Film News

ಸಂಚಲನಾತ್ಮಕ ಹೇಳಿಕೆ ಕೊಟ್ಟ ಕಾಜೋಲ್, ನನ್ನ ದೃಷ್ಟಿಯಲ್ಲಿ ಲಸ್ಟ್ ಅಂದ್ರೇ ಅದೇ ಎಂದ ಸೀನಿಯರ್ ನಟಿ…..!

ಬಾಲಿವುಡ್ ಸ್ಟಾರ್‍ ನಟಿ ಕಾಜೋಲ್ ದೇವಗನ್ ಲಸ್ಟ್ ಸ್ಟೋರಿಸ್-2 ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಲಸ್ಟ್ ಸ್ಟೋರಿಸ್-2 ಸಿರೀಸ್ ಟ್ರೈಲರ್‍ ಸಹ ಬಿಡುಗಡೆಯಾಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಸಿರೀಸ್ ನಲ್ಲಿ ತುಂಬಾ ಬೋಲ್ಡ್ ದೃಶ್ಯಗಳು, ಇಂಟಿಮೇಟ್ ಸೀನ್ ಗಳು ಇವೆ ಎಂಬುದು ಟ್ರೈಲರ್‍ ಮೂಲಕ ತಿಳಿಯಬಹುದಾಗಿದೆ. ಇನ್ನೂ ಈ ಸಿರೀಸ್ ನಲ್ಲಿ ಸೀನಯರ್‍ ನಟಿ ಕಾಜೋಲ್ ಸಹ ಅಭಿನಯಿಸಿದ್ದು, ಪ್ರಮೋಷನ್ ನಲ್ಲಿ ಸಹ ಭಾಗಿಯಾಗುತ್ತಿದ್ದಾರೆ. ಈ ಹಾದಿಯಲ್ಲೆ ಕಾಜೋಲ್ ಸಂದರ್ಶನವೊಂದರಲ್ಲಿ ಲಸ್ಟ್ ಎಂಬ ಪದಕ್ಕೆ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

ಅನೇಕ ತಾರಾಬಳಗ ಹೊಂದಿರುವ ಲಸ್ಟ್ ಸ್ಟೋರಿಸ್-2 ಸಿರೀಸ್ ಇದೇ ತಿಂಗಳ 29 ರಂದು ಬಿಡುಗಡೆಯಾಗಲಿದೆ. ಇನ್ನೂ ಚಿತ್ರತಂಡ ಸಿರೀಸ್ ಪ್ರಮೋಷನ್ ಸಹ ಜೋರಾಗಿಯೇ ನೆರವೇರಿಸುತ್ತಿದ್ದಾರೆ. ಇದೀಗ ಪ್ರಮೋಷನ್ ಭಾಗವಾಗಿ ಕಾಜೋಲ್ ಸಹ ಭಾಗಿಯಾಗಿದ್ದು, ಸಂದರ್ಶನವೊಂದರಲ್ಲಿ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಕೆಲವೊಂದು ವಿಚಾರಗಳನ್ನು ಸೆಲೆಬ್ರೆಟಿಗಳ ಮಾತನಾಡಲು ಹಿಂದೆ ಸರಿಯುತ್ತಾರೆ. ಕೆಲವೊಂದು ಪ್ರಶ್ನೆಗಳು ಎದುರಾದಾಗ ಅದನ್ನು ಸ್ಕಿಪ್ ಮಾಡುತ್ತಿರುತ್ತಾರೆ. ಆದರೆ ಕಾಜೋಲ್ ಮಾತ್ರ ಲಸ್ಟ್ ಸ್ಟೋರಿಸ್-2 ಸಿರೀಸ್ ಪ್ರಮೋಷನ್ ನಿಮಿತ್ತ ನಡೆದ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಮಾತ್ರ ತನ್ನದೇ ಆದ ಶೈಲಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಸಂದರ್ಶನದಲ್ಲಿ ಲಸ್ಟ್ ಎಂಬ ಪದಕ್ಕೆ ಅರ್ಥ ಕೇಳಿದಾಗ ಆಕೆ ನೀಡಿದ ಹೇಳಿಕೆಗಳು ಇದೀಗ ವೈರಲ್ ಆಗಿದೆ.

ಇನ್ನೂ ಸಂದರ್ಶನದಲ್ಲಿ ಲಸ್ಟ್ ಎಂದರೇ ನಿಮ್ಮ ದೃಷ್ಟಿಯಲ್ಲಿ ಏನರ್ಥ ಎಂಬ ಪ್ರಶ್ನೆ ಕಾಜೋಲ್ ಗೆ ಎದುರಾಗಿದೆ. ಅದಕ್ಕೆ ಉತ್ತರಿಸಿದ ಕಾಜೋಲ್ ಲಸ್ಟ್ ಎಂದರೇ ವಿಪರೀತವಾದ ಬಯಕ. ಅದಿ ನಮಗಿರುವ ಶಾರೀರಿಕ ಬೇಡಿಕೆ ಮಾತ್ರವಲ್ಲದೇ ಯಾವುದೇ ವಿಚಾರವಾದರೂ ಸರಿ ಎಂದಿದ್ದಾರೆ. ನನ್ನ ಅಭಿಪ್ರಾಯದಂತೆ ಹೇಳುವುದಾದರೇ ನನ್ನ ಲೈಫ್ ನನಗೆ ಒಂದು ಲಸ್ಟ್ ಇದ್ದಂಗೆ, ನನಗೆ ಇಷ್ಟ ಬಂದ ಆಹಾರ ತಿನ್ನುವುದು, ಡ್ಯಾನ್ಸ್ ಮಾಡುವುದು, ಮ್ಯೂಜಿಕ್ ಕೇಳುವುದು ಸಹ ನನ್ನ ದೃಷ್ಟಿಯಲ್ಲಿ ಲಸ್ಟ್ ಎಂದಿದ್ದಾರೆ. ಜೊತೆಗೆ ಮಕ್ಕಳೊಂದಿಗೆ ಕಳೆದ ಪ್ರತಿಯೊಂದು ಕ್ಷಣ ಸಹ ನನ್ನ ದೃಷ್ಟಿಯಲ್ಲಿ ಲಸ್ಟ್ ಎಂದೇ ಹೇಳುತ್ತೇನೆ ಎಂದು ಆಕೆ ಹೇಳಿದ್ದಾರೆ. ಇನ್ನೂ ಕಾಜೋಲ್ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಲಸ್ಟ್ ಸ್ಟೋರಿಸ್-2 ಸಿರೀಸ್ ನಲ್ಲಿ ಖ್ಯಾತ ನಟ-ನಟಿಯರು ಬಣ್ಣ ಹಚ್ಚಿದ್ದಾರೆ. ಈ ಸಿರೀಸ್ ನಲ್ಲಿ ತುಂಬಾ ಬೋಲ್ಡ್ ದೃಶ್ಯಗಳು ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿರೀಸ್ ಶೂಟಿಂಗ್ ವೇಳೆಯಲ್ಲೇ ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ವಿಜಯ್ ವರ್ಮಾ ಪ್ರೀತಿಗೆ ಬಿದ್ದರು ಎಂದು ಹೇಳಲಾಗುತ್ತಿದೆ. ನೆಟ್ ಫ್ಲಿಕ್ಸ್ ನಲ್ಲಿ ಈ ಸಿರೀಸ್ ಜೂ.29 ರಿಂದ ಸ್ಟ್ರೀಮಿಂಗ್ ಆಗಲಿದೆ.

Most Popular

To Top