ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ಚಂದಮಾಮ ಕಾಜಲ್ ಅಗರ್ವಾಲ್, ಊಟ ಮಾಡೊದು ಬಿಟ್ರಾ ಎಂದು ಶಾಕಿಂಗ್ ಕಾಮೆಂಟ್ಸ್…!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್, ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದಿದ್ದರು. ಇದೀಗ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಭಾರಿ ಪ್ರಾಜೆಕ್ಟ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಘೋಸ್ಟಿ ಎಂಬ ಹಾರರ್‍ ಕಾಮಿಡಿ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ಮದುವೆಯಾದ ಬಳಿಕ ಕಾಜಲ್ ದಪ್ಪವಾಗಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಆಕೆ ಕಾಣಿಸಿಕೊಂಡ ಲೇಟೆಸ್ಟ್ ಪೊಟೋಗಳಲ್ಲಿ ತುಂಬಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು. ಅಭಿಮಾನಿಗಳು ಶಾಕ್ ಆಗಿದ್ದಾರೆ.

ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರ ಹುಟ್ಟುಹಬ್ಬವನ್ನು ಮಾ.27 ರಂದು ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಪಾರ್ಟಿಗೆ ಅನೇಕ ಸ್ಟಾರ್‍ ಹಿರೋಗಳು, ಡೈರೆಕ್ಟರ್‍ ಗಳೂ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಕಾಜಲ್ ಅಗರ್ವಾಲ್ ರವರಿಗೆ ರಾಮ್ ಚರಣ್ ವಿಶೇಷವಾಗಿ ಆಹ್ವಾನಿಸಿದ್ದರು. ಕಾಜಲ್ ಹಾಗೂ ಆಕೆಯ ಪತಿ ಗೌತಮ್ ಕಿಚ್ಲು ಈ ಪಾರ್ಟಿಗೆ ಹಾಜರಾಗಿದ್ದರು. ಈ ವೇಳೆ ಆಕೆ ಪಿಂಕ್ ಕಲರ್‍ ಗೌನ್ ಧರಿಸಿ ಬಂದಿದ್ದು, ಆಕೆ ತುಂಬಾ ಸಣ್ಣ ಆಗಿ ಕಾಣಿಸಿದ್ದಾರೆ. ಇನ್ನೂ ಆಕೆಯನ್ನು ನೋಡಿದ ಅನೇಕರು ಶಾಕ್ ಆಗಿದ್ದಾರೆ. ಕಾಜಲ್ ಮದುವೆಗೂ ಮುಂಚೆ ಇದ್ದಂತಹ ಸೈಜ್ ಗಿಂತ ಮತಷ್ಟು ಸಣ್ಣ ಆಗಿದ್ದಾರೆ. ಆಕೆ ತುಂಬಾ ಸಣ್ಣ ಆದ ಹಿನ್ನೆಲೆಯಲ್ಲಿ ಆಕೆಯ ಗ್ಲಾಮರ್‍ ಗೆ ಕೊಂಚ ಡ್ಯಾಮೆಜ್ ಆಗಿದೆ ಎಂಬ ವಿಮರ್ಶೆಗಳೂ ಸಹ ಕೇಳಿಬರುತ್ತಿವೆ.

ಇನ್ನೂ ಕಾಜಲ್ ಅಗರ್ವಾಲ್ ಕಠಿಣ ವ್ಯಾಯಾಮಾ, ಡೈಯಟ್ ಮೂಲಕ ಸಣ್ಣ ಆಗಿದ್ದಾರೆ. ಕಳೆದ ವರ್ಷ ಆಕೆ ಗಂಡು ಮಗುವಿಗೆ ಜನ್ಮ ಕೊಟ್ಟರು. ಮಗು ಆದ ಬಳಿಕ ಸಾಮಾನ್ಯವಾಗಿ ಮಹಿಳೆಯರು ದಪ್ಪ ಆಗುತ್ತಾರೆ. ಅದೇ ಸಮಸ್ಯೆ ಸಹ ಕಾಜಲ್ ಎದುರಿಸಿದ್ದರು. ಸಿನೆಮಾಗಳಿಗಾಗಿ ಆಕೆ ಮತ್ತೆ ಸಣ್ಣ ಆಗಿದ್ದಾರೆ. ಇನ್ನೂ ಆಕೆ ಸಣ್ಣ ಆದ ವಿಚಾರವನ್ನು ವಿಮರ್ಶೆಗಳನ್ನು ಮಾಡುತ್ತಿದ್ದರೇ, ಕೆಲವರು ಮಾತ್ರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಜೋರು ತೋರಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಸದ್ಯ ಕಾಜಲ್ ಸ್ಟಾರ್‍ ಡೈರೆಕ್ಟರ್‍ ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಇಂಡಿಯನ್-2 ಸಿನೆಮಾದಲ್ಲಿ ಮೈಯನ್ ಹಿರೋಯಿನ್ ಆಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಬಾಲಕೃಷ್ಣರವರ NBK108 ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ಪತಿಯ ವ್ಯಾಪಾರದಲ್ಲೂ ಸಹ ಸಹಾಯ ಮಾಡುತ್ತಿದ್ದಾರೆ. ಗೌತಮ್ ಕಿಚ್ಲು ರವರ ಪ್ರಾಡಕ್ಟ್ ಗಳ ಬಗ್ಗೆ ಪ್ರಚಾರ ಮಾಡುತ್ತಿರುತ್ತಾರೆ. ಸಿನೆಮಾಗಳು ಹಾಗೂ ವೈಯುಕ್ತಿಕ ಜೀವನ ಎರಡನ್ನೂ ಸಮರೋಪಾದಿಯಲ್ಲಿ ಸಾಗಿಸುತ್ತಿದ್ದಾರೆ.