್ಸ್ ಕೊಟ್ಟಿದ್ದಾರೆ. ಸೀರೆಯಲ್ಲಿ ಮತಷ್ಟು ಸುಂದರವಾಗಿ ಕಾಣಿಸಿಕೊಂಡು ಎಲ್ಲರ ದೃಷ್ಟಿ ತನ್ನತ್ತ ತಿರುಗಿ ನೋಡುವಂತೆ ಮಾಡಿಕೊಂಡಿದ್ದಾರೆ. ರಾಂಪ್ ವಾಕ್ ಮಾಡುತ್ತಾ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಅಷ್ಟೇಅಲ್ಲದೇ ದೀಪಿಕಾ ಪತಿ ರಣಬೀರ್‍ ಸಿಂಗ್ ಸಹ ಫಿದಾ ಆಗಿ ಮುತ್ತಿಟ್ಟಿದ್ದಾರೆ. ಸದ್ಯ ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ದೀಪಿಕಾ ಕೊನೆಯದಾಗಿ ಶಾರುಖ್ ಜೊತೆಗೆ ಪಠಾನ್ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಸದ್ಯ ಆಕೆಯ ಕೈಯಲ್ಲಿ ಮೂರು ದೊಡ್ಡ ಪ್ರಾಜೆಕ್ಟ್ ಗಳಿವೆ. ಪ್ರಭಾಸ್ ಜೊತೆಗೆ ಕಲ್ಕಿ 2898 AD, ಬಾಲಿವುಡ್ ಹೃತಿಕ್ ರೋಷನ್ ಜೊತೆ ಫೈಟರ್‍ ಹಾಗೂ ಶಾರುಖ್ ಖಾನ್ ರವರ ಜವಾನ್ ಸಿನೆಮಾದಲ್ಲಿ ಸ್ಪೇಷಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Most Popular

To Top