ವಿಚ್ಚೇದನಕ್ಕೆ ಮುಂದಾಗಿದ್ದ ನಟಿ ಭೂಮಿಕಾ, ಆ ಸ್ಟಾರ್ ನಟನ ವಾರ್ನಿಂಗ್ ನಿಂದ ನಿರ್ಧಾರ ವಾಪಸ್?

Follow Us :

ಮಾಡೆಲಿಂಗ್ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಅತೀ ಕಡಿಮೆ ಸಮಯದಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಸುಮಂತ್ ಅಭಿನಯದ ಯುವಕುಡು ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿಕೊಟ್ಟರು. ಬಳಿಕ ನಟ ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ತೆಲುಗು ಸಿನಿರಂಗವನ್ನು ಸುಮಾರು ದಿನಗಳ ಕಾಲ ಆಳಿದಂತಹ ಈಕೆ ಸೆಕೆಂಡ್ ಇನ್ನಿಂಗ್ಸ್ ಸಹ ಶುರುಮಾಡಿದ್ದು ಕ್ಯಾರೆಕ್ಟರ್‍ ರೋಲ್ಸ್ ನಲ್ಲಿ ಕಾಣಿಸಿಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಭೂಮಿಕಾ ತನ್ನ ಪತಿಯೊಂದಿಗೆ ವಿಚ್ಚೇದನಕ್ಕೆ ಮುಂದಾಗಿದ್ದು, ಅದನ್ನು ಸ್ಟಾರ್‍ ನಟನೋರ್ವ ತಡೆದಿದ್ದಾರಂತೆ. ಅಷ್ಟಕ್ಕೂ ಆಗಿದ್ದೇನು, ಆ ಸ್ಟಾರ್‍ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಸೌತ್ ಸಿನಿರಂಗದ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದಂತಹ ಭೂಮಿಕ ಯೋಗಾ ಶಿಕ್ಷಕ ಭರತ್ ಠಾಕೂರ್‍ ಎಂಬಾತನನ್ನು ಮದುವೆಯಾಗದರು. ಮದುವೆ ಬಳಿಕ ಅನೇಕ ವರ್ಷಗಳ ಕಾಲ ಸಿನೆಮಾಗಳಿಂದಲೂ ದೂರವೇ ಉಳಿದರು. ಇದೀಗ ಆಕೆ ಸಿನೆಮಾಗಳಲ್ಲಿ ಕಂ ಬ್ಯಾಕ್ ಮಾಡಿದ್ದು, ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಲೀಡ್ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭೂಮಿಕಾ ಹಾಗೂ ಭರತ್ ಠಾಕೂರ್‍ ನಡುವೆ ವಿಬೇದಗಳು ಹುಟ್ಟಿಕೊಂಡಿದ್ದು, ಅವರು ಬೇರೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಈ ಹಿಂದೆ ಭೂಮಿಕಾ ತನ್ನ ಪತಿಯೊಂದಿಗೆ ಬೇರೆಯಾಗಲು ನಿರ್ಧಾರ ಮಾಡಿದ್ದರಂತೆ. ಆದರೆ ಓರ್ವ ಸ್ಟಾರ್‍ ಹಿರೋ ಕಾರಣದಿಂದ ಆಕೆ ವಿಚ್ಚೇದನದ ನಿರ್ಧಾರದಿಂದ ಹಿಂದೆ ಸರೆದಿದ್ದು, ಇದೀಗ ಪತಿಯೊಂದಿಗೆ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

ಇನ್ನೂ ಭೂಮಿಕಾ ಮದುವೆಯಾದ ಬಳಿಕ ತನ್ನ ಪತಿಯನ್ನು ಬಲವಂತವಾಗಿ ಹೈದರಾಬಾದ್ ಗೆ ಕರೆದುಕೊಂಡು ಬಂದರಂತೆ. ನಿರ್ಮಾಪಕಿಯಾಗುವ ನಿಟ್ಟಿನಲ್ಲಿ ಆಕೆ ತನ್ನ ಪತಿಗೆ ಹೇಳಿದ್ದರಂತೆ. ಅಷ್ಟೊಂದು ಹಣವಿಲ್ಲ ಎಂದು ಪತಿ ಹೇಳಿದರೂ ಭೂಮಿಕಾ ಕೇಳದೆ ಸಿನೆಮಾ ಒಂದನ್ನು ನಿರ್ಮಾಣ ಮಾಡಿದ್ದು, ಆ ಸಿನೆಮಾ ಡಿಜಾಸ್ಟರ್‍ ಆಗಿತ್ತಂತೆ. ಇದರಿಂದ ಇಬ್ಬರ ಮಧ್ಯೆ ಗಲಾಟೆ ನಡೆದು, ಭೂಮಿಕಾ ಪತಿ ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಸಹ ಇಟ್ಟುಕೊಂಡಿದ್ದ ಎಂಬ ಆರೋಪಗಳೂ ಸಹ ಬಂದ ಕಾರಣದಿಂದ ಭೂಮಿಕಾ ವಿಚ್ಚೇದನಕ್ಕೆ ಮುಂದಾದರಂತೆ. ಆದರೆ ಈ ವಿಚಾರ ತಿಳಿದ ತೆಲುಗು ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ ಮಧ್ಯೆ ಪ್ರವೇಶಿಸಿ ಭೂಮಿಕಾ ನಿರ್ಧಾರವನ್ನು ವಾಪಸ್ಸು ಪಡೆದುಕೊಳ್ಳುವಂತೆ ಹೇಳಿದ್ದರಂತೆ. ಸದ್ಯ ಅವರಿಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.

ಇನ್ನೂ ಭೂಮಿಕಾ ಚಾವ್ಲಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟು 23 ವರ್ಷಗಳು ಪೂರ್ಣಗೊಂಡಿದೆ. ಯುವಕಡು ಎಂಬ ತೆಲುಗು ಸಿನೆಮಾದ ಮೂಲಕ ಎಂಟ್ರಿ ಕೊಟ್ಟ ಭೂಮಿಕಾ ಕಡಿಮೆ ಸಮಯದಲ್ಲೇ ಭಾರಿ ಅವಕಾಶಗಳನ್ನು ಪಡೆದುಕೊಂಡರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಸೀತಾರಾಮಂ, ಬಟ್ಟರ್‍ ಫ್ಲೈ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳಿನ ಸಿನೆಮಾದಲ್ಲಿ ಭೂಮಿಕ ನಟಿಸುತ್ತಿದ್ದಾರೆ.