ಭಾರಿ ಸಂಭಾವನೆ ಏರಿಸಿದ ಕೀರ್ತಿ ಸುರೇಶ್, ಮೊದಲಿಗಿಂತ ಡಬಲ್ ಡಿಮ್ಯಾಂಡ್ ಮಾಡುತ್ತಿದ್ದಾರಂತೆ….!

ನಟನೆಯ ಜೊತೆಗೆ ಸೌಂದರ್ಯವನ್ನು ಸಹ ಹೊಂದಿರುವ ನಟಿ ಕೀರ್ತಿ ಸುರೇಶ್ ಸಿನಿರಂಗದಲ್ಲಿ ಬೇಡಿಕೆಯಿರುವಂತಹ ನಟಿಯಾಗಿದ್ದಾರೆ. ಆಕೆಯ ತಾಕತ್ತು ಏನು ಎಂಬುದನ್ನು ಮಹಾನಟಿ ಸಿನೆಮಾದ ಮೂಲಕ ಪ್ರದರ್ಶನ ಮಾಡಿದರು. ಈ ಸಿನೆಮಾದ ಬಳಿಕ ಕೀರ್ತಿಗೆ ಅನೇಕ ಅವಕಾಶಗಳು ದೊರೆತವು. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕಾಗಿ ಜಾತಿಯ ಉತ್ತಮ ನಟಿಯಾಗಿ ಅವಾರ್ಡ್ ಸಹ ಪಡೆದುಕೊಂಡರು. ಇದೀಗ ಆಕೆ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದು, ಇದೀಗ ಆಕೆ ಮೊದಲಿಗಿಂತ ಸಂಭಾವನೆಯನ್ನು ಡಬಲ್ ಮಾಡಿಕೊಂಡಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಹಿಟ್ಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆ ಸಂಭಾವನೆ ಸಹ ಏರಿಸಿದ್ದಾರೆ ಎನ್ನಲಾಗುತ್ತಿದೆ.

ಆರಂಭದಲ್ಲಿ ಕೀರ್ತಿ ಸುರೇಶ್ ಕೊಂಚ ದಪ್ಪವಾಗಿದ್ದರು. ಮಹಾನಟಿ ಸಿನೆಮಾಗಾಗಿ ಆಕೆ ದಪ್ಪ ಆಗಿದ್ದರು. ಬಳಿಕ ಆಕೆ ತುಂಬಾ ಸಣ್ಣ ಆಗಿದ್ದಾರೆ. ಕರಿಯರ್‍ ಆರಂಭದಲ್ಲಿ ಆಕೆ ಹೋಮ್ಲಿ ಹಿರೋಯಿನ್ ಆಗಿಯೆ ಕಾಣಿಸಿಕೊಂಡರು. ಇದೀಗ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಆಕೆಗೆ ಸರಿಯಾದ ಸಕ್ಸಸ್ ಸಿಗದ ಸಮಯದಲ್ಲೇ ಸರ್ಕಾರುವಾರಿ ಪಾಠ ಹಾಗೂ ದಸರಾ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿತ್ತು. ಬಳಿಕ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್  ಗಳನ್ನು ಸಹ ಪಡೆದುಕೊಂಡರು. ಇದೀಗ ಆಕೆಯ ಡೇಟ್ಸ್ ಗಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ಕಾಯುತ್ತಿದ್ದಾರಂತೆ. ಇದರಿಂದಾಗಿ ಆಕೆ ತಮ್ಮ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಕೀರ್ತಿ ಸುರೇಶ್ ಸಿನೆಮಾ ಒಂದಕ್ಕೆ ಎರಡು ಕೋಟಿ ಪಡೆದುಕೊಳ್ಳುತ್ತಿದ್ದರಂತೆ. ಇದೀಗ ಆಕೆ ಬರೊಬ್ಬರಿ ತಮ್ಮ ಸಂಭಾವನೆಯನ್ನು ಮೂರು ಕೋಟಿಗೆ ಏರಿಸಿದ್ದಾರಂತೆ. ಮೇಕರ್ಸ್ ಹೊಸ ಸಿನೆಮಾಗಾಗಿ ಕೀರ್ತಿ ಸುರೇಶ್ ರವರನ್ನು ಸಂಪರ್ಕ ಮಾಡಿದಾಗ ಆಕೆ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ರಂತೆ. ಈ ಸುದ್ದಿ ಟಾಲಿವುಡ್ ಸಿನಿರಂಗದಲ್ಲಿ ಹರಿದಾಡುತ್ತಿದೆ. ಮೊದಲಿಗೆ ಹೋಲಿಸಿದರೇ ಆಕೆ ಬರೊಬ್ಬರಿ ಶೇ.50 ರಷ್ಟು ತನ್ನ ಸಂಭಾವನೆ ಏರಿಕೆ ಮಾಡಿಡದ್ದಾರೆ. ಮೊದಲಿನಲ್ಲಿ ಕೀರ್ತಿ ಸುರೇಶ್ ಕೊಂಚ ದಪ್ಪವಾಗಿದ್ದರು. ಇದೀಗ ಸ್ಲಿಮ್ ಆಗಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇಅಲ್ಲದೇ ಮೊದಲಿಗಿಂತಲೂ ಆಕೆ ಇತ್ತೀಚಿಗೆ ತುಂಬಾನೆ ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ.

ಇನ್ನೂ ಕೀರ್ತಿ ಸುರೇಶ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್‍ ಗಳ ಸಿನೆಮಾಗಳಲ್ಲಿ ಹಿರೋಯಿನ್ ಆಗಿ ನಟಿಸುವುದರ ಜೊತೆಗೆ ಸೀನಿಯರ್‍ ಸ್ಟಾರ್‍ ಗಳ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಸಹ ಪೋಷಣೆ ಮಾಡುತ್ತಿದ್ದಾರೆ.  ಈ ಹಿಂದೆ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪೆದ್ದನ್ನ ಸಿನೆಮಾದಲ್ಲಿ ರಜನಿಕಾಂತ್ ರವರ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾಶಂಕರ್‍ ಸಿನೆಮಾದಲ್ಲೂ ಚಿರು ಸಿಸ್ಟರ್‍ ಆಗಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ತಮಿಳು ಹಾಗೂ ತೆಲುಗು ಸಿನೆಮಾಗಳಲ್ಲಿ ಕೀರ್ತಿ ಸದ್ಯ ಬ್ಯುಸಿಯಾಗಿದ್ದಾರೆ.