Film News

ಸೈಲೆಂಟ್ ಆಗಿ ಮದುವೆಯಾದ ಸಿದ್ದಾರ್ಥ್-ಅದಿತಿರಾವ್, ಸರಳವಾಗಿ ದೇವಾಲಯದಲ್ಲಿ ಮದುವೆಯಾದ ಜೋಡಿ….!

ಸುಮಾರು ದಿನಗಳಿಂದ ಸೌತ್ ಸಿನಿರಂಗದ ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲೂ ಸಹ ಈ ಜೋಡಿ ಭಾಗಿಯಾಗಿದ್ದರು. ಆದರೆ ಅವರ ನಡುವೆ ಏನು ಇಲ್ಲ ಎಂದು ಹೇಳುತ್ತಿದ್ದರು. ಇದೀಗ ಸೈಲೆಂಟ್ ಆಗಿ ಸರಳವಾಗಿ ದೇವಾಲಯವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌತ್ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಸಿನಿವಲಯ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇದೆ. ಆದರೆ ಅವರಿಬ್ಬರೂ ಅದೆಲ್ಲಾ ಏನು ಇಲ್ಲ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಿದ್ದರು. ಆದರೆ ಜೊತೆಯಲ್ಲೇ ಪಾರ್ಟಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಪ್ರೇಮ ಪಕ್ಷಿಗಳಂತೆ ವಿಹರಿಸುತ್ತಿದ್ದರು. ಅವರ ಅಭಿಮಾನಿಗಳು ಸಹ ಅನೇಕರ ಬಾರಿ ತಾವು ಒಳ್ಳೆಯ ಜೋಡಿ, ಶೀಘ್ರವಾಗಿ ಮದುವೆಯಾಗಿ ಎಂದು ಹೇಳುತ್ತಿದ್ದರು. ಆದರೆ ಎಂದೂ ಸಹ ಅವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಸ್ಪಂಧಿಸಿಲ್ಲ. ಇದೀಗ ಈ ಜೋಡಿ ಸೈಲೆಂಟ್ ಆಗಿ ಮದುವೆಯಾಗಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ಸುಮಾರು ವರ್ಷಗಳಿಂದ ಸಿದ್ದಾಥ್ ಹಾಗೂ ಅದಿತಿ ಪ್ರೇಮ ಪಕ್ಷಿಗಳಂತೆ ಓಡಾಡುತ್ತಿದ್ದರು. ಇದೀಗ ಅವರು ಸರಳವಾಗಿ ಯಾರಿಗೂ ತಿಳಿಯದಂತೆ ದೇವಾಲಯ ವೊಂದರಲ್ಲಿ ಮದುವೆಯಾಗಿದ್ದಾರೆ. ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರಿರಂಗಾಪುರಂನಲ್ಲಿರುವ ರಂಗನಾಥ ಸ್ವಾಮಿ ದೇವಾಲಯದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ತುಂಬಾ ಹತ್ತಿರದ ಸಂಬಂಧಿಕರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಜೋಡಿ ತಮ್ಮ ಮದುವೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು ಹಂಚಿಕೊಂಡಿಲ್ಲ. ತುಂಬಾ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಸಿದ್ದಾರ್ಥ್‌ಗೆ ಈ ಮದುವೆ ಮೂರನೆಯ ಮದುವೆಯಾಗಿದೆ. ಅದಿತಿಗೂ ಸಹ ಇದು ಎರಡನೇ ಮದುವೆಯಾಗಿದೆ. ಸಿದ್ದಾರ್ಥ್ ಈ ಹಿಂದೆ ಅನೇಕ ನಟಿಯರೊಂದಿಗೆ ಅಫೈರ್‍ ನಡೆಸಿದ್ದ ಎಂಬ ಮಾತುಗಳೂ ಸಹ ಕೇಳಿಬಂದಿದೆ. ಮಹಾಸಮುದ್ರಂ ಎಂಬ ಸಿನೆಮಾದ ಬಳಿಕ ಸಿದ್ದಾರ್ಥ್ ಹಾಗೂ ಅದಿತಿ ನಡುವೆ ಲವ್ ಟ್ರಾಕ್ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

Most Popular

To Top