Film News

ವಿಚ್ಚೇನಕ್ಕೆ ಮುಂದಾದರೇ ಸೌತ್ ನಟಿ ಆಶಿನ್, ಪತಿಯಿಂದ ದೂರವಿರುವ ಆಶಿನ್, ವೈರಲ್ ಆದ ಸುದ್ದಿ…..!

ಸಿನಿರಂಗದಲ್ಲಿ ಇತ್ತೀಚಿಗೆ ಪ್ರೀತಿ, ಮದುವೆ, ವಿಚ್ಚೇದನಗಳು ಸಾಮಾನ್ಯ ಎಂದೇ ಹೇಳಬಹುದಾಗಿದೆ. ಅದರಲ್ಲೂ ಹೆಚ್ಚಾಗಿ ವಿಚ್ಚೇದನಗಳನ್ನು ಕಾಣುತ್ತಿದ್ದೇವೆ. ಎಷ್ಟು ಮದುವೆಗಳು ನಡೆಯುತ್ತವೆಯೋ ಅದೇ ರೀತಿ ವಿಚ್ಚೇದನಗಳು ಸಹ ನಡೆಯುತ್ತಿರುತ್ತವೆ. ಇದೀಗ ಸೌತ್ ಸಿನಿರಂಗದ ಸ್ಟಾರ್‍ ನಟಿ ಆಶಿನ್ ಸಹ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಪತಿಯಿಂದ ದೂರವಿರುವ ಈಕೆ ಶೀಘ್ರದಲ್ಲೇ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.

ಸೌತ್ ಸಿನಿರಂಗದಲ್ಲಿ ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ಪಡೆದುಕೊಂಡ ನಟಿಯರಲ್ಲಿ ಆಶಿನ್ ಸಹ ಒಬ್ಬರಾಗಿದ್ದಾರೆ. ಮಾಸ್ ಮಹಾರಾಜ ರವಿತೇಜ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಕಂಡ ಅಮ್ಮಾ ನಾನ್ನ ಓ ತಮಿಳ ಅಮ್ಮಾಯಿ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಆಶಿನ್ ಎಂಟ್ರಿ ಕೊಟ್ಟರು. ಈ ಸಿನೆಮಾ ಸೂಪರ್‍ ಹಿಟ್ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆಗೆ ಸಾಲು ಸಾಲು ಅವಕಾಶಗಳು ಹರಿದುಬಂದವು. ಬಳಿಕ ಆಕೆ ನಾಗಾರ್ಜುನ್ ಜೊತೆಗೆ ಶಿವಮಣಿ, ವೆಂಕಟೇಶ್ ಜೊತೆಗೆ ಘರ್ಷಣ, ಬಾಲಕೃಷ್ಣ ಜೊತೆಗೆ ಲಕ್ಷ್ಮೀನರಸಿಂಹ ಮೊದಲಾದ ಸಿನೆಮಾಗಳ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಬಳಿಕ ಆಕೆ ನಟಿಸಿದ ಅನ್ನವರಂ ಹಾಗೂ ಚಕ್ರಂ ಸಿನೆಮಾಗಳು ಆಕೆಗೆ ನಿರಾಸೆಯನ್ನು ತಂದುಕೊಟ್ಟಿತ್ತು. ಬಳಿಕ ಆಕೆ ಕಾಲಿವುಡ್, ಬಾಲಿವುಡ್ ನಲ್ಲೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಕೆರಿಯರ್‍ ಸಾಗಿಸಿದ್ದರು.

ನಟಿ ಆಶಿನ್ ಕೆರಿಯ್ ಸಕ್ಸಸ್ ಪುಲ್ ಆಗಿ ಸಾಗುತ್ತಿರುವಾಗಲೇ ಆಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2016ರಲ್ಲಿ ರಾಹುಲ್ ಶರ್ಮಾ ಎಂಬ ಉದ್ಯಮಿಯನ್ನು ಮದುವೆಯಾದರು. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿದರು. ಆಶಿನ್ ಪತಿ ರಾಹುಲ್ ಶರ್ಮಾ ಮೈಕ್ರೋ ಮ್ಯಾಕ್ಸ್ ಕಂಪನಿಯ ಸಿ.ಇ.ಒ ಆಗಿ ಸಹ ಕೆಲಸ ಮಾಡಿದ್ದರು. ಇನ್ನೂ ಈ ಜೋಡಿಯ ಮದುವೆ ನಡೆಯಲು ಬಾಲಿವುಡ್ ಸ್ಟಾರ್‍ ನಟ ಅಕ್ಷಯ್ ಕುಮಾರ್‍ ಕಾರಣ ಎಂದೇ ಹೇಳಲಾಗುತ್ತಿದೆ. ಸುಮಾರು ವರ್ಷಗಳಿಂದ ಸಂತೋಷವಾಗಿ ಜೀವನ ಸಾಗಿಸಿದ ಈ ಜೋಡಿ ಇದೀಗ ವಿಚ್ಚೇದನಕ್ಕೆ ಮುಂದಾಗಿದ್ದಾರಂತೆ. ಕೆಲವು ದಿನಗಳಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿ ಇಬ್ಬರೂ ಬೇರೆಯಾಗಲು ನಿರ್ಧಾರ ತೆಗೆದುಕೋಂಡಿದ್ದಾರಂತೆ. ಸದ್ಯ ಈ ರೂಮರ್‍ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅಷ್ಟೇಅಲ್ಲದೇ ರಾಹುಲ್ ಶರ್ಮಾ ಸುಮಾರು ವರ್ಷಗಲಿಂದ ಬೇರೆ ಯುವತಿಯೊಂದಿಗೆ ಅಫೈರ್‍ ಇಟ್ಟುಕೊಂಡಿದ್ದಾರಂತೆ. ಇನ್ನೂ ಈ ಸುದ್ದಿ ತಿಳಿದ ಆಶಿನ್ ಆತನಿಗೆ ಕೆಲವು ಬಾರಿ ಎಚ್ಚರಿಕೆ ಸಹ ನೀಡಿದ್ದರಂತೆ. ಆದರೂ ಸಹ ಆತ ಕೇಳದೇ ತನ್ನಿಷ್ಟದಂತೆ ಮಾಡುತ್ತಿರುವ ಕಾರಣದಿಂದ ಆತನಿಂದ ದೂರ ಇದ್ದಾರಂತೆ. ಇನ್ನೂ ಈ ವಿಚಾರ ಎಷ್ಟರ ಮಟ್ಟಿಗೆ ನಿಜ ಸುಳ್ಳೊ ತಿಳಿಯದು ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಈ ಬಗ್ಗೆ ಆಶಿನ್ ಯಾವ ರೀತಿ ರಿಯಾಕ್ಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top