ಆ ವ್ಯಾಧಿಯಿಂದ ಅನುಷ್ಕಾ ದಪ್ಪ ಆದರಾ, ಅನುಷ್ಕಾ, ಅನುಷ್ಕಾ ಆರೋಗ್ಯದ ಬಗ್ಗೆ ಜೋರಾದ ಚರ್ಚೆ…!

ಸೌತ್ ಸಿನಿರಂಗದ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಿನೆಮಾಗಳಿಂದ ದೂರ ಉಳಿದು ವರ್ಷಗಳೇ ಕಳೆದಿದೆ. ಸುಮಾರು ವರ್ಷಗಳ ಬಳಿಕ ಆಕೆ ಮಿಸ್ ಶೆಟ್ಟಿ ಮಿಸೆಸ್ ಪೊಲಿಶೆಟ್ಟಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇನ್ನೂ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ. ಸೋಷಿಯಲ್ ಮಿಡಿಯಾದಿಂದ ದೂರವೇ ಉಳಿಯುವ ಅನುಷ್ಕಾ ಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಆಕೆ ತುಂಬಾ ದಪ್ಪ ಆಗಿದ್ದಾರೆ. ಇದೀಗ ಆಕೆ ದಪ್ಪ ಆಗಲು ಕಾರಣ ಏನು, ಆ ಆರೋಗ್ಯ ಸಮಸ್ಯೆಯ ಕಾರಣದಿಂದ ಆಕೆ ದಪ್ಪ ಆದರೇ ಎಂಬ ಚರ್ಚೆಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ.

ಕಳೆದ ಶಿವರಾತ್ರಿ ಹಬ್ಬದ ಆಚರಣೆಯ ಸಮಯದಲ್ಲಿ ಅನುಷ್ಕಾಗೆ ಸಂಬಂಧಿಸಿದ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು ಈ ಪೊಟೋಗಳಲ್ಲಿ ಆಕೆ ತುಂಬಾ ದಪ್ಪವಾಗಿ ಕಾಣಿಸಿಕೊಂಡಿದ್ದರು. ಆಕೆಯನ್ನು ನೋಡಿದ ಅಭಿಮಾನಿಗಳೂ ಸೇರಿದಂತೆ ಅನೇಕರು ಶಾಕ್ ಆಗಿದ್ದರು. ಅನುಷ್ಕಾ ಏಕೆ ಅಷ್ಟೊಂದು ದಪ್ಪ ಆಗಿದ್ದಾರೆ ಎಂಬ ಅನುಮಾನಗಳನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ತನ್ನ ಮುಂದಿನ ಸಿನೆಮಾಗಾಗಿಯೇ ಆಕೆ ದಪ್ಪ ಆದರು ಎಂಬ ಸುದ್ದಿ ಸಹ ಹರಿದಾಡಿತ್ತು. ಇದೀಗ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಆದರೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅನುಷ್ಕಾ ಶೆಟ್ಟಿ ಆ ವ್ಯಾಧಿಯಿಂದ ದಪ್ಪ ಆಗಿದ್ದಾರೆ ಎಂಬ ಚರ್ಚೆಯೊಂದು ಶುರುವಾಗಿದೆ.

ಇನ್ನೂ ಅನುಷ್ಕಾ ಶೆಟ್ಟಿ ದಪ್ಪಾ ಆಗಲು ಆಕೆಗೆ ಥೈರಾಯಿಡ್ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ.  ಆಕೆ ತೂಕ ಇಳಿಸಿಕೊಳ್ಳಲು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಸಹ ಥೈರಾಯಿಡ್ ಕಾರಣದಿಂದ ಆದು ಆಗುತ್ತಿಲ್ಲವಂತೆ. ಸದ್ಯ ಆಕೆ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿದ್ದಾಳೆ ಎಂಬ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಪ್ರಚಾರ ಜೋರಾಗಿಯೆ ನಡೆಯುತ್ತಿದೆ. ಸದ್ಯ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲವಾದರೂ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಅನುಷ್ಕಾ ಸಣ್ಣ ಆದರೇ ಆಕೆಗೆ ಪಕ್ಕಾ ಆಫರ್‍ ಗಳು ಬರಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

ಇನ್ನೂ ಅನುಷ್ಕಾ ಶೆಟ್ಟಿ ಅಭಿಮಾನಿಗಳು ಮಾತ್ರ ಆಕೆ ಹೇಗೆ ಇದ್ದರೂ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಆಶಯ ಹೊಂದಿದ್ದಾರೆ. ಅನುಷ್ಕ ಹಿಂದೆಯಂತೆ ಮತ್ತೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳಬೇಕು. ಸಕ್ಸಸ್ ಪುಲ್ ಆಗಿ ಸಿನೆಮಾಗಳಲ್ಲಿ ನಟಿಸಬೇಕು ಎಂದು ಅನೇಕರು ಕೋರುತ್ತಿದ್ದಾರೆ. ಅದರ ಜೊತೆಗೆ ಈ ವರ್ಷ ಅನುಷ್ಕಾ ಮದುವೆ ನಡೆಯಲಿದೆ ಎಂಬ ಸುದ್ದಿಗಳೂ ಸಹ ಕೇಳಿಬರುತ್ತಿದ್ದು, ಅನುಷ್ಕಾ ಅಭಿಮಾನಿಗಳು ಗುಡ್ ನ್ಯೂಸ್ ಕೊಡುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.