Film News

ಜನಸೇನಾ ಪಕ್ಷದಿಂದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸ್ಪರ್ಧೆ, ವೈರಲ್ ಆದ ರೂಮರ್…!

ಆಂಧ್ರಪ್ರದೇಶದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭೆ ಹಾಗೂ ಲೊಕಸಭಾ ಚುನಾವಣೆ ನಡೆಯಲಿದೆ. ರಾಜ್ಯದ ರಾಜಕಾರಣ ದಿನೇ ದಿನೇ ರಂಗೇರುತ್ತಿದೆ. ಈ ಬಾರಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿದೆ. ಈ ಬಾರಿ ಏನಾದರೂ ಮಾಡಿ ಅಧಿಕಾರ ಗದ್ದುಗೆ ಏರಬೇಕೆಂದು ಭಾರಿ ಕಸರತ್ತುಗಳನ್ನು ಮಾಡಲಾಗುತ್ತಿದೆ. ಇದೀಗ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಂತೆ. ಜನಸೇನಾ ಪಕ್ಷದಿಂದ ಅನುಷ್ಕಾಶೆಟ್ಟಿ ಎಂ.ಎಲ್.ಎ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಆಂಧ್ರಪ್ರದೇಶದ ವಿಧಾನ ಸಭಾ ಚುನಾವಣೆಯ ನಿಮಿತ್ತ ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಗೆಲ್ಲಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. YSRP ಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಬರಲು ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈಗಾಗಲೇ ಅಭ್ಯರ್ಥಿಗಳನ್ನು ಸಹ ಘೋಷಣೆ ಮಾಡಲಾಗಿದೆ. ಈ ಬಾರಿ ಜನಸೇನಾ ಪಕ್ಷದಿಂದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಜೋರಾಗಿ ಕೇಳಿಬರುತ್ತಿದೆ. ಕರ್ನಾಟಕ ಮೂಲದ ನಟಿ ಅನುಷ್ಕಾ ಸೌತ್ ಸಿನಿರಂಗದಲ್ಲಿ ದೊಡ್ಡ ಮಟ್ಟದ ಹೆಸರನ್ನು ಗಳಿಸಿದ್ದಾರೆ. ಅನೇಕ ಮಹಿಳಾ ಪ್ರಧಾನ ಸಿನೆಮಾಗಳಲ್ಲೂ ಸಹ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇದೀಗ ಜನಸೇನಾ ಪಕ್ಷದಿಂದ ಅನುಷ್ಕಾ ಶೆಟ್ಟಿ ಎಂ.ಎಲ್.ಎ ಆಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಜನಸೇನಾ ಪಕ್ಷದ ನಾಯಕರು ಅನುಷ್ಕಾ ಶೆಟ್ಟಿಯವರ ಸಂಪರ್ಕದಲ್ಲಿದ್ದಾರಂತೆ. ಎಲ್ಲಾ ಮಾತುಕತೆಗಳು ನಡೆದಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಕೃತ ಮಾಹಿತಿ ಸಹ ಹೊರಬೀಳಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಅನುಷ್ಕಾ ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ನಟಿ ರೋಜಾ ಕಳೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಹಾಲಿ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ರೋಜಾ ವಿರುದ್ದ ನಟಿ ಅನುಷ್ಕಾ ಶೆಟ್ಟಿ ಇದೀಗ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾಡುಗಳು ಜೋರಾಗಿ ಕೇಳಿಬರುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ.

Most Popular

To Top