News

ವಿದ್ಯಾರ್ಥಿನಿಲಯದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ, ಕೊಳೆತ ಶವವಾಗಿ ಪತ್ತೆ…..!

ಕರ್ನಾಟಕದ ಬಾಗಲಕೋಟ ಶಿಗಿಕೇರಿ ಕ್ರಾಸ್ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಹಾಸ್ಟೆಲ್ ನಿಂದ ನಾಪತ್ತೆಯಾದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿಯನ್ನು ಇಳಕಲ್ ಮೂಲದ ಮನೋಹರ್‍ ಪತ್ತಾರ್‍ (22) ಎಂದು ಗುರ್ತಿಸಲಾಗಿದೆ. ಮೃತ ವಿದ್ಯಾರ್ಥಿನಿ ಬಾಗಲಕೋಟೆಯ ಕುಮಾರೇಶ್ವರ್‍ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಫಿಜಿಯೋಥೆರಪಿಸ್ಟ್ ಕೋರ್ಸ್ ಮಾಡುತ್ತಿದ್ದಳು ಎನ್ನಲಾಗಿದೆ.

ಮೃತ ಮನೋಹರ್‍ ಪತ್ತಾರ್‍ ಕಳೆದೆರಡು ದಿನಗಳ ಹಿಂದೆ ಹಾಸ್ಟಲ್ ನಿಂದ ಕಾಣೆಯಾಗಿದ್ದಳು. ಈ ಬಗ್ಗೆ ತಮ್ಮ ಮಗಳು ಕಾಣೆಯಾಗಿದ್ದಾರೆ ಎಂದು ಮೃತಳ ಪೋಷಕರು ದೂರು ಸಹ ದಾಖಲಿಸಿದ್ದರು. ಬಾಗಲಕೋಟೆಯ ಶಿಗಿಕೇರಿ ಕ್ರಾಸ್ ನ ರೈಲ್ವೇ ಬ್ರಿಡ್ಜ್ ಬಳಿ ಆಕೆಯ ಶವ ಪತ್ತೆಯಾಗಿದೆ. ಇನ್ನೂ ಮಾಹಿತಿ ಸಿಕ್ಕಿದ ಕೂಡಲೇ ಬಾಗಲಕೋಟೆ ರೈಲ್ವೆ ಹಾಗೂ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇನ್ನೂ ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇನ್ನೂ ಈ ಬಗ್ಗೆ ಬಾಗಲಕೋಟ ಎಸ್.ಪಿ ಅಮರನಾಥರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸೆ.14 ರಂದು ಸಂಜೆ ಮಹಿಳಾ ಪೊಲೀಸ್ ಠಾಣೆಗೆ ದೂರು ಬಂದಿತ್ತು. ದೂರಿನಲ್ಲಿ ತಿಳಿಸಿದಂತೆ ಸೆ.13ರ ಬೆಳಿಗ್ಗೆ ಹಾಸ್ಟಲ್ ವಾರ್ಡನ್ ಬಳಿ ತೆರಳಿದ ಮೃತ ವಿದ್ಯಾರ್ಥಿನಿ ನನಗೆ ಪಾರ್ಸಲ್ ಒಂದು ಬಂದಿದೆ. ಎಪಿಎಂಸಿ ಕ್ರಾಸ್ ಬಳಿ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದರಂತೆ. ಆದರೆ ವಿದ್ಯಾರ್ಥಿನಿ ವಾಪಸ್ಸು ಬಂದಿರುವುದಿಲ್ಲ. ಬಳಿಕ ಪೋಷಕರು ಈ ಬಗ್ಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿಯ ಮೃತ ದೇಹ ರೈಲ್ವೆ ಹಳಿ ಪಕ್ಕ ಪತ್ತೆಯಾಗಿದೆ. ಈ ಬಗ್ಗೆ ಪೋಷಕರು ನೀಡುವಂತಹ ದೂರು ಹಾಗೂ ಮರಣೋತ್ತರ ಪರೀಕ್ಷಾ ವರದಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top